ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕತಾರ್ : ಬೆಂಕಿಯ ಆರ್ಭಟಕ್ಕೆ13 ಮಕ್ಕಳು ಬಲಿ

By Mahesh
|
Google Oneindia Kannada News

Qatar Fire Accident Villaggio
ದೋಹಾ, ಮೇ.29: ಇಲ್ಲಿನ ಅತ್ಯಂತ ದೊಡ್ಡ ಶಾಪಿಂಗ್ ಮಾಲ್ ನಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ ಸುಮಾರು 13 ಜನ ಮಕ್ಕಳು ಸೇರಿದಂತೆ 19 ಜನ ದಾರುಣ ಸಾವನ್ನಪ್ಪಿದ್ದಾರೆ ಎಂದು ಕತಾರ್ ನ ಆಂತರಿಕ ಸಚಿವಾಲಯ ಪ್ರಕಟಿಸಿದೆ.

ದೋಹಾದಲ್ಲಿರುವ ಅತ್ಯಂತ ವಿಸ್ತೃತವಾದ ಮಾಲ್ ಆದ ವಿಲ್ಲಾಜಿಯೊನಲ್ಲಿ ನಡೆದ ಈ ದುರಂತದಲ್ಲಿ ಕೆಲ ಮಕ್ಕಳು ಬೆಂಕಿಯ ನಾಲಗೆಗೆ ಸಿಕ್ಕು ಸಾವನ್ನಪ್ಪಿದ್ದು, ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ ಎಂದು ಅಂತರಿಕ ಸಚಿವ ಶೇಕ್ ಅಬ್ದುಲ್ಲಾ ಬಿನ್ ನಸೀಲ್ ಅಲ್ ಥಾನಿ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

2 ವರ್ಷ ವಯಸ್ಸಿನ ತ್ರಿವಳಿಗಳಾದ ಲಿಲ್ಲಿ, ಜಾಕ್ಸನ್ ಹಾಗೂ ವಿಲ್ಶೇರ್ ವೀಕೆಸ್ ಸಾವಿನ ಜೊತೆಗೆ ನಾಲ್ವರು ಸ್ಪಾನಿಷ್ ಮಕ್ಕಳು ಹಾಗೂ 3 ವರ್ಷದ ಫ್ರೆಂಚ್ ಮೂಲದ ಮಗು ಕೂಡಾ ಸಾವನ್ನಪ್ಪಿರುವುದು ದೃಢಪಟ್ಟಿದೆ. ಮಾಲ್ ಒಳ ಭಾಗದಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದ್ದರಿಂದ ಸಾರ್ವಜನಿಕರು ಸುರಕ್ಷಿತವಾಗಿ ಹೊರ ಬರಲು ಸಾಧ್ಯವಾಗಲಿಲ್ಲ.

ಮೃತರಲ್ಲಿ ನಾಲ್ಕು ಜನ ಶಿಕ್ಷಕರು ಹಾಗೂ 2 ಸರ್ಕಾರಿ ಅಧಿಕಾರಿಗಳು ಇದ್ದಾರೆ. ಸುಮಾರು 17ಕ್ಕೂ ಅಧಿಕ ಮಂದಿಗೆ ಗಾಯಗಳಾಗಿದೆ.

ಮೃತರಲ್ಲಿ ಸ್ಪೇನ್, ಜಪಾನ್, ಫಿಲಿಫೈನ್ಸ್ ಹಾಗೂ ಬೆನಿನ್ ಮೂಲದ ಮಕ್ಕಳು ಎಂದು ತಿಳಿದು ಬಂದಿದೆ. ವಿಲ್ಲಾಜಿಯೋ ಶಾಪಿಂಗ್ ಮಾಲ್ ನ 3 ಹಾಗೂ 4ನೇ ಗೇಟ್ ನ ಬೆಂಕಿ ಕಾಣಿಸಿಕೊಂಡಿತು. ಬೆಂಕಿಗಿಂತ ಹೆಚ್ಚಾಗಿ ದಟ್ಟವಾದ ಹೊಗೆ ಆವರಿಸಿದ್ದರಿಂದ ಮಾಲ್ ನಿಂದ ಹೊರ ಬೀಳಲು ಸಾಧ್ಯವಾಗದೆ ಅನೇಕರ ಸಾವು ಸಂಭವಿಸಿದೆ ಎಂದು ತಿಳಿದು ಬಂದಿದೆ.

