ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೊಂದು ಭೂ ಹಗರಣದಲ್ಲಿ ಬಿಎಸ್ ವೈ, ಸೋಮಣ್ಣ

By Mahesh
|
Google Oneindia Kannada News

Somanna and BS Yeddyurappa
ಬೆಂಗಳೂರು, ಮೇ.25: ಮತ್ತೊಂದು ಭೂ ಡಿನೋಟಿಫಿಕೇಷನ್ ಅವ್ಯವಹಾರದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ವಸತಿ ಸಚಿವ ವಿ.ಸೋಮಣ್ಣ ಅವರ ಹೆಸರು ಕಾಣಿಸಿಕೊಂಡಿದೆ. ವಕೀಲ ಯೋಗೇಶ್ ಎಂಬುವರು ಗುರುವಾರ(ಮೇ.24) ಲೋಕಾಯುಕ್ತ ಕೋರ್ಟಿಗೆ ದೂರು ಸಲ್ಲಿಸಿದ್ದಾರೆ.

ದೂರನ್ನು ವಿಚಾರಣೆಗೆ ಅಂಗೀಕರಿಸಬೇಕೆ? ಲೋಕಾಯುಕ್ತ ಪೊಲೀಸ್ ತನಿಖೆಗೆ ಆದೇಶಿಸಬೇಕೇ? ಎಂಬುದರ ಬಗ್ಗೆ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಅವರು ಮೇ. 29ರಂದು ಆದೇಶ ಹೊರಡಿಸಲಿದ್ದಾರೆ.

ಏನಿದು ಪ್ರಕರಣ?: ಜ್ಞಾನಭಾರತಿ ಬಡಾವಣೆ ನಿರ್ಮಾಣಕ್ಕಾಗಿ ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೆಂಗೇರಿ ಹೋಬಳಿಯ ನಾಗದೇವನಹಳ್ಳಿ ಬಳಿ ಸ್ವಾಧೀನ ಪಡಿಸಿಕೊಂಡಿದ್ದ ಜಮೀನನ್ನು ಕಾನೂನು ಬಾಹಿರವಾಗಿ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವ ಆರೋಪ ಇದಾಗಿದೆ. ಇದಕ್ಕೆ ಸಂಬಂಧಿಸಿದಂತೆ ವಕೀಲ ಎಚ್.ಯೋಗೇಂದ್ರ ಅವರು ಲೋಕಾಯುಕ್ತ ವಿಶೇಷ ಕೋರ್ಟ್‌ನಲ್ಲಿ ಖಾಸಗಿ ದೂರು ದಾಖಲು ಮಾಡಿದ್ದಾರೆ.

ಸರ್ವೇ ನಂ.77ರಲ್ಲಿನ ಸುಮಾರು 33 ಗುಂಟೆ(1 ಗುಂಟೆ =1/40 1 ಎಕರೆ) ಜಮೀನಿಗೆ ದೇವೇಗೌಡ ಎಂಬುವರು ಮಾಲೀಕರಾಗಿದ್ದರು.

ಇದನ್ನು ಬಡಾವಣೆ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡು 2010ರಲ್ಲಿ ಬಿಡಿಎ ಅಂತಿಮ ಅಧಿಸೂಚನೆ ಹೊರಡಿಸಿದೆ. ಮಾಲೀಕರಿಗೆ ಪರಿಹಾರ ಕೂಡ ನೀಡಲಾಗಿದೆ. ಆದರೆ ಈ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವಂತೆ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರಲ್ಲಿ ದೇವೇಗೌಡರ ಪತ್ನಿ ಲಿಂಗಮ್ಮ ಕೋರಿಕೊಂಡರು.

ಜಮೀನನ್ನು ಸ್ವಾಧೀನ ಪಡಿಸಿಕೊಂಡಿರುವ ಸತ್ಯಾಂಶ ತಿಳಿದಿದ್ದರೂ ಯಡಿಯೂರಪ್ಪನವರು ಇದನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲು ಆದೇಶಿಸಿದರು. ನಂತರ ಈ ಜಮೀನನ್ನು ಸೋಮಣ್ಣ ಕುಟುಂಬದ ಒಡೆತನದ ವಿಎಸ್‌ಎಸ್ ಎಜುಕೇಷನ್ ಟ್ರಸ್ಟ್‌ಗೆ ಮಾರಾಟ ಮಾಡಲಾಗಿದೆ ಎಂದು ಯೋಗೇಂದ್ರ ಆರೋಪಿಸಿದ್ದಾರೆ. ಈ ದೂರಿನಲ್ಲಿ ಸೋಮಣ್ಣ ಅವರ ಪತ್ನಿ ಶೈಲಜಾ ಹಾಗೂ ಪುತ್ರ ಬಿಎಸ್.ನವೀನ್ ಅವರನ್ನೂ ಆರೋಪಿಯನ್ನಾಗಿಸಲಾಗಿದೆ.

English summary
An advocate H Yogendra filed a fresh complaint against former CM BS Yeddyurappa and minister for housing V Somanna and others before the Lokayukta special court on Thursday(May.24). Lokayukta court judge NK Sundhindra Rao posted the complaint to May 29 for orders on whether to order probe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X