ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೇಪಾಳ : ವಿಮಾನ ಪತನ, 13 ಭಾರತೀಯರು ಸಾವು

By Mahesh
|
Google Oneindia Kannada News

Plane Crash, Nepal
ಪೊಖಾರ(ನೇಪಾಳ), ಮೇ.14: ಇಲ್ಲಿನ ಮುಸ್ಟಾಂಗ್ ಜಿಲ್ಲೆಯ ಜೊಸೊಮ್ ವಿಮಾನ ನಿಲ್ದಾಣದಲ್ಲಿ ಲಘು ಪ್ರಯಾಣಿಕರ ವಿಮಾನ ಸೋಮವಾರ(ಮೇ.14) ಬೆಳಗ್ಗೆ ಭೀಕರ ಅಪಘಾತಕ್ಕೀಡಾಗಿದೆ. ಈ ದುರಂತದಲ್ಲಿ ವಿಮಾನದಲ್ಲಿದ್ದ 13 ಜನ ಭಾರತೀಯರೂ ಸೇರಿದಂತೆ 15 ಜನ ಸಾವನ್ನಪ್ಪಿರುವುದು ದೃಢಪಟ್ಟಿದೆ. ಪೊಖಾರದಿಂದ ಹೊರಟ್ಟಿದ್ದ 21 ಜನರಿದ್ದ ಅಗ್ನಿ ಸಂಸ್ಥೆ ವಿಮಾನ, ಜೊಂಸೊಮ್ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೀಡಾಗಿದೆ.

ಅಗ್ನಿ ಸಂಸ್ಥೆಯ Dornier 228 9N AIG ವಿಮಾನ ನೇಪಾಳ ಕಾಲಮಾನದ ಪ್ರಕಾರ ಬೆಳಗ್ಗೆ 9.46 ರ ಸುಮಾರಿಗೆ ಲ್ಯಾಂಡಿಂಗ್ ಆಗುವಾಗ ಅಪಘಾತ ಕಂಡಿದೆ. ಅಪಘಾತದ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ ಎಂದು ಅಗ್ನಿ ಸಂಸ್ಥೆ ನಿರ್ದೇಶಕ ಪ್ರಮೋದ್ ಪಾಂಡೆ ಹೇಳಿದ್ದಾರೆ.

13 ಜನ ಭಾರತೀಯರಲ್ಲದೆ ಮೂವರು ಮಕ್ಕಳು, ಇಬ್ಬರು ಡ್ಯಾನಿಷ್ ಪ್ರಜೆಗಳು ಹಾಗೂ ಪೈಲಟ್ ಪಿಎಸ್ ಪಾಠಕ್, ಕೋ ಪೈಲಟ್ ಎಚ್ ಡಿ ಮಹರಜನ್ ಹಾಗೂ ಒಬ್ಬ ಗಗನಸಖಿ ಇದ್ದರು ಎಂದು ತಿಳಿದು ಬಂದಿದೆ.

ಘಟನೆಯಲ್ಲಿ ಗಾಯಗೊಂಡ 6 ಜನರನ್ನು ಪೊಖಾರ ಕಾಲೇಜ್ ಆಫ್ ಮೆಡಿಸನ್ ಸೈನ್ಸಸ್ ಗೆ ಸೇರಿಸಲಾಗಿದ್ದು, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 0097714423702 ಹಾಗೂ 0097714410900/Ext 4109

ಪ್ರಯಾಣಿಕರ ಪಟ್ಟಿ ಪ್ರಕಾರ ಆನ್ ಬೋರ್ಡ್ ಆದ 16 ಜನ ಭಾರತೀಯರ ಹೆಸರುಗಳು ಈ ರೀತಿ ಇದೆ:
* ಕೆ.ಮಾಮಾನ್ಯ
* ಎಂ. ಹಾಂಡ
* ಎಂ ಅರೋರ
* ಕೆ ಅರೋರ
* ಟಿ ಸಚದೇವ್
* ಜಿ ಸಚದೇವ್
* ಸಾನಿಯಮ್ ಸುಧರ್
* ಜಿ.ರಾಮನ್
* ಕಿಡಾಂಬಿ ತಿರುಮಲ
* ಲತಾ ಎಚಾಂಬಡೆ
* ಶ್ರೀವ ಕಿಡಾಂಬಿ ತಿರುಮಲ
* ಶ್ರೀಪಾದ ಕಿಡಾಂಬಿ ತಿರುಮಲ
* ಕುಮಾರ್
* ಶ್ರೀಮತಿ ಕುಮಾರ್

ಈ ಪೈಕಿ 13 ಜನ ಮಾತ್ರ ಸಾವನ್ನಪ್ಪಿದ್ದಾರೆ. ಗಾಯಗೊಂಡ ಮಕ್ಕಳಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸೆಪ್ಟೆಂಬರ್ 25, 2011ರಲ್ಲಿ ಮೌಂಟ್ ಎವೆರೆಸ್ಟ್ ವೀಕ್ಷಣೆಗೆ ತೆರಳಿದ್ದ 19 ಜನ ಪ್ರಯಾಣಿಕರ ಬುದ್ಧ ವಿಮಾನ ಅಪಘಾತಕ್ಕೀಡಾಗಿತ್ತು.. ಈ ದುರಂತದಲ್ಲಿ ವಿಮಾನದಲ್ಲಿದ್ದ 18 ಜನ ಸಾವನ್ನಪ್ಪಿದ್ದರು. ಮೃತರಲ್ಲಿ 10 ಮಂದಿ ಭಾರತೀಯರು ಇದ್ದರು.

English summary
A plane carrying 21 people onboard crashed while trying to land at Jomsom Airport in Mustang district of Nepal.Fifteen people including 13 Indian tourists were killed in north-central Nepal on Monday morning
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X