ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ಅವರಿಗೆ ಶಿಕ್ಷೆಯಾದರೆ ಬಿಕ್ಕಟ್ಟು ಶಮನ

By Mahesh
|
Google Oneindia Kannada News

Anand Asnotikar on Yeddyurappa CBI Probe
ಕಾರವಾರ, ಮೇ.15: ಬಿಜೆಪಿ ಬಿಕ್ಕಟ್ಟು ನಿವಾರಣೆಯಾಗಬೇಕಾದರೆ ಯಡಿಯೂರಪ್ಪ ಅವರಿಗೆ ಶಿಕ್ಷೆಯಾಗಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾದರೆ ಉಳಿದವರಿಗೆ ಬುದ್ಧಿ ಬರುತ್ತದೆ. ಪಕ್ಷದ ಆಂತರಿಕ ಗೊಂದಲಗಳ ನಿವಾರಣೆಗಾಗಿ ಹಾಗೂ ಸಂಪುಟ ವಿಸ್ತರಣೆಗಾಗಿ ನಾವು ಆಗ್ರಹಿಸುತ್ತಿದ್ದೇವೆ ಎಂದು ಐದು ಜನ ಪಕ್ಷೇತರ ಶಾಸಕರು ಸೇರಿದಂತೆ ಒಟ್ಟು 25 ಶಾಸಕರೊಂದಿಗೆ ಗೋವಾಕ್ಕೆ ತೆರಳಿರುವ ಶಾಸಕ ಆನಂದ್ ಆಸ್ನೋಟಿಕರ್ ಅವರು ಹೇಳಿದ್ದಾರೆ.

ಭಾರತೀಯ ಜನತಾ ಪಕ್ಷಕ್ಕೆ ಯಡಿ ಯೂರಪ್ಪ ರವರ ಅಗತ್ಯವಿದೆ. ಅವರು ಪಕ್ಷದ ಹಿರಿಯ ನಾಯಕರು ಎಂಬುದನ್ನು ಮರೆಯುವಂತಿಲ್ಲ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬಗ್ಗೆ ಸಿಬಿಐ ತನಿಖೆಗೆ ಆದೇಶ ಆಗಿದೆ. ಈ ತನಿಖೆಯಿಂದ ಯಡಿಯೂರಪ್ಪನವರಿಗೆ ನಿಜಕ್ಕೂ ನ್ಯಾಯ ದೊರಕುವ ಬಗ್ಗೆ ಸಂಪೂರ್ಣ ವಿಶ್ವಾಸವಿದೆ. ತಪ್ಪು ಎಸೆಗಿದ್ದರೆ ಶಿಕ್ಷೆಯಾಗಲಿದೆ ಎಂದು ಶಾಸಕ ಆನಂದ್ ಹೇಳಿದರು.

ಸದಾನಂದ ಗೌಡರನ್ನು ಹೊರತುಪಡಿಸಿ ಮೂರನೆಯವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಏರಿಸಲು ತಂತ್ರ ನಡೆಸಿರುವ ಸುದ್ದಿ ಇದೆ. ಆದರೆ, ನಮ್ಮ ಬೆಂಬಲ ಎಂದಿದ್ದರೂ ಸದಾನಂದ ಗೌಡರಿಗೆ ಮಾತ್ರ. ಮುಂದಿನ ಒಂದು ವರ್ಷ ಸದಾನಂದ ಗೌಡರೇ ಮುಖ್ಯಮಂತ್ರಿಯಾಗಿ ಮುಂದುವರಿದು, ಉತ್ತಮ ಆಡಳಿತ ನೀಡುವಂತಾಗಬೇಕು ಎಂದು ಆನಂದ ಅಸ್ನೋಟಿಕರ್ ಎಂದು ಹೇಳಿದ್ದಾರೆ.

ಬಾಲಚಂದ್ರ ಜಾರಕಿಹೊಳಿ ಅವರು ಈಗಾಗಲೇ ಬಿಜೆಪಿ ಹೈಕಮಾಂಡ್ ಜೊತೆ ಸಂಪುಟ ವಿಸ್ತರಣೆ ಬಗ್ಗೆ ಮಾತುಕತೆ ನಡೆಸಿದ್ದಾರೆ. ನಾವೇನು ಸನ್ಯಾಸಿಗಳಲ್ಲ. ರೆಸಾರ್ಟ್ ರಾಜಕೀಯ ನಮಗೂ ಬೇಕಿಲ್ಲ. ಸುಮ್ಮನಿದ್ದರೆ ಏನು ಸಿಗುವುದಿಲ್ಲ ಎಂಬ ಕಾರಣಕ್ಕೆ ಸಂಪುಟ ವಿಸ್ತರಣೆಗೆ ಆಗ್ರಹಿಸಿದ್ದೇವೆ ಎಂದು ಗೋವಾದ ಲೀಲಾ ಹೋಟೆಲ್ ನಲ್ಲಿ ಬೀಡುಬಿಟ್ಟಿರುವ ಶಾಸಕ ಆನಂದ್ ಹೇಳಿದ್ದಾರೆ.

English summary
Anand Asnotikar welcomes CBI Probe on Yeddyurappa. Balachandra Jarakiholi and Ananda Asnotikar with 25 MLAs are supporting Sadananda Gowda and said crisis will be over if Yeddyurappa gets punishment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X