ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜೀವ್ ಹಂತಕರ ಪ್ಲಸ್2 ಫಲಿತಾಂಶ ಔಟ್

By Mahesh
|
Google Oneindia Kannada News

Rajiv killers come out with flying colours in Class XII exams
ವೆಲ್ಲೂರು, ಮೇ.23: ಪೆರರಿವಳನ್ ಹಾಗೂ ಮುರುಗನ್ ಎಂಬ 40 ಪ್ಲಸ್ ವಿದ್ಯಾರ್ಥಿಗಳು ಪ್ಲಸ್ 2 ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದಾರೆ. ಇದರಲ್ಲಿ ಏನು ವಿಶೇಷ ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದರೆ ಪ್ಲಸ್ 2 ವಿದ್ಯಾರ್ಥಿಗಳು ಕಥೆ ವೆಲ್ಲೂರಿನ ಜೈಲಿನಿಂದ ಡೆಲ್ಲಿಯ ನಂ.10 ಜನಪಥ್ ನಿವಾಸದ ತನಕ ಹರಡಿಕೊಳ್ಳುತ್ತದೆ.

ಮೊದಲಿಗೆ ಇಬ್ಬರ ಮಾರ್ಕ್ಸ್ ಕಾರ್ಡ್ ನೋಡಿ ನಂತರ ಅವರ ಬಗ್ಗೆ ತಿಳಿಯೋಣ..ಇದರ ಜೊತೆಗೆ ಮುರುಗನ್(43)ಅವರು 1200 ಅಂಕಗಳಿಗೆ 983 ಅಂಕಗಳಿಸಿದ್ದರೆ, ಪೆರರಿವಳನ್(41)ಅವರು 1096 ಅಂಕ ಗಳಿಸಿದ್ದಾರೆ.

ಕ್ಲಾಸ್ XII ತಮಿಳುನಾಡು ಬೋರ್ಡ್ ಪರೀಕ್ಷೆ [ಕರ್ನಾಟಕ II ಪಿಯು ಫಲಿತಾಂಶ ನೋಡಿ]ಯಲ್ಲಿ ಶೇ 91 ಹಾಗೂ ಶೇ 81 ರಷ್ಟು ಅಂಕಗಳೊಂದಿಗೆ ಈ ಇಬ್ಬರು ಭರ್ಜರಿ ಫಲಿತಾಂಶ ಹೊರ ಹಾಕಿದ್ದಾರೆ.

ಅಂದ ಹಾಗೆ ಮುರುಗನ್ ಹಾಗೂ ಪೆರರಿವಳನ್ ವೆಲ್ಲೂರಿನ ಜೈಲಿನಲ್ಲಿದ್ದಾರೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಜೈಲುವಾಸ ಅನುಭವಿಸುತ್ತಿದ್ದಾರೆ. ಪ್ರಮುಖ ಆರೋಪಿ ನಳಿನಿಯ ಪತಿ ಮುರುಗನ್ ಗೆ ಕಾಮರ್ಸ್ ವಿಷಯ ಇಷ್ಟವಂತೆ.

ಪೆರರಿವಳನ್ ತಮಿಳಿನಲ್ಲಿ 185, ಇತಿಹಾಸದಲ್ಲಿ 183 ಹಾಗೂ ಅರ್ಥಶಾಸ್ತ್ರದಲ್ಲಿ 182 ಅಂಕಗಳಿಸಿದ್ದಾರೆ.

ಮುರುಗನ್ ತಮಿಳಿನಲ್ಲಿ 173, ಇಂಗ್ಲೀಷ್ ನಲ್ಲಿ 165 ಅಂಕಗಳಿಸಿದ್ದಾರೆ. ಕಳೆದ ಮಾರ್ಚ್ ನಲ್ಲಿ ಈ ಇಬ್ಬರು ಅತಿಮುಖ್ಯ ಜೈಲುಹಕ್ಕಿಗಳ ಜೊತೆಗೆ ಇನ್ನೂ 8 ಜನ ಪರೀಕ್ಷೆ ಬರೆದಿದ್ದರು. ಎಲ್ಲರೂ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಾರೆ. ಯಾರೂ ಕಾಪಿ ಹೊಡೆದಿಲ್ಲ ಎಂದು ಜೈಲಿನ ಅಧಿಕಾರಿಗಳು ಹೇಳಿದ್ದಾರೆ.

ಸುಪ್ರೀಂಕೋರ್ಟಿನಲ್ಲಿ ಪೆರರಿವಳನ್ ಹಾಗೂ ಮುರುಗನ್ ಅವರ ಕ್ಷಮಾದಾನದ ಕೇಸ್ ಇನ್ನೂ ವಿಚಾರಣೆ ಹಂತದಲ್ಲಿದೆ. ರಾಜೀವ್ ಹತ್ಯೆಯಾಗಿ 11 ವರ್ಷದ 2011ರಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ರಲ್ಲಿ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿದ್ದ ಈ ಇಬ್ಬರು ಇನ್ನೂ ಜೈಲಿನಲ್ಲೇ ಇದ್ದಾರೆ.

ಶ್ರೀಪೆರಂಬದೂರಿನಲ್ಲಿ ಮೇ.21, 1991ರಲ್ಲಿ ಎಲ್ ಟಿಟಿಐ ಬಾಂಬರ್ ದಾಳಿಗೆ ಸಿಲುಕಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಹತ್ಯೆಯಾಗಿತ್ತು. ಮೇ.22, 2012 ರಂದು ಹತ್ಯೆ ಆರೋಪ ಹೊತ್ತ ಇಬ್ಬರು ಪ್ಲಸ್ 2 ಪರೀಕ್ಷೆಯಲ್ಲಿ ಪಾಸಾಗಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

English summary
Perarivalan and Murugan, facing the gallows in the Rajiv Gandhi assassination case and lodged at the high-security prison Vellore, have cleared the Class XII state board exams with flying colours, scoring a little over 91 per cent and 81 per cent respectively.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X