ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬಿಐ ತನಿಖೆ- ಜಯ ಬಿಎಸ್‌ವೈಗೆ: ಆಚಾರ್ಯ ಅಭಯ

By Srinath
|
Google Oneindia Kannada News

cbi-enquiry-bsy-gets-bv-acharya-blessings
ಬೆಂಗಳೂರು, ಮೇ 15: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳನ್ನು ಸಿಬಿಐ ತನಿಖೆ ಮಾಡಲಿ ಎಂದು ಸುಪ್ರೀಂಕೋರ್ಟ್ ನಿರ್ದೇಶಿಸಿದ ಬೆನ್ನಲ್ಲೇ ರಾಜ್ಯದ ಮಾಜಿ ಅಡ್ವೊಕೇಟ್ ಜನರಲ್ ಬಿವಿ ಅಚಾರ್ಯ ಅವರು ಎಂದಿನಂತೆ ಯಡಿಯೂರಪ್ಪ ಅವರ ನೆರವಿಗೆ ಧಾಬಿಸಿದ್ದಾರೆ. ಭಾನುವಾರ ಈ ಸಂಬಂಧ ಆಚಾರ್ಯ ಅವರು ಯಡಿಯೂರಪ್ಪ ನಿವಾಸಕ್ಕೆ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಗಮನಾರ್ಹವೆಂದರೆ ಆಚಾರ್ಯ ಅವರು ಮೊದಲಿನಿಂದಲೂ ಯಡಿಯೂರಪ್ಪ ಅವರಿಗೆ ಕಾನೂನು ಸಲಹೆ ನೀಡುತ್ತಲೇ ಬಂದಿದ್ದಾರೆ. ತಾವು AG ಆಗಿದ್ದಾಗಲೇ ಪ್ರಕರಣವೊಂದರಲ್ಲಿ (ಭದ್ರಾ ಮೇಲ್ದಂಡೆ ಯೋಜನೆ) ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಲಹೆ ನೀಡಿ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಅವರು AG ಆಗುಳಿದಿಲ್ಲ. ಆದ್ದರಿಂದ ಮತ್ತಷ್ಟು ಮುತುವರ್ಜಿಯಿಂದ ಮಾಜಿ ಮುಖ್ಯಮಂತ್ರಿಯ ನೆರವಿಗೆ ಧಾವಿಸಿದ್ದಾರೆ. ಜತೆಗೆ ಸಿಬಿಐ ತನಿಖೆಯಿಂದ ಏನೂ ಸಾಧಿಸಲಾಗದು ಎಂದು ಅಭಯವನ್ನೂ ನೀಡಿದ್ದಾರೆ ಎಂದು ಆಪ್ತ ಮೂಲಗಳು ಹೇಳಿವೆ.

ಭಾನುವಾರದ ಭೇಟಿ ವೇಳೆ ಯಡಿಯೂರಪ್ಪ ಮತ್ತು ಅವರ ಇಬ್ಬರು ಪುತ್ರರಾದ ವಿಜಯೇಂದ್ರ ಮತ್ತು ರಾಘವೇಂದ್ರ ಅವರನ್ನು ಕೂಡಿಸಿಕೊಂಡು ಸಿಬಿಐ ತನಿಖೆಯನ್ನು ಹೇಗೆ ಎದುರಿಸಬೇಕು ಮತ್ತು ಪ್ರಕರಣದಿಂದ ಹೇಗೆ ಹೊರಬರಬೇಕು ಎಂಬುದರ ಬಗ್ಗೆ ಹಲವಾರು ಕಾನೂನು Tips ನೀಡಿದ್ದಾರೆ ಎಂದು ತಿಳಿದುಬಂದಿದೆ.

ಕರ್ನಾಟಕ ಹೈಕೋರ್ಟ್ ಈಗಾಗಲೆ ಪ್ರಕರಣದಲ್ಲಿ FIR ದಾಖಲಿಸಿರುವುದಕ್ಕೆ ತಡೆಯಾಜ್ಞೆ ನೀಡಿದೆ. ಈ ಹಿನ್ನೆಲೆಯಲ್ಲಿ ಸಿಬಿಐ ಈಗ ಎಚ್ಚರಿಕೆಯ ಕ್ರಮ ಅನುಸರಿಸ ಬೇಕಾಗಿದೆ. ಈ ವಿದ್ಯಮಾನವು ನಿಮ್ಮ ಪರವಾಗಿ ಕೆಲಸ ಮಾಡಲಿದೆ. ಅಷ್ಟರ ಮಟ್ಟಿಗೆ ನೀವು safe ಎಂದಿದ್ದಾರೆ ಆಚಾರ್ಯರು.

ಸಿಬಿಐ ನಾಳೆ, ನಾಳಿದ್ದೋ ತಮ್ಮನ್ನು ಬಂಧಿಸಿದರೆ ಗತಿಯೇನು ಎಂದು ಬಿಎಸ್‌ವೈ ಮಕ್ಕಳು ಆತಂಕ ವ್ಯಕ್ತಪಡಿಸಿದ್ದಾಗ ಅಂತಾದ್ದೇನೂ ಆಗುವುದಿಲ್ಲ. ಭಯ ಪಡಬೇಡಿ ಎಂದು ಅಚಾರ್ಯರು ತಮ್ಮ ಶ್ರೀರಕ್ಷೆ ನೀಡಿದ್ದಾರೆ.

ಈ ಮದ್ಯೆ, ಬೆಂಗಳೂರು ಸಿಬಿಐನ ಭ್ರಷ್ಟಾಚಾರ ವಿರೋಧಿ ಘಟಕದ (ACB) DIG ಆರ್. ಹಿತೇಂದ್ರ ಕುಮಾರ್ ಅವರು ಸೋಮವಾರ ನವದೆಹಲಿಗೆ ಪ್ರಯಾಣ ಬೆಳೆಸಿದ್ದು, ಮಂಗಳವಾರ ಸುಪ್ರೀಂಕೋರ್ಟಿನ order copy ಹಿಡಿದುಕೊಂಡು ಬರಲಿದ್ದಾರೆ. ಆ ನಂತರ ಬೆಂಗಳೂರಿನಲ್ಲಿರುವ ಸಿಬಿಐ ವಿಶೇಷ ಕೋರ್ಟಿನಲ್ಲಿ ಬುಧವಾರ FIR ದಾಖಲು, ಮುಂದಿನ ಪ್ರಕ್ರಿಯೆ.

ಆದರೆ DIG ಆರ್. ಹಿತೇಂದ್ರ ಕುಮಾರ್ ಅವರೇ ಪ್ರಕರಣದ ಮುಖ್ಯ ತನಿಖಾಧಿಕಾರಿ ಆಗುತ್ತಾರಾ ಎಂಬುದು ಇನ್ನೂ ಖಚಿತಪಟ್ಟಿಲ್ಲ. 1996ನೇ ಸಾಲಿನ ಕರ್ನಾಟಕ ಕೇಡರಿನ IPS ಅಧಿಕಾರಿ ಹಿತೇಂದ್ರ ಅವರು ಪ್ರಸ್ತುತ deputation ಮೇಲೆ ಸಿಬಿಐನಲ್ಲಿದ್ದು, 2013ರ ಅಕ್ಟೋಬರ್ 31ರವರೆಗೂ ಸಿಬಿಐನಲ್ಲಿರುತ್ತಾರೆ.

English summary
Former chief minister B.S. Yeddyurappa, who is facing illegal mining cases along with his relatives that are being probed by the CBI, met former Advocate General B.V. Acharaya on Sunday and took tips from him on fighting the illegal mining cases against them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X