ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಳ್ಳಾರಿ ಜಿಂದಾಲ್ ಮೇಲೂ ಸಿಬಿಐ ದಾಳಿ, ಷೇರು ಕುಸಿತ

By Mahesh
|
Google Oneindia Kannada News

Sajjan Jindal
ಬಳ್ಳಾರಿ, ಮೇ. 16: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಂದ ಗಣಿ ಗುತ್ತಿಗೆ ಲೈಸನ್ಸ್ ಪಡೆಯಲು ಕಿಕ್ ಬ್ಯಾಕ್ ನೀಡಿರುವ ಆರೋಪ ಹೊತ್ತಿರುವ ಜಿಂದಾಲ್ ಕಂಪನಿ ಸಂಡೂರಿನ ವಿಜಯನಗರ ಉಕ್ಕು ಘಟಕದ ಕಚೇರಿಗಳ ಮೇಲೆ ಸಿಬಿಐ ತಂಡ ಬುಧವಾರ(ಮೇ.16) ಹಠಾತ್ ದಾಳಿ ನಡೆಸಿದೆ.

ಕರ್ನಾಟಕದಲ್ಲಿ ಅಕ್ರಮ ಗಣಿಗಾರಿಕೆ ಮಾಡಿಲ್ಲ ಹಾಗೂ ಯಾವುದೇ ಲಂಚ ಪ್ರಕರಣದಲ್ಲಿ ಸಂಸ್ಥೆ ಭಾಗಿಯಾಗಿಲ್ಲ. ಸುಪ್ರೀಂಕೋರ್ಟ್ ಆದೇಶಕ್ಕೆ ತಲೆಬಾಗಿ ತನಿಖೆ ಸಹಕರಿಸುವುದಾಗಿ ಜೆ ಎಸ್ ಡಬ್ಲ್ಯೂ ಇತ್ತೀಚೆಗೆ ಪ್ರತಿಕ್ರಿಯಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಸಿಇಸಿ ವರದಿ ಪ್ರಕಾರ, ಯಡಿಯೂರಪ್ಪ ಅವರ ಕುಟುಂಬ ವರ್ಗಕ್ಕೆ ಮಾರ್ಚ್ 2010 ರಲ್ಲಿ ಸೌತ್ ವೆಸ್ಟ್ ಮೈನಿಂಗ್ ಕಂಪನಿ 10 ಕೋಟಿ ರು ಹಾಗೂ ಜಿಂದಾಲ್ ಸಮೂಹ ಸಂಸ್ಥೆ 5.73 ಕೋಟಿ ರು ಹಣವನ್ನು ಪ್ರೇರಣಾ ಟ್ರಸ್ಟ್ ಗೆ ಅಕ್ರಮವಾಗಿ ಡೊನೇಷನ್ ನೀಡಲಾಗಿದೆ ಎಂಬ ಆರೋಪವಿದೆ.

ಚಿಂತಿತರಾದ ಸಜ್ಜನ್ : ಯಡಿಯೂರಪ್ಪ ಗಣಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಆದೇಶ ಹೊರಬೀಳುವ ಮುನ್ನವೇ ಸಿಬಿಐ ತಂಡ ಒಮ್ಮೆ ಜಿಂದಾಲ್ ಘಟಕದ ಮೇಲೆ ದಾಳಿ ನಡೆಸಿದ ಸುದ್ದಿ ಹಬ್ಬಿತ್ತು.

ಆದರೆ, ದಾಳಿಯನ್ನು ಅಲ್ಲಗೆಳೆದಿದ್ದ ಕಂಪನಿ, ಸಿಬಿಐ ತಂಡ ಕೇವಲ ಮಾಹಿತಿ ಪಡೆದು ಹೋದರು ಎಂದು ತೇಲಿಸಿತ್ತು. ಲೋಕಾಯುಕ್ತ ವರದಿ, ಜನಾರ್ದನ ರೆಡ್ಡಿ ಅದಿರು ಅಕ್ರಮ ಸಾಗಾಟ, ಸಿಇಸಿ ವರದಿ ಒಟ್ಟಾರೆ ಅಕ್ರಮ ಗಣಿಗಾರಿಕೆಗೂ ನಮಗೂ ಸಂಬಂಧವಿಲ್ಲ ಎಂದು ಜಿಂದಾಲ್ ಹೇಳಿಕೊಂಡಿತ್ತು.

ಆದರೆ, 4ನೇ ತ್ರೈಮಾಸಿಕ ವರದಿಯಲ್ಲಿ ಶೇ 10 ರಷ್ಟು ಲಾಭ ಕಳೆದುಕೊಂಡ ಮೇಲೆ ಜಿಂದಾಲ್ ಮುಖ್ಯಸ್ಥ ಸಜ್ಜನ್ ಜಿಂದಾಲ್ ಚಿಂತಿತರಾಗಿದ್ದಾರೆ.

"In some ways, we are a victim of circumstances, since we do not have mines of our own and are forced to buy all our ore requirement," ಎಂದು ಸಜ್ಜನ್ ಹೇಳಿದ್ದಾರೆ.

ವಿಶ್ವದಲ್ಲೇ ಅತಿ ಕಡಿಮೆ ಮೌಲ್ಯದಲ್ಲಿ ಉಕ್ಕು ಉತ್ಪಾದಿಸುವ ಜಿಂದಾಲ್ ಗ್ರೂಪ್ ಭಾರತ ಮೂರನೇ ಅತಿದೊಡ್ಡ ಉಕ್ಕು ಉದ್ಯಮ ಸಂಸ್ಥೆಯಾಗಿದೆ. ಜಿಂದಾಲ್ ನ ಷೇರು ಖರೀದಿ, ಬಂಡವಾಳ ಹೂಡಿಕೆಯಿಂದ ಹಿಂದೆ ಸರಿಯುವಂತೆ ಹೂಡಿಕೆದಾರರಿಗೆ ಆರ್ಥಿಕ ತಜ್ಞರು ಸೂಚಿಸಿರುವುದು ಕಂಪನಿಗೆ ಭಾರಿ ಹಿನ್ನೆಡೆಯಾಗಿದೆ.

ಷೇರುಪೇಟೆಯಲ್ಲಿ ಜಿಂದಾಲ್ ಹಾಗೂ ಅದಾನಿ ಷೇರುಗಳು ನೆಲಕಚ್ಚಿದೆ (ಮೇ 16, ಸಮಯ 12.30)

ಮುಂದಿನ ಟಾರ್ಗೆಟ್ : ಸಿಇಸಿ ವರದಿ ಆಧಾರದ ಮೇಲೆ ಸುಪ್ರೀಂಕೋರ್ಟ್ ಸಿಬಿಐ ತನಿಖೆ ನಡೆಸುತ್ತಿರುವುದರಿಂದ ಜಿಂದಾಲ್ ಅಲ್ಲದೆ ಅದಾನಿ ಸಮೂಹ ಸಂಸ್ಥೆ ಮೇಲೂ ದಾಳಿ ನಡೆಯುವ ಸಂಭವ ಹೆಚ್ಚಾಗಿದೆ. ಗಣಿ ಗುತ್ತಿಗೆ ಲಾಭ ಪಡೆದು ಅಕ್ರಮ ಎಸೆಗಿದ ಆರೋಪವನ್ನು ಅದಾನಿ ಸಂಸ್ಥೆ ಕೂಡಾ ಹೊತ್ತುಕೊಂಡಿದೆ.

English summary
CBI raid on JSW Steel, Sandur, Bellary. Recently after SC verdict on BS Yeddyurappa minig graft case, JSW Steel, a part of Jindal group has denied allegations of mining scam in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X