ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೀಟರ್ ಬದಲಾಯಿಸೋಲ್ಲ: ಆಟೋ ಚಾಲಕರ ಪಟ್ಟು

By Srinath
|
Google Oneindia Kannada News

ಬೆಂಗಳೂರು, ಮೇ 14: ಬೆಂಗಳೂರಿನಲ್ಲಿ ಆಟೋ ಹತ್ತಬೇಕೆಂದರೆ ಮೀಟರ್ ಇರಲೇಬೇಕು. ಆದರೆ ಅದು ಆಟೋಗೆ ಅಲ್ಲ; ಬದಲಿಗೆ ಆಟೋ ಹತ್ತುವ ಪ್ರಯಾಣಿಕನಿಗೆ. ವಿಷಯ ಏನಪಾ ಅಂದರೆ ಸತತ ಆಟೋ ಗ್ಯಾಸ್ ದರ ಏರಿಕೆಯ ಬಿಸಿಯಲ್ಲಿ ಬೆಲೆ ಹೆಚ್ಚಳಕ್ಕೆ ಸರಕಾರ ತಥಾಸ್ತು ಎಂದಿದೆ. ಆಟೋ ಮಾಲೀಕರೂ ಅದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಆದರೂ ನಿಗದಿತ ಅವಧಿಯಲ್ಲಿ ಆಟೋ ಮೀಟರುಗಳನ್ನು ಬದಲಾಯಿಸಿಕೊಳ್ಳಿ ಎಂಬ ಸರಕಾರದ ಆದೇಶಕ್ಕೆ ಸೊಪ್ಪು ಹಾಕದೆ ಆಟೋ ಚಾಲಕರು ಮೊಂಡಾಟ ಶುರುಮಾಡಿದ್ದಾರೆ.

ನಗರದಲ್ಲಿ ಕೇವಲ ಶೇ. 25 ರಷ್ಟು ಆಟೋಗಳು ಪರಿಷ್ಕರಿಸಿದ ದರ ಸೂಚಿಸುವ ಮೀಟರುಗಳಿಗೆ ಬದಲಾಯಿಸಿಕೊಂಡಿವೆ. ಉಳಿದ ಆಟೋಗಳಲ್ಲಿ ಪ್ರಯಾಣಿಸುವುದು ಜನರಿಗೆ ದುಬಾರಿಯಾಗಿದೆ. ಚಾಲಕರು ಹೇಳಿದ ಬೆಲೆ ತೆತ್ತು ತೆಪ್ಪಗೆ ಹೋಗುತ್ತಿದ್ದಾರೆ. ಕಿತ್ತುಹೋಗಿರುವ ನಾಮಕ್ ಕೆ ವಾಸ್ತೆ ಪ್ರಯಾಣ ದರ ಪಟ್ಟಿಯನ್ನು ತೋರಿಸಿ ಇಂತಹ ಚಾಲಕರು ಪ್ರಯಾಣಿಕರನ್ನು ಗೋಳು ಹೊಯ್ದುಕೊಳ್ಳುತ್ತಿದ್ದಾರೆ.

ಆದರೆ ಆಟೋ ಚಾಲಕರು ಏನೇ ಮೊಂಡಾಟ ಮಾಡಿದರೂ ಅಂತಿಮವಾಗಿ ಉಳಿದೆಲ್ಲ ಆಟೋಗಳೂ ಸಹ ಪರಿಷ್ಕೃತ ಮೀಟರುಗಳನ್ನು ಅಳವಡಿಸಿಕೊಳ್ಳಲೇ ಬೇಕು. ಅವರಿಗೆ ಬೇರೆ ದಾರಿಯೇ ಇಲ್ಲ ಎಂದು ಮಾಪಕಗಳ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಮಾರ್ಚಿನಲ್ಲಿ ಆಟೋ ದರಗಳು ಪರಿಷ್ಕೃತವಾಗಿವೆ. ಮೂರು ತಿಂಗಳ ಕಾಲಾವಕಾಶ ನೀಡಿ, ಜೂನ್ 30ರೊಳಗಾಗಿ ಹೊಸ ಪ್ರಯಾಣ ದರ ಸೂಚಿಸುವ ಆಟೋ ಮೀಟರುಗಳಿಗೆ ಬದಲಾಯಿಸಿಕೊಳ್ಳುವಂತೆ ಸೂಚಿಸಲಾಗಿದೆ. ಹಾಗಾಗಿ ಸದ್ಯದಲ್ಲೇ ಎಲ್ಲ ಆಟೋಗಳಲ್ಲೂ ಹೊಸ ದರ ಸೂಚಿ ಮೀಟರುಗಳು ಕಾಣಿಸಿಕೊಳ್ಳಲಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಮಧ್ಯೆ, ದುಬಾರಿ ದರ ಪೀಕುವ ಆಟೋ ಚಾಲಕನನ್ನು ನೇರವಾಗಿ ಠಾಣೆಯ ಮುಂದೆ ತಂದು ನಿಲ್ಲಿಸಿದರೆ, ಅಥವಾ ಅಂತಹ ಆಟೋಗಳ ಬಗ್ಗೆ ದೂರು ನೀಡಿದರೆ ಖಂಡಿತ ಚಾಲಕರ ವಿರುದ್ಧ ಕ್ರಮ ಜರುಗಿಸುವುದಾಗಿ ಟ್ರಾಫಿಕ್ ಪೊಲೀಸರು ಹೇಳಿದ್ದಾರೆ.

ಆದರೆ ಎಷ್ಟು ಮಂದಿ ಠಾಣೆಯ ಮೆಟ್ಟಿಲು ಏರುತ್ತಾರೋ ಆ ಭಗವಂತನೇ ಬಲ್ಲ. ಅದರಲ್ಲೂ ಮಕ್ಕಳು ಮರಿಗಳೊಂದಿಗೆ ಆಟೋ ಹತ್ತಿ ಹೋಗುವ ಕುಟುಂಬಸ್ಥರು ಪೊಲೀಸ್ ಠಾಣೆಗೆ ಹೋಗಲು ಹಿಂಜರಿಯುವುದೇ ಹೆಚ್ಚು. ಹಾಳಾಗಿ ಹೀಗಲಿ ಎಂದು ಗೊಣಗಿಕೊಳ್ಳುತ್ತಾ, ಅಸಹಾಯಕರಾಗಿ ಹೆಚ್ಚು ದುಡ್ಡು ನೀಡಿ, ಕೈತೊಳೆದುಕೊಳ್ಲುವುದೇ ಹೆಚ್ಚು. ಈ ಆಟೋದವರು ಯಾವಾಗ ಪ್ರಯಾಣಿಕರ- ಸ್ನೇಹಿಯಾಗುತ್ತಾರೋ ಆ ಭಗವಂತನೇ ಬಲ್ಲ.

English summary
The Bangalore auto drivers have no choice but to get their meters recalibrated. They were given three months to do so after auto fares were revised in March. But the deadline for calibrating auto meters has lapsed, not even a fourth of the city’s autos have their auto meters recalibrated as per the revised fare.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X