ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೆಳೆಯನ ಜತೆ ಓಡಿಹೋದ ವಿವಾಹಿತ ಶಾಸಕಿ

By Srinath
|
Google Oneindia Kannada News

assam-congress-mla-elopes-with-facebook-friend
ಗುವಾಹಟಿ, ಮೇ 27: ಯಾಕೋ ಫೇಸ್ ಬುಕ್ ಅವಾಂತರಗಳು ದಿನೇ ದಿನೆ ಹೆಚ್ಚಾಗುತ್ತಿವೆ. ಪಕ್ಕಾ ಸಿನಿಮಾ ಶೈಲಿಯ ಈ ಫೇಸ್ ಬುಕ್ ಪ್ರೇಮ ಕಥೆಗೆ ಜನಪ್ರತಿನಿಧಿಯೇ ಕಥಾನಾಯಕಿ. ದುರಂತವೆಂದರೆ (?) ಈಕೆ ವಿವಾಹಿತೆಯಾಗಿದ್ದು, 2 ವರ್ಷದ ಮಗಳಿದ್ದಾಳೆ. ಆದರೂ ತನ್ನ Facebook ಗೆಳೆಯನ ಜತೆ ಓಡಿಹೋಗಿ ಮದುವೆಯಾಗಿದ್ದಾಳೆ. ಅಷ್ಟೇ ಅಲ್ಲ ಅದಕ್ಕಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರವೂ ಆಗಿದ್ದಾರೆ.

ಯಾರಪ್ಪಾ ಆ ಮಹಾಪ್ರೇಮಿ ಅಂದಿರಾ!? ಅವರೇ ರೂಮೀ ನಾಥ್ ಎಂಬ 32 ವರ್ಷದ ಶಾಸಕಿ ಯಾನೆ ಪ್ರೇಮಿ ಯಾನೆ ಮುದ್ದಾದ ಮಗುವೊಂದರ ಹೆತ್ತಮ್ಮ. ಯಾನೆ ಪ್ರಿಯಕರನಿಗಾಗಿ ಗಂಡ, ಮಗುವನ್ನು ಬಿಟ್ಟು ಕಳೆದ ಮಂಗಳವಾರ ಪರಾರಿಯಾಗಿರುವ ಜನಪ್ರತಿನಿಧಿ.

ಅಂದಹಾಗೆ ಇವರು ಪ್ರತಿನಿಧಿಸುತ್ತಿರುವುದು ಬಾರ್ಕೋಲಾ ವಿಧಾನಸಭಾ ಕ್ಷೇತ್ರವನ್ನು. ಮೂಲತಃ ಬಿಜೆಪಿ ಪಕ್ಷದವರಾದ ರೂಮೀ ಇದೀಗ ಕಾಂಗ್ರೆಸ್ ಶಾಸಕಿಯಾಗಿದ್ದಾರೆ.

ಅಷ್ಟಕ್ಕೂ ಈಕೆ ಓಡಿಹೋಗಿರುವುದು ಜಾಕಿ ಝಕೀರ್ ಎಂಬ ಸರಕಾರಿ ಉದ್ಯೋಗಿಯನ್ನು. ಓಡಿಹೋಗಿರುವುದು ಪಕ್ಕದ ಬಾಂಗ್ಲಾದೇಶಕ್ಕೆ. ತನ್ನ ಹೆಂಡತಿಯ ಅಪಹರಣವಾಗಿದೆ ಎಂದು ರೂಮಿಯ ಮೊದಲ ಪತಿ ರಾಕೇಶ್ ಸಿಂಗ್ ಅವರು ಮುಖ್ಯಮಂತ್ರಿ ತರುಣ್ ಗೊಗೋಯ್ ಗೆ ಅಲವತ್ತುಕೊಂಡಿದ್ದಾರೆ. ಪೊಲೀಸರು ಈಗ ಈ ಯುವ ಜೋಡಿಯ ಬೆನ್ನುಹತ್ತಿದ್ದಾರೆ.

ದೀರ್ಘ ಕಾಲದ ಗೆಳೆಯ ಜಾಕಿ ಜತೆ ಮದುವೆಯಾಗಲಯು ಈಕೆ ಭರ್ಜರಿ ತಯಾರಿಯನ್ನೇ ನಡೆಸಿದ್ದಾಳೆ. ಒಂದು ತಿಂಗಳ ಹಿಂದೆಯೇ ಜಾಕಿಗೋಸ್ಕರ ಇಸ್ಲಾಂ ಮತಕ್ಕೆ convert ಸಹ ಆಗಿದ್ದಾಳೆ. ಅಸ್ಸಾಂನ ರಾಜ್ಯ ಸಚಿವ ಸಿದ್ದಿಕಿ ಅಹ್ಮದ್ ನೂತನ ದಂಪತಿಯನ್ನು ಹರಿಸಿರುವುದಾಗಿ ಹೇಳಿ ರೂಮೀ ನಾಥ್, ಮದುವೆ ವಿಡಿಯೋವನ್ನು ಮಾಧ್ಯಮಗಳಿಗೆ ತಲುಪಿಸಿದ್ದಾಳೆ.

English summary
An Assam MLA, Rumee Nath (32), who is married and has a two-year-old daughter, has been eloped with Jacky Zakir, a government employee, even as the police are searching for them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X