ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೋಸಿಸ್ ಬಿಪಿಒ ಸಿಒಒ ಹುದ್ದೆಗೆ ರಿತೇಶ್ ರಾಜೀನಾಮೆ

By Mahesh
|
Google Oneindia Kannada News

Infosys BPO COO Ritesh Idnani resigns
ಬೆಂಗಳೂರು, ಮೇ.29: ಇನ್ಫೋಸಿಸ್ ಸಂಸ್ಥೆಯ ಹೊರಗುತ್ತಿಗೆ ವಿಭಾಗದ ಮುಖ್ಯಸ್ಥ ರಿತೇಶ್ ಇದ್ನಾನಿ ಅವರು ತಮ್ಮ ಸಿಒಒ ಹುದ್ದೆಗೆ ಮಂಗಳವಾರ (ಮೇ.29) ರಾಜೀನಾಮೆ ನೀಡಿದ್ದಾರೆ. ಇದ್ನಾನಿ ಅವರ ರಾಜೀನಾಮೆ ಸುದ್ದಿಯನ್ನು ಇನ್ಫೋಸಿಸ್ ನ ವಕ್ತಾರರು ದೃಢಪಡಿಸಿದ್ದಾರೆ.

1999ರಲ್ಲಿ ಇನ್ಫೋಸಿಸ್ ಸೇರಿದ್ದ ರಿತೇಶ್, ಕಳೆದ 13 ವರ್ಷಗಳಿಂದ ಇನ್ಫೋಸಿಸ್ ನ ಅವಿಭಾಜ್ಯ ಅಂಗವಾಗಿ ಬೆಳೆದಿದ್ದರು. 2005ರಲ್ಲಿ 43 ಮಿಲಿಯನ್ ಡಾಲರ್ ಮೌಲ್ಯ ಹೊಂದಿದ್ದ ಇನ್ಫೋಸಿಸ್ ಬಿಪಿಒ ಉದ್ಯಮವನ್ನು 2009ರ ಹೊತ್ತಿಗೆ 316 ಮಿಲಿಯನ್ ಡಾಲರ್ ಮೌಲ್ಯದ ಉದ್ಯಮವನ್ನಾಗಿಸಿದ ಕೀರ್ತಿ ರಿತೇಶ್ ಗೆ ಸಲ್ಲುತ್ತದೆ.

ಬೆಂಗಳೂರು ಮೂಲದ ಇನ್ಫೋಸಿಸ್ ಸಂಸ್ಥೆ ಆರ್ಥಿಕ ಸಂಕಷ್ಟದಿಂದ ಚೇತರಿಸಿಕೊಳ್ಳಲು ಆಗದೆ ತೊಂದರೆ ಅನುಭವಿಸುತ್ತಿರುವ ಸಂದರ್ಭದಲ್ಲೇ ಪ್ರಮುಖ ಅಧಿಕಾರಿಯೊಬ್ಬರನ್ನು ಕಳೆದುಕೊಂಡಿದೆ.

ರಿತೇಶ್ ಅವರು ಹೊರ ನಡೆದ ನಂತರ ಮೇಲ್ಪಂಕ್ತಿಯಲ್ಲಿರುವ ಅನೇಕ ಅಧಿಕಾರಿಗಳು ತಮ್ಮ ಸ್ಥಾನವನ್ನು ತೊರೆಯಲಿದ್ದಾರೆ ಎಂಬ ಸುದ್ದಿ ಕೂಡಾ ಐಟಿ ವಲಯದಲ್ಲಿ ಹಬ್ಬಿದೆ. 2012ರ ಆರ್ಥಿಕ ವರ್ಷದಲ್ಲಿ ಇನ್ಫೋಸಿಸ್ ಶೇ 8 ರಿಂದ 11 ರಷ್ಟು ಪ್ರಗತಿ ಕಾಣುವ ನಿರೀಕ್ಷೆ ಹೊಂದಿದೆ.

ಇನ್ಫೋಸಿಸ್ ಬಿಪಿಒ ಲಿ (ಈ ಮುಂಚೆ ಪ್ರೊಜಿಯನ್ ಎಂದು ಹೆಸರಿತ್ತು) 2011-11 ಆರ್ಥಿಕ ವರ್ಷದ ಪ್ರಕಟಣೆಯಂತೆ 426.79 ಮಿಲಿಯನ್ ಯುಎಸ್ ಡಾಲರ್ ಮೌಲ್ಯ ಹೊಂದಿದೆ. ಜಾಗತಿಕ ಮಟ್ಟದಲ್ಲಿ 12ಕ್ಕೂ ಅಧಿಕ ಕೇಂದ್ರಗಳನ್ನು ಹೊಂದಿದ್ದು 19,000ಕ್ಕೂ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. 90ಕ್ಕೂ ಅಧಿಕ ಕ್ಲೈಂಟ್ ಗಳನ್ನು ಸಂಸ್ಥೆ ಹೊಂದಿದೆ.

