ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ಸೆಸ್ಸೆಲ್ಸಿ 2012 : ಶೇ.76.13 ದಾಖಲೆ ಫಲಿತಾಂಶ

By Prasad
|
Google Oneindia Kannada News

Karnataka SSLC 2012 results announced
ಬೆಂಗಳೂರು, ಮೇ. 17 : 2011-12ನೇ ಶೈಕ್ಷಣಿಕ ವರ್ಷದ ಎಸ್ಸೆಸ್ಸೆಲ್ಸಿ ಫಲಿತಾಂಶ ಮೇ 17, ಗುರುವಾರ ಘೋಷಿಸಲಾಗಿದ್ದು, ಒಟ್ಟಾರೆ ಶೇ.76.13ರಷ್ಟು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ಈ ಬಾರಿ ಕೂಡ ಪ್ರತಿ ವರ್ಷದಂತೆ ಬಾಲಕಿಯರು ಬಾಲಕರನ್ನು ಹಿಂದಿಕ್ಕಿ ಜಯಭೇರಿ ಮಾಡಿದ್ದಾರೆ.

ಫಲಿತಾಂಶ ಆನ್‌ಲೈನ್‌ನಲ್ಲಿ ಈಗ ಲಭ್ಯ

ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಪ್ರಕಟಿಸಿದರು. ಶಿಕ್ಷಣ ಮಂಡಳಿಯ ನಿರ್ದೇಶಕ ಡಿ. ವೆಂಕಟೇಶಯ್ಯ ಅವರು ಉಪಸ್ಥಿತರಿದ್ದರು. ಈ ಫಲಿತಾಂಶ ಮತ್ತು ಸಂಪೂರ್ಣ ಅಂಕಪಟ್ಟಿ ಒನ್ಇಂಡಿಯಾ ಕನ್ನಡ ವೆಬ್ ತಾಣದಲ್ಲಿ ಮಧ್ಯಾಹ್ನ 1 ಗಂಟೆ ನಂತರ ಲಭ್ಯವಾಗಲಿದೆ. ಇದು ಎಲ್ಲ ಶಾಲೆಗಳಲ್ಲಿ ಮೇ 18ರಂದು ಬೆಳಿಗ್ಗೆ ಪ್ರಕಟವಾಗಲಿದೆ.

ಕಳೆದ ವರ್ಷಕ್ಕಿಂತ(ಶೇ.73.90) ಶೇ.2.23ರಷ್ಟು ಹೆಚ್ಚು ವಿದ್ಯಾರ್ಥಿಗಳು ಈ ಬಾರಿ ಉತ್ತೀರ್ಣರಾಗಿದ್ದಾರೆ. ಒಟ್ಟು 1878 ಹೈಸ್ಕೂಲ್‌ಗಳಲ್ಲಿ ಶೇ.100ರಷ್ಟು ಫಲಿತಾಂಶ ಬಂದಿದೆ. ಈ ದಾಖಲೆಯ ಫಲಿತಾಂಶ ಬಂದಿರುವುದಕ್ಕೆ ತುಂಬಾ ಸಂತೋಷವಾಗುತ್ತದೆ. ಇದಕ್ಕಾಗಿ ಶ್ರಮಿಸಿದ ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರಿಗೆ ಅಭಿನಂದನೆಗಳನ್ನು ಶಿಕ್ಷಣ ಸಚಿವ ಕಾಗೇರಿ ಸಲ್ಲಿಸಿದರು.

