ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಪ್ ಕಾಮ್ಸ್ ಮಾವು-ಹಲಸು ಮೇಳಕ್ಕೆ ಬನ್ನಿ

By Mahesh
|
Google Oneindia Kannada News

Hopcoms Mango Mela
ಬೆಂಗಳೂರು, ಮೇ.22: ಹಾಪ್ ಕಾಮ್ಸ್ ವಾರ್ಷಿಕ ಮಾವು, ಹಲಸು ಮೇಳ ಮೇ.23ರಿಂದ ಆರಂಭವಾಗಲಿದೆ ಎಂದು ಅಧ್ಯಕ್ಶ ಬಿ ಚಿಕ್ಕಣ್ಣ ಹೇಳಿದ್ದಾರೆ.

ಅರಕೆರೆ, ಮೈಕೋ ಲೇಔಟ್, ಜೆಪಿ ನಗರ, ಎಚ್ ಎಸ್ ಆರ್ ಲೇಔಟ್, ಕೆಂಗೇರಿ ಉಪನಗರ, ಎನ್ ಎಸ್ ಬಿಲ್ಡಿಂಗ್, ಮತ್ತಿಕೆರೆ ಸೇರಿದಂತೆ ವಿವಿಧ ಹಾಪ್ ಕಾಮ್ಸ್ ಮಳಿಗೆಗಳಲ್ಲಿ ಶೇ.10ರಷ್ಟು ರಿಯಾಯತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ.

ಏನು ವಿಶೇಷ?: ರೈತರಿಂದ ನೇರವಾಗಿ ಖರೀದಿಸಿ ಮಾರಾಟ ಮಾಡಲಾಗುತ್ತಿದ್ದು, ಗ್ರಾಹಕರ ಬೇಡಿಕೆಗೆ ತಕ್ಕಂತೆ 3 ಹಾಗೂ 5 ಕೆಜಿ ಪ್ಯಾಕ್ ನಲ್ಲಿ ಹಣ್ಣು ಲಭ್ಯವಿರುತ್ತದೆ.

ಕ್ಯಾಲ್ಸಿಯಂ ಕಾರ್ಬೈಡ್ ರಹಿತ ಮಾವುಗಳನ್ನು ಮಾತ್ರ ಮಾರಾಟ ಮಾಡಲಾಗುತ್ತದೆ. ರಾಸಾಯನಿಕ ಭರಿತ ನೈಸರ್ಗಿಕವಲ್ಲದ ಹಣ್ಣು ಮಾರಾಟ ಮಾಡುವುದು PFA ನಿಯ 44 AA ಪ್ರಕಾರ ಅಪರಾಧವಾಗಿದೆ ಎಂದು ಚಿಕ್ಕಣ್ಣ ವಿವರಿಸಿದರು.

ಏನಿದೆ ವೈವಿಧ್ಯತೆ?: ಅಲ್ಫಾನ್ಸೋ, ಬಾದಾಮಿ, ಸಿಂಧೂರ, ತೋತಾಪುರಿ, ನೀಲಮ್, ರಸಪುರಿ, ದಶೇರಿ, ಮಲಗೋವಾ, ಮಲ್ಲಿಕಾ, ರತ್ನಗಿರಿ, ಸೇರಿದಂತೆ ವೈವಿಧ್ಯಮಯ ಮಾವುಗಳು ಲಭ್ಯವಿದೆ. ಸುಮಾರು 250ಕ್ಕೂ ಅಧಿಕ ಮಳಿಗೆಗಳಲ್ಲಿ ಮಾವು ಮೇಳ ವಿಸ್ತರಣೆ. ಕಳೆದ ವರ್ಷ 650ಕ್ಕೂ ಅಧಿಕ ಟನ್ ಮಾವು ಮಾರಾಟ ಮಾಡಲಾಗಿತ್ತು.

ಹೆಚ್ಚಿನ ಮಾಹಿತಿಗೆ www.hopcoms.kar.nic.in ಭೇಟಿ ಕೊಡಿ. ಎಸ್ ಎಂಎಸ್ ಮಾಡಿ ದರ ತಿಳಿಯಿರಿ: hopcoms (space) veg or hopcoms (space) fruits ಎಂದು ಕೀ ಮಾಡಿ 92433-55223 ಗೆ ಎಸ್ ಎಂಎಸ್ ಮಾಡಿ

English summary
Mango Mela once again back in Bangalore. Horticulture department and HOPCOMS has organised Mango and Jackfruit mela which starts from May.22. Fruitful Mela will be conducted over 248 hopcoms said director BV Chikkanna
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X