ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಎನ್‌ಎ ಟೆಸ್ಟ್: ಕೊನೆಗೂ ತಿವಾರಿ 'ರಕ್ತದಾನ'

By Srinath
|
Google Oneindia Kannada News

nd-tivari-at-last-gives-blood-for-dna-test
ಡೆಹ್ರಾಡೂನ್, ಮೇ 29: ಪಿತೃತ್ವ ವಿವಾದ ಸಂಬಂಧ ಡಿಎನ್‌ಎ ಟೆಸ್ಟ್ ಮಾಡಿಸಿಕೊಳ್ಳುವುದಿಲ್ಲ ಎಂದು ಹಠ ಹಿಡಿದಿದ್ದ ಕಾಂಗ್ರೆಸ್‌ ಪಕ್ಷದ ವಯೋವೃದ್ಧ ಮುಖಂಡ ಎನ್ ಡಿ ತಿವಾರಿ ಅವರು ಡಿಎನ್‌ಎ ಪರೀಕ್ಷೆಗಾಗಿ ಮಂಗಳವಾರ ತಮ್ಮ ರಕ್ತದ ಮಾದರಿ ನೀಡಿ ಕೃತಾರ್ಥರಾಗಿದ್ದಾರೆ. ಪರೀಕ್ಷೆಯ ಫಲಿತಾಂಶಕ್ಕಾಗಿ ಇಡೀ ದೇಶ ಈಗ ಕಾಯುವಂತಾಗಿದೆ.

ಅಂದಹಾಗೆ, ತಿವಾರಿಯೇ ತನ್ನ ತಂದೆ ಎಂದು ಕೋರ್ಟ್ ಮೊರೆಹೋಗಿರುವ 32 ವರ್ಷದ ರೋಹಿತ್ ಶೇಖರ್ ಮತ್ತು ಆತನ ತಾಯಿ ಉಜ್ವಲ ಶರ್ಮಾ ಅವರು ಈಗಾಗಲೇ ತಮ್ಮ ರಕ್ತದ ಮಾದರಿಗಳನ್ನು ಕೋರ್ಟಿಗೆ ಸಲ್ಲಿಸಿದ್ದಾರೆ.

ಡೆಹ್ರಾಡೂನಿನಲ್ಲಿರುವ ತಮ್ಮ ನಿವಾಸದಲ್ಲಿ ಜಿಲ್ಲಾ ನ್ಯಾಯಾಧೀಶ ರಾಜ್ ಕೃಷ್ಣಾ, ಜಿಲ್ಲಾ ಸಿವಿಲ್ ಸರ್ಜನ್ ಬಿ ಸಿ ಪಾಠಕ್, ದೆಹಲಿ ಹೈಕೋರ್ಟ್‌ನ ಜಂಟಿ ರಿಜಿಸ್ಟ್ರಾರ್ ಹಾಗೂ ಮತ್ತಿತರೆ ವೈದ್ಯರ ತಂಡದ ಮುಂದೆ ತಿವಾರಿ ರಕ್ತದ ಮಾದರಿ ನೀಡಿದರು. ಈ ಸಂದರ್ಭದಲ್ಲಿ, ಅರ್ಜಿದಾರ ರೋಹಿತ್ ಶೇಖರ್ ಮತ್ತು ಆತನ ತಾಯಿ ಉಜ್ವಲ ಶರ್ಮಾ ಅವರು ಸಹ ಉಪಸ್ಥಿತರಿದ್ದರು.

ಮೇ 29ರೊಳಗಾಗಿ ರಕ್ತದ ಮಾದರಿ ನೀಡಬೇಕೆಂದು ಸುಪ್ರೀಂಕೋರ್ಟ್ ಗಡುವು ವಿಧಿಸಿತ್ತು. ಈ ರಕ್ತದ ಮಾದರಿಯನ್ನು ಡಿಎನ್‌ಎ ಪರೀಕ್ಷೆಗಾಗಿ ಹೈದರಾಬಾದ್‌ನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಗೋಪ್ಯವಾಗಿ ಕಳುಹಿಸಬೇಕು ಎಂದು ಕೋರ್ಟ್ ಸೂಚಿಸಿದೆ.

English summary
Acting on the Supreme Court's directive, veteran Congress leader N D Tiwari on Tuesday gave his blood sample in connection with the paternity suit filed by a 32-year-old Rohit Shekhar claiming to be his biological son.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X