ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಲ ತೀರಿಸಲು Air India ಆಸ್ತಿ ಮಾರಾಟ

By Srinath
|
Google Oneindia Kannada News

ನವದೆಹಲಿ, ಮೇ 15: ಸರಕಾರಿ ಸಂಸ್ಥೆಯೊಂದು ಎಂಥಾ ದುಃಸ್ಥಿತಿಗೆ ಬಂದಿದೆ ನೋಡಿ. ಏನೋ, ಮಲ್ಯ ಸಂಸ್ಥೆ ದಿವಾಳಿಯೆದ್ದು UB Tower ಅನ್ನು ಮಾರಾಟಕ್ಕಿಟ್ಟರೆ ಅದು ಅವರ ಖಾಸಗಿ ಸಂಸ್ಥೆ/ ಖಾಸಗಿ ವಿಚಾರ ಅಂದುಕೊಂಡು ಸುಮ್ಮನಾಗಬಹುದು. ಆದರೆ ಇದೇನಿದು ಸರಕಾರಿ ಸಂಸ್ಥೆಗೆ ಇಂತಹ ದುರ್ಗತಿ. ಹಾಗೆಂದು ಇದೇನು ಅನಿರೀಕ್ಷಿತವಲ್ಲ.

air-india-to-sell-asset-to-raise-rs-5000-crore

24 ಸಾವಿರ ಕೋಟಿ ರೂ. ಸಾಲದಲ್ಲಿ 'ತೇಲುತ್ತಿರುವ' Air India ಸರಕಾರಿ ವಿಮಾನ ಸಂಸ್ಥೆಗೆ ಸಂಕಷ್ಟಗಳ ಸರಮಾಲೆಯೇ ಎದುರಾಗಿದೆ. ಅತ್ತ ಪೈಲಟುಗಳು ಟೇಕ್ ಆಫ್ ಗೆ ಸುತರಾಂ ಒಪ್ಪದೇ Air Indiaಗೆ ಮತ್ತಷ್ಟು ಮುಳುಗು ನೀರು ತಂದಿದ್ದಾರೆ.

ಈ ಮಧ್ಯೆ Air India ರಿಯಲ್ ಎಸ್ಟೇಟ್ ಅದ್ಭುತವಾಗಿದೆ. ತನ್ನ ಅಮೂಲ್ಯ ಆಸ್ತಿಯನ್ನೇ ಅಡಮಾನವಿಟ್ಟು ಮುಂದಿನ 10 ವರ್ಷಗಳಲ್ಲಿ 5,000 ಕೋಟಿ ರು. ಹಣವೆತ್ತಲು ನಿರ್ಧರಿಸಿದೆ. ಜತೆಗೆ, ಸರಕಾರದ ಖಾತ್ರಿಯಲ್ಲಿ non-convertible debentures ಮೂಲಕ 7,400 ಕೋಟಿ ರು. ಹಣ ಸಂಗ್ರಹಿಸಿ, ಸಾಲ ತೀರಿಸಲು ಮುಂದಾಗಿದೆ.

ಸೋಮವಾರ ನಡೆದ Air India ಆಡಳಿತ ಮಂಡಲಿ ಸಭೆಯಲ್ಲಿ ಈ ಕುರಿತು ಒಮ್ಮತದ ನಿರ್ಧಾರಕ್ಕೆ ಬರಲಾಗಿದೆ. ಜೂನ್ 30ರ ವೇಳೆಗೆ ಈ ನಿರ್ಣಯ ಸ್ಪಷ್ಟ ಸ್ವರೂಪ ಪಡೆಯಲಿದೆ. ಅದಕ್ಕಾಗಿ Air India, ಸೂಕ್ತ ರಿಯಲ್ ಎಸ್ಟೇಟ್ ಕುಳಗಳ ಹುಡುಕಾಟ ನಡೆಸಿದೆ.

ಹೀಗೇ, ಕಿಂಗ್‌ಫಿಶರ್‌ ಏರ್‌ಲೈನ್ಸ್‌ ಸಹ ದಿವಾಳಿ ಹಂತಕ್ಕೆ ತಲುಪಿದೆ. ಹಾಗಾಗಿ ಆ ಕಂಪನಿಯ ಮಾಲೀಕ ಮದ್ಯದ ದೊರೆ ವಿಜಯ್‌ ಮಲ್ಯ ತಮ್ಮ UB Tower ಅನ್ನೇ ಮಾರಾಟ ಕಮ್ ಭೋಗ್ಯಕ್ಕೆ ಇಟ್ಟಿದ್ದಾರೆ. Air India ಸಹ ವಿಜಯ್‌ ಮಲ್ಯರಿಂದ ಪ್ರೇರಣೆ ಪಡೆಯಿತೇ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ.

English summary
Debt-ridden Air India is to raise about Rs 5,000 crore over 10 years by monetizing its assets. The airline is also going to issue government-backed non-convertible debentures for Rs 7,400 crore for part repayment of working capital loans.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X