ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾಸಗಿತನಕ್ಕೆ ಧಕ್ಕೆ: Facebook ವಿರುದ್ಧ ಮೊಕದ್ದಮೆ

By Srinath
|
Google Oneindia Kannada News

infringement-of-privacy-facebook-sued-america
ನ್ಯೂಯಾರ್ಕ್, ಮೇ 19: ಮಾಹಿತಿ ತಂತ್ರಜ್ಞಾನ bed roomಅನ್ನೂ ಪ್ರವೇಶಿಸಿ ಯಾವುದೋ ಕಾಲವಾಗಿದೆ. ಆದರೆ ಅದಕ್ಕೆ ತಕ್ಕ ಶಾಸ್ತಿಯೂ ಇದೆ. ಸಾಮಾಜಿಕ ಜಾಲ ತಾಣ Facebook ಈಗ 100 ಶತಕೋಟಿ ಡಾಲರ್ ಕಂಪನಿ. ಶುಕ್ರವಾರ ಅದರ ಮಾಲೀಕ ಮಾರ್ಕ್ ಝಕರ್ ಬರ್ಗ್ ಬಿಡುಗಡೆ ಮಾಡಿದ ಆರಂಭಿಕ ಷೇರುಗಳಿಗೆ ಅಪೂರ್ವ ಸ್ಪಂದನೆ ಸಿಕ್ಕಿದ್ದು, ಷೇರು ಮಾರುಕಟ್ಟೆಯಲ್ಲಿ ಕಂಪನಿ ಈಗ 100 ಶತಕೋಟಿ ಡಾಲರ್ ಕಂಪನಿಯಾಗಿ ಮಾರ್ಪಟ್ಟಿದೆ.

ಆದರೆ Facebook ಮಾನವೂ ಈಗ ಹರಾಜಾಗಿದೆ. ಬೇರೆಯವರ ಮಾನ ಬಟಾಬಯಲು ಮಾಡಿದ್ದಕ್ಕಾಗಿ Facebook ವಿರುದ್ಧ ಮಾನನಷ್ಟ ಮೊಕದ್ದಮೆಗಳನ್ನು ಹೂಡಲಾಗಿದೆ. ಒಟ್ಟು
21 ಖಾಸಗಿ ದೂರುಗಳು ದಾಖಲಾಗಿದ್ದವು. ಇದನ್ನು ಕಂಡು ಬೆಚ್ಚಿಬಿದ್ದ ಕೋರ್ಟ್ ಅದನ್ನೆಲ್ಲ ಒಟ್ಟು ಮಾಡಿ ಒಂದೇ ಒಂದು ಪ್ರಧಾನ ದೂರನ್ನು ದಾಖಲಿಸಿಕೊಂಡಿದೆ.

ವಿಶ್ವದ ಅತಿ ದೊಡ್ಡ ಸಾಮಾಜಿಕ ವೆಬ್‌ಸೈಟ್‌ ವಿರುದ್ಧ ಅಮೆರಿಕದ Stewart Law US ಕಾನೂನು ಸಂಸ್ಥೆಯು ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದೆ. U.S. Wiretap Act ಪ್ರಕಾರ ಪರಿಹಾರಾರ್ಥವಾಗಿ 15 ಶತಕೋಟಿ ಡಾಲರ್ ನೀಡುವಂತೆಯೂ ಸಂಸ್ಥೆ ಕೋರಿದೆ.

2009ರಲ್ಲಿ ಅಂದರೆ Facebook ಸ್ಥಾಪನೆಯಾದ ಮೂರನೇ ವರ್ಷದಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಇಂತಹುದೇ ಮಾನನಷ್ಟ ಮೊಕದ್ದಮೆ ದಾಖಲಾಗಿತ್ತು. ಮೊನ್ನೆ ಮಾರ್ಚಿನಲ್ಲಿ ತಮ್ಮ ವಿಳಾಸಗಳನ್ನು ಅನುಮತಿ ಪಡೆಯದೆ upload ಮಾಡಲಾಗಿದೆ ಎಂದು Facebook ವಿರುದ್ಧ 13 ಜನ ತಿರುಗಿ ಬಿದ್ದಿದ್ದರು.

ನಿಮಗೂ ಇಂತಹ ಅನುಭವವಾಗಿದೆಯಾ?
ಸ್ವಲ್ಪ ತಡೆಯಿರಿ. ಈ ಆರಂಭಿಕ ಷೇರು ಬಿಡುಗಡೆ ಖಾತೆ ಮುಕ್ತಾಯವಾದ ಬಳಿಕ Stewart Law US ಕಾನೂನು ಸಂಸ್ಥೆ ಮತ್ತೊಂದು ದೂರನ್ನು ದಾಖಲಿಸಲಿದ್ದು, ಅಮೆರಿಕದಾಚೆ ಹೀಗೆ ಖಾಸಗಿತನಕ್ಕೆ ಧಕ್ಕೆಯುಂಟು ಮಾಡಿದ ಪ್ರಕರಣಗಳನ್ನು ಒಟ್ಟು ಮಾಡಿ Facebook ವಿರುದ್ಧ ಮತ್ತೊಂದು ದೂರನ್ನು ದಾಖಲಿಸಲು ಸಜ್ಜಾಗುತ್ತಿದೆ.

English summary
21 privacy lawsuits against the world's largest social networking Website were combined into one single class-action suit as law firm Stewart Law US challenged it for violating user privacy. Interestingly, the firm is evaluating ways in which Facebook users from overseas could be added to the plaintiff's list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X