ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೈವನಿಂದನೆ : ಫೇಸ್ ಬುಕ್ ಬ್ಲಾಕ್ ಮಾಡಿದ ಪಾಕ್

By Prasad
|
Google Oneindia Kannada News

Pakistan blocks Twitter, Facebook
ಇಸ್ಲಾಮಾಬಾದ್, ಮೇ. 20 : ಪ್ರವಾದಿ ಮೊಹಮ್ಮದನನ್ನು ನಿಂದಿಸುವಂತಹ ಸಂದೇಶ ಮತ್ತು ಚಿತ್ರಗಳನ್ನು ಪ್ರಸಾರ ಮಾಡಿದ ಆರೋಪದ ಮೇಲೆ ಪಾಕಿಸ್ತಾನದಲ್ಲಿ ಟ್ವಿಟ್ಟರ್ ಮತ್ತು ಫೇಸ್ ಬುಕ್ ಸಾಮಾಜಿಕ ತಾಣಗಳನ್ನು ಪಾಕ್ ಸರಕಾರ ನಿಷೇಧಿಸಿ ಭಾನುವಾರ ಆದೇಶ ಹೊರಡಿಸಿದೆ.

ಪಾಕಿಸ್ತಾನದ ಆಂತರಿಕ ವ್ಯವಹಾರಗಳ ಸಚಿವ ರೆಹಮಾನ್ ಮಲ್ಲಿಕ್ ಅವರು ಈ ಸುದ್ದಿಯನ್ನು ಅಲ್ಲೆಗಳೆದಿದ್ದಾರಾದರೂ, ರಾವಳಪಿಂಡಿ, ಇಸ್ಲಾಮಾಬಾದ್ ಮುಂತಾದ ನಗರಗಳಲ್ಲಿ ಟ್ವಿಟ್ಟರ್ ವೆಬ್‌ಸೈಟನ್ನು ನೋಡಲು ಸಾಧ್ಯವಾಗುತ್ತಿಲ್ಲ ಎಂದು ನೆಟ್ಟಿಗರು ದೂರಿದ್ದಾರೆ. ಮೊಬೈಲಲ್ಲಿ ಕೂಡ ಟ್ವಿಟ್ಟರ್ ಮತ್ತು ಫೇಸ್ ಬುಕ್ ಅಂತರ್ಜಾಲ ತಾಣಗಳನ್ನು ಪ್ರವೇಶಿಸಲು ಆಗುತ್ತಿಲ್ಲ ಎಂಬ ದೂರುಗಳು ಕೇಳಿಬಂದಿವೆ.

"ಆತ್ಮೀಯ ನೆಟ್ಟಿಗರೆ, ಪಾಕಿಸ್ತಾನದಲ್ಲಿ ಟ್ವಿಟ್ಟರ್ ಮತ್ತು ಫೇಸ್ ಬುಕ್ ಸಾಮಾಜಿಕ ತಾಣಗಳನ್ನು ನಿಷೇಧಿಸಲಾಗುವುದಿಲ್ಲ ಎಂಬ ಭರವಸೆ ನೀಡುತ್ತೇನೆ" ಎಂದು ರೆಹಮಾನ್ ಮಲ್ಲಿಕ್ ಟ್ವೀಟ್ ಸಂದೇಶ ರವಾನಿಸಿದ ಗಂಟೆಗಳಲ್ಲಿ ಇವೆರಡು ತಾಣಗಳು ಅಂತರ್ಜಾಲ ತಾಣ ಬಳಕೆದಾರರಿಗೆ ಲಭ್ಯವಾಗುತ್ತಿಲ್ಲ.

ಟ್ವಿಟ್ಟರ್ ಮತ್ತು ಫೇಸ್ ಬುಕ್ ತಾಣಗಳಲ್ಲಿ ದೈವನಿಂದನೆಯ ಸಂದೇಶಗಳು ಪ್ರಕಟವಾಗುತ್ತಿವೆ ಎಂಬ ಕಾರಣ ನೀಡಿ ಪಾಕಿಸ್ತಾನದ ಮಾಹಿತಿ ತಂತ್ರಜ್ಞಾನ ಸಚಿವ ರಾಜಾ ಪರ್ವೇಜ್ ಅವರು ಇವೆರಡು ವೆಬ್‌ಸೈಟ್‌ಗಳನ್ನು ನಿಷೇಧಿಸುವ ಸಾಧ್ಯತೆ ಇದೆ ಎಂದು ಕೆಲ ಟಿವಿ ಚಾನಲ್‌ಗಳು ಪ್ರಸಾರ ಮಾಡಿದ್ದವು. ಈ ಹಿಂದೆ ಕೂಡ ಪ್ರವಾದಿ ಮೊಹಮ್ಮದ್ ವಿರುದ್ಧ ಸಂದೇಶ ಪ್ರಕಟಿಸಿದ್ದಕ್ಕಾಗಿ ಲಾಹೋರ್ ಹೈಕೋರ್ಟ್ ಟ್ವಿಟ್ಟರ್ ಮತ್ತು ಫೇಸ್ ಬುಕ್ ಗಳನ್ನು ನಿಷೇಧಿಸಿತ್ತು.

English summary
Pakistan bans social networking websites Twitter and Facebook for allegedly publishing content against prophet Mohammed. Though Pakistan Internal minister Rehman Mallik has denied having banned the websites, many people are not able to access these two sites.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X