ಬೆಂಗಳೂರು, ಚೆನ್ನೈ, ಗುರ್ ಗಾಂವ್, ಜೈಪುರ, ಪುಣೆ, ಮಾಂಟೆರ್ರಿ (ಮೆಕ್ಸಿಕೋ), ಲೊಜ್ (ಪೋಲ್ಯಾಂಡ್), ಬ್ರಾನೊ (ಜೆಕ್ ರಿಪಬ್ಲಿಕ್), ಪ್ರೇಗ್ ( ಜೆಕ್ ರಿಪಬ್ಲಿಕ್), ಅಟ್ಲಾಂಟಾ (ಅಮೆರಿಕ), ಹ್ಯಾಂಗ್ ಜೋ (ಚೀನಾ), ಮನೀಲಾ (ಫಿಲಿಫೈನ್ಸ್), ಬೆಲೊ ಹಾರಿಜಾಂಟೆ (ಬ್ರೆಜಿಲ್) ನಲ್ಲಿ ಇನ್ಫೋಸಿಸ್ ತನ್ನ ಬಿಪಿಒ ಕೇಂದ್ರಗಳನ್ನು ಹೊಂದಿದೆ.

ರಿತೇಶ್ ಬಗ್ಗೆ ಒಂದಿಷ್ಟು: 1999ರಲ್ಲಿ ಇನ್ಫೋಸಿಸ್ ಅಂಗಳಕ್ಕೆ ಬಂದ ರಿತೇಶ್ ಸಂಸ್ಥೆಯ ಸರ್ವತೋಮುಖ ಬೆಳವಣಿಗೆಗೆ ಕಾರಣದವರಲ್ಲಿ ಒಬ್ಬರು. ಆರ್ಥಿಕ, ಮಾರುಕಟ್ಟೆ, ಜಾಗತಿಕ ವ್ಯವಹಾರ, ಗ್ರಾಹಕರೊಡನೆ ಸಂಪರ್ಕ, ಸಂಸ್ಥೆ ಖರ್ಚು ವೆಚ್ಚ, ಆದಾಯ ಗುರಿ ಸೇರಿದಂತೆ ಅನೇಕ ವಿಭಾಗಗಳಲ್ಲಿ ಸಾಕಷ್ಟು ಬದಲಾವಣೆ ತರುವಲ್ಲಿ ರಿತೇಶ್ ಯಶಸ್ವಿಯಾಗಿದ್ದರು.

ಬಿಪಿಒ ವ್ಯವಹರ ಹೊಣೆ ಹೊತ್ತಿಕೊಳ್ಳುವ ಮೊದಲು ರಿತೇಶ್ ಅವರು ಬ್ಯಾಂಕಿಂಗ್ ಹಾಗೂ ಕ್ಯಾಪಿಟಲ್ ಮಾರುಕಟ್ಟೆ(ಈಗ ಆರ್ಥಿಕ ನಿರ್ವಹಣೆ ಸೇವೆ) ಮುಖ್ಯಸ್ಥರಾಗಿದ್ದರು. 1999ರಲ್ಲಿ 30 ಮಿಲಿಯನ್ ಯುಎಸ್ ಡಾಲರ್ ಮೌಲ್ಯ ತೂಗುತ್ತಿದ್ದ ಈ ಘಟಕವನ್ನು 2005ರಲ್ಲಿ 500+ ಮಿಲಿಯನ್ ಯುಎಸ್ ಡಾಲರ್ ಮೌಲ್ಯಕ್ಕೆ ಏರಿಸಿದ ಸಾಧನೆ ಹಿಂದೆ ರಿತೇಶ್ ಪರಿಶ್ರಮ ಎದ್ದು ಕಾಣುತ್ತದೆ.

ಇನ್ಫೋಸಿಸ್ ಗೂ ಮುನ್ನ ಸಿಟಿ ಗ್ರೂಪ್ ಹಾಗೂ ಪ್ರೈಸ್ ವಾಟರ್ ಹೌಸ್ ಕೂಪರ್ಸ್ ನಲ್ಲಿ ರಿತೇಶ್ ಉದ್ಯೋಗಿಯಾಗಿದ್ದರು. ಎಕಾನಾಮಿಕ್ಸ್ ನಲ್ಲಿ ಪದವಿ ಹಾಗೂ ಫೈನಾನ್ಸ್ ಮತ್ತು ಮಾರುಕಟ್ಟೆ ವಿಷಯದಲ್ಲಿ ಎಂಬಿಎ ಸ್ನಾತಕೋತ್ತರ ಪದವಿ ಗಳಿಸಿರುವ ರಿತೇಶ್ ಅವರು ವಾರ್ಟನ್ ಬಿಸಿನೆಸ್ ಸ್ಕೂಲ್ ನಲ್ಲಿ ವೃತ್ತಿಪರ ಶಿಕ್ಷಣವನ್ನು ಪಡೆದಿದ್ದಾರೆ.

English summary
Infosys spokesperson confirmed the resignation of Ritesh Idnani, who has been with Infosys for the past 13 years. Idnani was chief operating officer of the business process outsourcing section of Infosys, who joined Infosys in 1999.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X