ಜಾಗತಿಕವಾಗಿ ಇಂಧನ ಮಾರುಕಟ್ಟೆಯಲ್ಲಿ ಅಗ್ರಗಣ್ಯ ಸ್ಥಾನ ಹೊಂದಿರುವ ಕತಾರ್ ಶ್ರೀಮಂತ ರಾಷ್ಟ್ರವಾಗಿದೆ. ವಿಲ್ಲಾಜಿಯೋ ಮಾಲ್ 2006ರಲ್ಲಿ ನಿರ್ಮಿಸಲಾಯಿತು. ದೋಹಾದ ಅತ್ಯಂತ ಜನಪ್ರಿಯ ತಾಣಗಳಲ್ಲಿ ವಿಲ್ಲಾಜಿಯೋ ಶಾಪಿಂಗ್ ಮಾಲ್ ಕೂಡಾ ಒಂದು. ರಿಟೈಲ್ ಮಳಿಗೆಗಳು, ಫುಟ್ ಲಾಕರ್, ಪಿಜಾ ಹಟ್, ಸ್ಟಾರ್ ಬಕ್ಸ್ ಹಾಗೂ ಬ್ರಿಟಿಷ್ ಮಳಿಗೆಗಳಾದ ಮಾರ್ಕ್ಸ್ ಅಂಡ್ ಸ್ಪೆನ್ಸರ್ ಇಲ್ಲಿನ ಆಕರ್ಷಣೆಯಾಗಿದೆ.

ಗಲ್ಫ್ ರಾಷ್ಟ್ರ ಎಷ್ಟು ಸುರಕ್ಷಿತ?: 2022 ರ ಫುಟ್ಬಾಲ್ ವಿಶ್ವಕಪ್ ಆಯೋಜನೆಯ ಹೊಣೆ ಹೊತ್ತಿರುವ ಕತಾರ್ ದೇಶಕ್ಕೆ ಈ ಅಗ್ನಿ ದುರಂತ ಹಿನ್ನೆಡೆಯಾಗುವ ಸಾಧ್ಯತೆಯಿದೆ. ಮಾಲ್ ಗಳ ಸುರಕ್ಷಿತೆ ಬಗ್ಗೆ ಎಷ್ಟೇ ಗಮನ ಹರಿಸಿದರೂ ಮಂಗಳವಾರ ಕೂಡಾ ದೋಹಾದ ಎರಡು ಕಾಲೇಜುಗಳಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದ ವರದಿಯಾಗಿದೆ.

ಸಾಮಾನ್ಯವಾಗಿ ಗಲ್ಫ್ ರಾಷ್ಟ್ರಗಳಲ್ಲಿ ಅಗ್ನಿ ಆಕಸ್ಮಿಕ ಕಡಿಮೆ ಎನ್ನಬಹುದು. ರಕ್ಷಣಾ ಸಚಿವಾಲಯದ ಇತ್ತೀಚೆಗೆ ತನ್ನ ನಾಗರೀಕರಿಗೆ ಸಂದೇಶವನ್ನು ಕಳಿಸಿದ್ದು, ಕಾರು ಹೊಂದಿರುವವರು ಫುಲ್ ಟ್ಯಾಂಕ್ ಇಂಧನ ಭರಿಸದಿರುವಂತೆ ವಿನಂತಿಸಿಕೊಂಡಿದೆ. ಮೇ ನಲ್ಲಿ 55 ಡಿಗ್ರಿ ಸೆ. ನಿಂದ 65 ಡಿ.ಸೆ ತನಕ ತಾಪಮಾನದಲ್ಲಿ ಏರಿಕೆಯಾಗುವುದರಿಂದ ಪೆಟ್ರೋಲ್ ತುಂಬಿದ ಟ್ಯಾಂಕ್ ಹೊಂದಿದ್ದರೆ ಬೆಂಕಿ ತಗುಲುವ ಅಪಾಯವಿರುತ್ತದೆ ಎಂದು ಎಲ್ಲರಿಗೂ ಮೆಸೇಜ್ ಕಳಿಸಲಾಗಿದೆ.

ಕತಾರ್ ಗಾಂಧಿ ಲಿಂಕ್: ಭಾರತ ಮೂಲದ ಕಲಾವಿದ ಸುಬೋಧ್ ಗುಪ್ತ ಅವರು ಗಾಂಧೀಜಿ ಅವರ ಅಹಿಂಸಾ ತತ್ತ್ವ ಸಾರುವ ಮೂರು ಕೋತಿಗಳ ಪ್ರತಿಕೃತಿಯನ್ನು ದೋಹಾದ ಸಾಂಸ್ಕೃತಿಕ ಗ್ರಾಮದಲ್ಲಿ ಮಂಗಳವಾರ(ಮೇ.29) ಸ್ಥಾಪಿಸಲಾಯಿತು. 'ಕೆಟ್ಟದ್ದನ್ನು ನೋಡಬೇಡ, ಕೆಟ್ಟದ್ದನ್ನು ಕೇಳಬೇಡ ಹಾಗೂ ಕೆಟ್ಟದ್ದನ್ನು ಮಾತಾಡಬೇಡ' ಎಂಬ ಸಂದೇಶವನ್ನು ಈ ಮೂರು ಕೋತಿಗಳು ಸಾರುತ್ತದೆ.

English summary
(AP) Qatar's Interior Ministry said 13 children were among 19 people killed in a fire that broke out in one of the country's fanciest shopping malls this morning, raising questions about building safety in the booming Gulf state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X