ಈ ಬಾರಿ ಒಟ್ಟು 8,25,131 ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಪರೀಕ್ಷೆ ತೆಗೆದುಕೊಂಡಿದ್ದರು. ಬಾಲಕಿಯರು ಶೇ.81.16ರಷ್ಟು ಮತ್ತು ಬಾಲಕರು 71.73ರಷ್ಟು ಪಾಸಾಗಿದ್ದಾರೆ. ರಾಜ್ಯದ 47 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. ಆದರೆ, ಶೂನ್ಯ ಫಲಿತಾಂಶ ಬಂದ ಶಾಲೆಗಳಲ್ಲಿ ಸರಕಾರಿ ಶಾಲೆಗಳಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.9.43ರಷ್ಟು ಹೆಚ್ಚು ವಿದ್ಯಾರ್ಥಿನಿಯರು ಮತ್ತು ಶೇ.3ರಷ್ಟು ಗ್ರಾಮೀಣ ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ ಎಂದು ಕಾಗೇರಿ ತಿಳಿಸಿದರು.

ನಿರೀಕ್ಷೆಯಂತೆ ಉಡುಪಿ ಜಿಲ್ಲೆ ಪ್ರಥಮ ಸ್ಥಾನ ಅಲಂಕರಿಸಿದೆ. ಎರಡನೇ ಮತ್ತು ಮೂರನೇ ಸ್ಥಾನಗಳನ್ನು ಶಿರಸಿ ಮತ್ತು ಹಾಸನ ಪಡೆದುಕೊಂಡಿವೆ. ಆದರೆ, ಬೀದರ್ ಮಾತ್ರ ಕೊನೆಯ ಸ್ಥಾನ ಬಿಟ್ಟುಕೊಡಲು ಈ ವರ್ಷವೂ ನಿರಾಕರಿಸಿದೆ. ಹಾಸನ ನಂತರದ ಸ್ಥಾನಗಳನ್ನು ತುಮಕೂರು, ಚಿಕ್ಕೋಡಿ, ಉತ್ತರ ಕನ್ನಡ, ಮಂಗಳೂರು ಪಡೆದುಕೊಂಡಿವೆ. ಒರ್ವ ವಿದ್ಯಾರ್ಥಿನಿ ಗರಿಷ್ಠ 625 ಅಂಕಗಳಿಗೆ 623 ಅಂಕ ಪಡೆದು ಪ್ರಥಮ ಸ್ಥಾನ ಗಳಿಸಿದ್ದಾಳೆ.

ಕಾಗೇರಿ ಮನವಿ : ಈ ಫಲಿತಾಂಶವನ್ನು ವಿದ್ಯಾರ್ಥಿಗಳು ಮತ್ತು ಪಾಲಕರು ಇದ್ದ ಹಾಗೆ ಸ್ವೀಕರಿಸಬೇಕು. ಉತ್ತಮ ಅಂಕಗಳಿಸಿ ಪಾಸಾಗಿದ್ದರೆ ಮುಂದಿನ ಓದಿಗೆ ಪ್ರೋತ್ಸಾಹಿಸಬೇಕು ಮತ್ತು ಕಡಿಮೆ ಅಂಕ ಗಳಿಸಿದ್ದರೆ ಕೀಳರಿಮೆಯಿಂದ ನೋಡುವುದು, ಹೀಯಾಳಿಸುವುದು ಬೇಡ. ಮುಂದಿನ ಜೀವನಕ್ಕೆ ಈ ಫಲಿತಾಂಶವೇ ಅಂತಿಮವಲ್ಲ. ಮುಂದೆಯೂ ವಿಫಲರಾಗುತ್ತೇವೆಂಬ ಭ್ರಮೆಯಲ್ಲಿ ಬೀಳಬಾರದು. ವಿದ್ಯಾರ್ಥಿಗಳಲ್ಲಿನ ಆಸಕ್ತಿ ಗಮನಿಸಿ ಪ್ರೋತ್ಸಾಹಿಸಬೇಕು ಎಂದು ಅವರು ಮನವಿ ಮಾಡಿಕೊಂಡರು.

English summary
Karnataka SSLC 2012 results announced. Education minister Vishweshwar Hegde Kageri announced this in Bangalore on May 17, 2012. The results will be available on the internet after 1 pm on May 17 and in the schools on May 18. Udupi has stood in No.1 and Bidar in last place.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X