ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರೈಸ್ತರಿಗೆ ಗೃಹ ಸಾಲದ ಮೇಲಿನ ಬಡ್ಡಿ ಮನ್ನಾ

By Srinath
|
Google Oneindia Kannada News

dk-christians-home-loan-interest-waiver
ಮಂಗಳೂರು, ಮೇ 11: ದಕ್ಷಿಣ ಕನ್ನಡ ಜಿಲ್ಲೆಯ ಕ್ರೈಸ್ತ ಸಮುದಾಯದವರು ಸರಕಾರಿ ಬ್ಯಾಂಕುಗಳಿಂದ ಪಡೆದಿರುವ ಗೃಹ ಸಾಲಗಳ ಮೇಲಿನ ಬಡ್ಡಿಯನ್ನು ಮನ್ನಾ ಮಾಡಲಾಗಿದೆ. ರಾಜ್ಯ ಸರಕಾರದ ಕ್ರೈಸ್ತ ಸಮುದಾಯದವರ ಅಭಿವೃದ್ಧಿ ಯೋಜನೆಯಡಿ ಗರಿಷ್ಠ ಒಂದು ಲಕ್ಷ ರುಪಾಯಿವರೆಗೆ ಈ ಸವಲತ್ತು ಕಲ್ಪಿಸಲಾಗಿದೆ.

ಈ ಯೋಜನೆಯಡಿ 2007ರ ನಂತರದ ಬಡ್ಡಿಯನ್ನು ನೇರವಾಗಿ ಆಯಾ ಬ್ಯಾಂಕುಗಳಿಗೆ Karnataka Minorities Development Corporation (KMDC) ಸಂಸ್ಥೆ ನೇರವಾಗಿ ಪಾವತಿಸಲಿದೆ. ಫಲಾನುಭವಿಗಳು ಇದನ್ನು ಮರುಪಾವತಿಸುವ ಅಗತ್ಯವಿರುವುದಿಲ್ಲ ಎಂದು KMDC ಅಧ್ಯಕ್ಷ ಎನ್ ಬಿ ಅಬೂಬಕ್ಕರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ವಾರ್ಷಿಕ 1.5 ಲಕ್ಷ ರುಪಾಯಿಗಿಂತ ಕಡಿಮೆ ಆದಾಯವಿರುವ ಕ್ರೈಸ್ತ ಕುಟುಂಬಗಳು ಈ ಸೌಲಭ್ಯದ ಪ್ರಯೋಜನ ಪಡೆಯಬಹುದಾಗಿದೆ. ಜಿಲ್ಲೆಯಲ್ಲಿ 164 ಫಲಾನುಭವಿಗಳನ್ನು ಗುರುತಿಸಲಾಗಿತ್ತು, 1.23 ಕೋಟಿ ರುಪಾಯಿ ಬಡ್ಡಿ ಮನ್ನಾ ಆಗಲಿದೆ. ಕನಿಷ್ಠ 1 ಲಕ್ಷ ಮತ್ತು ಗರಿಷ್ಠ 5 ಲಕ್ಷ ರುಪಾಯಿ ಗೃಹ ಸಾಲ ಪಡೆದವರಿಗೆ ಇದು ಲಭ್ಯವಾಗಲಿದೆ ಎಂದು ಅವರು ಹೇಳಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 5,771 ಮಂದಿ ಕ್ರೈಸ್ತರಿಗೆ ಆರ್ಥಿಕವಾಗಿ ನೆರವಾಗಲು ನಾನಾ ಯೋಜನೆಗಳಡಿ 10.71 ಕೋಟಿ ರು. ನಿಧಿಯಿದೆ.

English summary
Members of Christian community in Dakshina Kannada, who have borrowed money from public sector banks to build houses, will get an interest waiver upto Rs 1 lakh under the state government's Christian Development Scheme under KMDC.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X