ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಗಾವಿ: ನೂರಾರು ಕರವೇ ಕಾರ್ಯಕರ್ತರ ಸೆರೆ

By Mahesh
|
Google Oneindia Kannada News

Karnataka Rakshana Vedike Activists held
ಬೆಳಗಾವಿ, ಮೇ.20: ಮರಾಠಿಗರ ಮಹಾಮೇಳಾವ್ ಗೆ ವಿರೋಧ ವ್ಯಕ್ತಪಡಿಸಿದ ಬೆಳಗಾವಿಗೆ ಆಗಮಿಸುತ್ತಿದ್ದ 100ಕ್ಕೂ ಅಧಿಕ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರನ್ನು ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ.

ಇದಲ್ಲದೆ ಶನಿವಾರ(ಮೇ.19) ದಂದು ನಿಪ್ಪಾಣಿಯ ಮಹಾಂತೇಶ್ ನಗರ ಬಳಿ ಬೆಂಕಿ ಹಚ್ಚಲು ಯತ್ನಿಸಿದ್ದ ಚಿಕ್ಕೋಡಿ ಕರವೇ ಅಧ್ಯಕ್ಷ ಸಂಜು ಬಡಿಗೇರ್ ನೇತೃತ್ವದ ಕಾರ್ಯಕರ್ತರನ್ನು ಕೂಡಾ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ಬೆಳಗಾವಿ ತಾಲೂಕು ಕರವೇ ಅಧ್ಯಕ್ಷ ರಮೇಶ್ ತಲವಾರ್ ಕೇರಿ ಸೇರಿದಂತೆ 8 ಜನರನ್ನು ಮಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಿಪ್ಪಾಣಿ, ಯಲ್ಲೂರು, ಕಿತ್ತೂರು, ಚಿಕ್ಕೋಡಿ ಸೇರಿದಂತೆ ಎಲ್ಲೆಡೆ ಕರವೇ ಕಾರ್ಯಕರ್ತರಿಗೆ ದಿಗ್ಬಂಧನ ಹಾಕಲಾಗಿದೆ.

ಯಾವೊಬ್ಬ ಕನ್ನಡ ಪರ ಕಾರ್ಯಕರ್ತರು ಸೊಲ್ಲೆತ್ತಲು ಬಿಡುತ್ತಿಲ್ಲ. ಸಂವಿಧಾನ ಬದ್ಧ ಹಕ್ಕುಗಳನ್ನು ಕಿತ್ತು ಹಾಕಿಕೊಳ್ಳಲಾಗಿದೆ ಎಂದು ಕರವೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಾಮೇಳಾವ್ ಗೆ ಷರತ್ತುಬದ್ಧ ಒಪ್ಪಿಗೆ ನೀಡಿದ್ದೇವೆ. ಕಾನೂನು ವ್ಯವಸ್ಥೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳುವುದು ನಮ್ಮ ಉದ್ದೇಶ ಎಂದು ಜಿಲ್ಲಾಡಳಿತ ಹೇಳಿದೆ.

English summary
More than 100 Karnataka Rakshana Vedike activists held by Belagavi police and prevent them protest Marathi Mahamelav. Nippani, Chikkodi, Kittur and many areas are under Police control. Maharashtra Ekikaran Samiti (MES) has organised Mahamelav in Belgaum.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X