• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗೆಜ್ಜೆ ಪೂಜೆ ತರಬೇತಿ ಕೇಂದ್ರಕ್ಕೆ ಗುದ್ದಲಿ ಪೂಜೆ

By Prasad
|

ಸ್ಪೇನ್, ಮೇ 11 : ಯೂರೋಪಿನಲ್ಲಿ ಆರ್ಥಿಕ ಸ್ಥಿತಿ ನೆಗೆದುಬಿದ್ದು ಹೋಗಿದೆ. ಚೇತರಿಕೆಗೊಳ್ಳುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಹೀಗಿರುವ ಸ್ಥಿತಿಯಲ್ಲಿ ಆರ್ಥಿಕ ಭದ್ರತೆ ಕಂಡುಕೊಳ್ಳಲು ನಾನಾ ದಾರಿಗಳನ್ನು ಕಂಡುಕೊಳ್ಳುತ್ತಿದ್ದಾರೆ. ಅವುಗಳಲ್ಲೊಂದು ವೇಶ್ಯಾವಾಟಿಕೆ ತರಬೇತಿ ನೀಡುವುದು.

'ತರಬೇತಿ ಪಡೆದು ಪದವಿ ಗಳಿಸಿದರೆ ಕೆಲಸ ಗ್ಯಾರಂಟಿ' ಎಂಬ ಒಕ್ಕಣಿಯೊಂದಿಗೆ ವ್ಯಾಲೆಂಟಿಕಾದಲ್ಲಿ ತರಬೇತಿ ಕೇಂದ್ರ ಸ್ಥಾಪಿಸಿರುವ ಸ್ಪಾನಿಷ್ ಕಂಪನಿ ಭಾರೀ ವಿವಾದದಲ್ಲಿ ಸಿಲುಕಿದೆ. ಕೇವಲ 100 ಪೌಂಡ್‌ಗೆ ಅತ್ಯಂತ ಪ್ರಚೀನವಾದ ವೃತ್ತಿಯ ಇತಿಹಾಸದ ಅಧ್ಯಯನ, ಕಾಮಸೂತ್ರದ ಭಂಗಿಗಳು ಹೇಗೆ, ಕಾಮದ ಆಟಿಕೆಗಳನ್ನು ಸಲಲಿತವಾಗಿ ಬಳಸುವುದು ಹೇಗೆ ಎಂಬಿತ್ಯಾದಿ ತರಬೇತಿಗಳನ್ನು ನೀಡುವುದಾಗಿ ಕಂಪನಿ ಹೇಳಿದೆ.

ಇಷ್ಟು ಮಾತ್ರವಲ್ಲ, ತರಬೇತಿಯ ವಿವರಗಳನ್ನೊಳಗೊಂಡ ಮಾಹಿತಿಯನ್ನು ಎಲ್ಲ ವಿಶ್ವವಿದ್ಯಾಲಯಗಳಿಗೆ ಕಂಪನಿ ರವಾನಿಸಿದೆ. ತರಬೇತಿ ಪಡೆಯಿರಿ ವೇಶ್ಯಾವಾಟಿಕೆಯಲ್ಲಿ ಕೆಲಸ ಗಿಟ್ಟಿ ಹಣ ಸಂಪಾದಿಸಿ ಎಂಬ ಸಂದೇಶ ರವಾನಿಸುತ್ತಿದೆ. ಈ ಪ್ರಾಂತ್ಯ ಸ್ವೇಚ್ಛಾಚಾರಕ್ಕೆ ಸಂಬಂಧಿಸಿದಂತೆ ಹೆಚ್ಚು ಮುಕ್ತವಾಗಿದ್ದರೂ, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಒಂದು ವಾರದ ತರಬೇತಿ ಕಾರ್ಯಕ್ರಮಕ್ಕೆ 19ರಿಂದ 40 ವರ್ಷದೊಳಗಿನ 90 ಜನರು ಈಗಾಗಲೆ ನೊಂದಾಯಿಸಿಕೊಂಡಿದ್ದಾರೆ. ಪ್ರತಿದಿನ 2 ಗಂಟೆಗಳ ಕಾಲ ವೇಶ್ಯಾವಾಟಿಕೆ ನಡೆಸಲು ಬೇಕಾಗಿರುವ ಸರ್ವರೀತಿಯ ತರಬೇತಿಗಳನ್ನು ಇಲ್ಲಿ ನೀಡಲಾಗುತ್ತದೆ. ಆರ್ಥಿಕವಾಗಿ ಸದೃಢವಾಗಬೇಕಾಗಿರುವುದೇನೋ ನಿಜ. ಆದರೆ, ಗೆಜ್ಜೆ ಪೂಜೆ ತರಬೇತಿ ಕೇಂದ್ರ ಬೇಕಿತ್ತಾ? ಎಂದು ಜನ ಕೇಳುತ್ತಿದ್ದಾರೆ.

English summary
In the time of recession a Spanish company has opened prostitution training centre in Valentica. History of oldest profession, how to use erotic toys for better satisfaction and using popular positions of Kamasutra are taught in the training centre. But, it is facing ire of public.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X