ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವ್ಯಾಟ್ ಕಡಿತ : ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಇಳಿಕೆ

By Prasad
|
Google Oneindia Kannada News

Sheila Dixit, Delhi CM reduces VAT on petrol
ನವದೆಹಲಿ, ಮೇ. 28 : ದೆಹಲಿಯಲ್ಲಿನ ನಾಗರಿಕರಿಗೆ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಸಂತಸದ ಸುದ್ದಿ ನೀಡಿದ್ದಾರೆ. ಪೆಟ್ರೋಲ್ ಮೇಲಿನ ಮೌಲ್ಯವರ್ಧಿತ ತೆರಿಗೆ(ವ್ಯಾಟ್)ಯನ್ನು ಶೇ.20ರಷ್ಟು ಕಡಿತ ಮಾಡಿದ್ದಾರೆ. ಇದರಿಂದ ಪೆಟ್ರೋಲ್ ಬೆಲೆ ಲೀಟರಿಗೆ ರು.1.36ನಷ್ಟು ಕಡಿಮೆಯಾಗಲಿದೆ.

ಪ್ರಸ್ತುತ ಪೆಟ್ರೋಲ್ ಬೆಲೆ ಲೀಟಲಿರಿಗೆ ರು.73.19 ಇದೆ. ವ್ಯಾಟ್ ಕಡಿತದಿಂದಾಗಿ ಗ್ರಾಹಕರಿಗೆ ಪೆಟ್ರೋಲ್ ಲೀಟರಿಗೆ ರು.71.80ಕ್ಕೆ ದೊರೆಯಲಿದೆ. ಪೆಟ್ರೋಲ್ ಬೆಲೆ ದೀಢೀರನೆ ಏರಿಸಿದ ಮೇಲೆ ಆಕ್ರೋಶಗೊಂಡಿದ್ದ ನಾಗರಿಕರ ಮೇಲಿನ ಭಾರವನ್ನು ಈ ಬೆಲೆ ಕಡಿತ ಸ್ವಲ್ಪವಾದರೂ ತಗ್ಗಿಸಲಿದೆ.

ಖಾಸಗಿ ತೈಲ ಕಂಪನಿಗಳು ಮೇ 23ರಂದು ಲೀಟರಿಗೆ ರು.7.54 ಬೆಲೆ ಏರಿಸಿ ಗ್ರಾಹಕರಿಗೆ ಭಾರೀ ಹೊಡೆತ ನೀಡಿತ್ತು. ನಂತರ ಕೇರಳ ಸರಕಾರ ಪೆಟ್ರೋಲ್ ಮೇಲಿನ ತೆರಿಗೆ ಇಳಿಸಿ ಮೊದಲ ದಿಟ್ಟ ಹೆಜ್ಜೆಯನ್ನು ಇಟ್ಟಿತ್ತು. ಈಗ ಕೇರಳ ಸರಕಾರದ ದಾರಿಯಲ್ಲಿ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ಸರಕಾರ ಕೂಡ ಅಡಿಯಿಟ್ಟಿದೆ.

ಇಡೀ ದೇಶದಲ್ಲಿ ಅತಿ ಹೆಚ್ಚು ವ್ಯಾಟ್ ವಿಧಿಸುತ್ತಿರುವ ಕರ್ನಾಟಕದ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು ಮಾತ್ರ ಇಲ್ಲಿಯವರೆಗೆ ತೆರಿಗೆ ಇಳಿಸಿ ಪೆಟ್ರೋಲ್ ದರ ಕಡಿಮೆ ಮಾಡುವ ಯಾವ ನಿರ್ಧಾರವನ್ನೂ ಪ್ರಕಟಿಸಿಲ್ಲ. ಕರ್ನಾಟಕದಲ್ಲಿ ವ್ಯಾಟ್ ಜೊತೆ ಪ್ರವೇಶ ತೆರಿಗೆ ಸೇರಿ ಶೇ.30ರಷ್ಟು ತೆರಿಗೆ ಗ್ರಾಹಕರ ಮೇಲೇ ಹೊರಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರಿಗೆ ರು.81.26. ಇದು ರಾಜ್ಯಕ್ಕೆ ಸಾಕಷ್ಟು ಆದಾಯ ಕೂಡ ತರುತ್ತಿರುವುದರಿಂದ ಮುಖ್ಯಮಂತ್ರಿಗಳು ಯಾವುದೇ ನಿರ್ಧಾರ ತೆಗೆದುಕೊಳ್ಳಲು ಹಿಂಜರಿಯುತ್ತಿದ್ದಾರೆ.

ಡೀಸೆಲ್, ಎಲ್‌ಪಿಜಿ ದರ ಏರಿಕೆ ಸದ್ಯಕ್ಕಿಲ್ಲ : ಪೆಟ್ರೋಲ್ ಬೆಲೆ ಏರಿಕೆ ಮತ್ತು ರುಪಾಯಿ ಮೌಲ್ಯ ಕುಸಿತದಿಂದಾಗಿ ದಿಕ್ಕೆಟ್ಟಿರುವ ಕೇಂದ್ರ ಸರಕಾರ ಹಣದುಬ್ಬರ ಹತ್ತಿಕ್ಕಲು ಸದ್ಯಕ್ಕೆ ಡೀಸೆಲ್, ಗೃಹ ಬಳಕೆಯ ಎಲ್ ಪಿಜಿ ಮತ್ತು ಸೀಮೆಎಣ್ಣೆ ದರವನ್ನು ಎರಿಸಲು ಚಿಂತಿಸುತ್ತಿಲ್ಲ ಎಂದು ಪೆಟ್ರೋಲಿಯಂ ಖಾತೆಯ ಸಚಿವ ಜೈಪಾಲ್ ರೆಡ್ಡಿ ಸೋಮವಾರ ತಿಳಿಸಿದ್ದಾರೆ.

English summary
Delhi chief minister Sheila Dixit has taken bold step by reducing Value Added Tax (VAT) on petrol by 20%, thereby reducing petrol price by Rs.1.36 per liter. Will Karnataka chief minister follow in the same path and reduce VAT on petrol?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X