ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುರೋ ಫುಟ್ಬಾಲ್ ಗೆ ಬೆತ್ತಲೆ ಮಹಿಳೆಯರ ಭೀತಿ

By Mahesh
|
Google Oneindia Kannada News

Topless Protest women's rights group
ಕೀವ್, ಮೇ.22: ಯುರೋ 2012 ಫುಟ್ಬಾಲ್ ಟೂರ್ನಿ ಕ್ರೇಜ್ ನಲ್ಲಿ ಉಕ್ರೇನ್ ಹಾಗು ಪೊಲ್ಯಾಂಡ್ ದೇಶ ಮುಳುಗಿದೆ. ಇಡೀ ಯುರೋಪ್ ಖಂಡವೇ ಸಿಂಗಾರಗೊಂಡು ಸಂಭ್ರಮಿಸುತ್ತಿದೆ. ಆದರೆ, ಸ್ಥಳೀಯ ಮಹಿಳಾ ಸಂಘಟನೆ ಫೆಮೆನ್ ಮಾತ್ರ ಫುಟ್ಬಾಲ್ ಹಬ್ಬಕ್ಕೆ ವಿರೋಧ ವ್ಯಕ್ತಪಡಿಸಿ ಬೆತ್ತಲೆ ಪ್ರತಿಭಟನೆ ಮುಂದುವರೆಸಿದೆ.

ಫುಟ್ಬಾಲ್ ಆಟಕ್ಕೆ ನಾವು ವಿರೋಧಿಗಳಲ್ಲಿ ಆದರೆ, ಜೊತೆಗೆ ಹೆಚ್ಚಾಗುವ ಕ್ರೈಂ ರೇಟ್ ಗಳ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಫುಟ್ಬಾಲ್ ಹೆಸರಿನಲ್ಲಿ ಡ್ರಗ್ಸ್ ಮಾಫಿಯಾ, ಅಕ್ರಮ ಶಸ್ತ್ರಾಸ್ತ್ರ ಸಾಗಾಣಿಕೆ ಅಲ್ಲದೆ ಸೆಕ್ಸ್ ಟೂರಿಸಂ ಆರಂಭವಾಗುತ್ತದೆ. ದೇಶ ಸಂಸ್ಕೃತಿಗೆ ಮಾರಕವಾಗಿರುವ ಈ ಟೂರ್ನಿಗೆ ನಮ್ಮ ವಿರೋಧವಿದೆ ಎಂದು ಫೆಮೆನ್ ಸಂಘಟನೆ ಹೇಳಿಕೊಂಡಿದೆ.

ಬೆತ್ತಲೆ ದಾಳಿ: ಉಕ್ರೇನ್ ನ Dnipropetrovsk ಎಂಬಲ್ಲಿ ಪ್ರದರ್ಶನಕ್ಕೆ ಇಡಲಾಗಿರುವ 8 ಕೆಜಿ ತೂಕದ ಯುರೋ ಕಪ್ ಪ್ರತಿರೂಪದ ಬಳಿ ನಿಂತು ಪ್ರವಾಸಿಗರು, ಸ್ಥಳೀಯರು ಫೋಟೋ ತೆಗೆಸಿಕೊಂಡು ಸಂಭ್ರಮಿಸುವುದು ಮಾಮೂಲಿ. ಆದರೆ, ಫೆಮೆನ್ ಕಾರ್ಯಕರ್ತರು ಕಪ್ ಬಳಿ ನಿಂತು ಬೆತ್ತಲೆ ಪ್ರತಿಭಟನೆ ನಡೆಸುವುದನ್ನು ಕಾಯಕ ಮಾಡಿಕೊಂಡಿದ್ದಾರೆ.

ಆದರೆ, 21 ವರ್ಷದ ಇನ್ನಾ ಶೆವ್ ಚೆನ್ಕೋ ಎಂಬ ಕಾರ್ಯಕರ್ತೆ ಕಪ ಬಳಿ ನಿಂತು ತನ್ನ ಎದೆ ಮೇಲಿದ್ದ ವಸ್ತ್ರವನ್ನು ಕಿತ್ತೊಗೊದು "F**k Euro 2012" ಎಂದು ಸಂದೇಶ ಪ್ರದರ್ಶಿಸಿದ್ದಾಳೆ.

ಸಿಬ್ಬಂದಿಗಳು ಆಕೆಯನ್ನು ಅಲ್ಲಿಂದ ಪಕ್ಕಕ್ಕೆ ಕರೆದೊಯ್ದ ಮೇಲೆ ಮತ್ತೊಬ್ಬ ಕಾರ್ಯಕರ್ತೆ ತನ್ನ ಸೊಂಟದ ಕೆಳಗಿನ ವಸ್ತ್ರವನ್ನು ಕಳಚಿ ನಿಂತು ಯುರೋ ಕಪ್ ವಿರುದ್ಧ ಘೋಷಣೆ ಕೂಗಿದ್ದಾಳೆ. 46 ವರ್ಷದ ಫ್ರೆಂಚ್ ಪತ್ರಕರ್ತೆಯ ಈ ರೀತಿ ಪ್ರತಿಭಟನೆಗೆ ಇಳಿದಿರುವುದು ಫೆಮೆನ್ ಸಂಘಟನೆಗೆ ಇನ್ನಷ್ಟು ಹುಮ್ಮಸ್ಸು ಮೂಡಿಸಿದೆ.

ಜೂ.9 ರಿಂದ ಜುಲೈ 1 ರ ತನಕ ಉಕ್ರೇನ್ ಹಾಗೂ ಪೊಲ್ಯಾಂಡ್ ನಲ್ಲಿ ನಡೆಯಲಿರುವ ಯುರೋ ಕಪ್ ಫುಟ್ಬಾಲ್ 2012 [ಆಂಡ್ರ್ಯಾಡ್ App ನೋಡಿ] ಟೂರ್ನಿಯಿಂದ ಸೆಕ್ಸ್ ಟೂರಿಸಂ, ವೇಶ್ಯಾವಾಟಿಕೆ ಹೆಚ್ಚಳವಾಗುತ್ತದೆ. ಇದು ಟೂರ್ನಿ ಮುಗಿದ ಮೇಲೂ ಮುಂದುವರೆದು, ದೇಶಕ್ಕೆ ಮಾರಕವಾಗಲಿದೆ ಎಂದು ಮಹಿಳಾ ಸಂಘಟನೆ ಕಳವಳ ವ್ಯಕ್ತಪಡಿಸಿದೆ.

ದಕ್ಷಿಣ ಆಫ್ರಿಕಾದಲ್ಲಿ ನಡೆದ ಫೀಫಾ ವಿಶ್ವಕಪ್ 2010 ಸಂದರ್ಭದಲ್ಲಿ ಸೆಕ್ಸ್ ಟೂರಿಸಂ ಹೆಸರಲ್ಲಿ ಮಾನವ ಕಳ್ಳಸಾಗಣಿಕೆ, ವೇಶ್ಯಾವಟಿಕೆ ಜಾಲದ ಬಗ್ಗೆ ಯುನ್ ಒ ಕೂಡಾ ಎಚ್ಚರಿಕೆ ನೀಡಿತ್ತು. ಆದರೆ, ಯುರೋ ಕಪ್ ಬಗ್ಗೆ ಇನ್ನೂ ಯುನ್ ಆಗಲಿ, ಇತರೆ ಸಂಘಟನೆಗಳಾಗಲಿ ಅಷ್ಟಾಗಿ ತಲೆ ಕೆಡಿಸಿಕೊಂಡಿಲ್ಲ.

English summary
The Kiev-based Femen group are holding topless protests for women's rights on Euro 2012 football tournament. Ukraine is co-hosting Euro 2012 with Poland. Femen alleges Euro 2012 will lead to illegal activities and Prostitution in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X