ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಲೇ! ಸದಾನಂದ ಗೌಡರ ಕಚೇರಿಗೂ ಬಂತು ಸಕಾಲ

By Mahesh
|
Google Oneindia Kannada News

CM DV Sadananda Gowda
ಬೆಂಗಳೂರು, ಮೇ.10: ಮುಖ್ಯಮಂತ್ರಿಗಳ ಕಚೇರಿ(CMO), ಗ್ರಾಮ ಪಂಚಾಯಿತಿ ಸೇರಿದಂತೆ ಎಲ್ಲಾ ಸರ್ಕಾರಿ ಕಚೇರಿಗಳು ಸೇವಾ ಖಾತ್ರಿ ಯೋಜನೆ 'ಸಕಾಲ'ಕ್ಕೆ ಒಳಪಡಲಿದೆ ಎಂದು ಮುಖ್ಯಮಂತ್ರಿ ಸಿಎಂ ಸದಾನಂದ ಗೌಡ ಹೇಳಿದ್ದಾರೆ.

ಸಿಎಂ ಕಚೇರಿ ಆನ್ ಲೈನ್ ಲೈವ್ ನೋಡುವ ಸೌಲಭ್ಯ ಒದಗಿಸಿದ ನಂತರ ಈಗ ಕಚೇರಿಯ ಕಾರ್ಯ ನಿರ್ವಹಣೆಯನ್ನು ಸಾರ್ವಜನಿಕರು ನೇರವಾಗಿ ಪ್ರಶ್ನಿಸುವ ಅವಕಾಶವನ್ನು ಕಲ್ಪಿಸಿದ್ದಾರೆ.

ಗುರುವಾರ(ಮೇ.10) 35 ಕೋಟಿ ರು ವೆಚ್ಚದ ಕಂದಾಯ ಭವನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಸದಾನಂದ ಗೌಡ, ಸಕಾಲದಿಂದ ಸರ್ಕಾರಿ ಕೆಲಸದಲ್ಲಿ ಪಾರದರ್ಶಕತೆ ಮೂಡಿಸಬಹುದು ಎಂದರು.

ಸಕಾಲದಲ್ಲಿ ಮಾಹಿತಿ ನೀಡಿದ ಅಧಿಕಾರಿಗಳು ಅರ್ಜಿದಾರರಿಗೆ ದಿನವೊಂದಕ್ಕೆ 20 ರು. ನಂತೆ ವೆಚ್ಚ ಭರಿಸಬೇಕಾಗುತ್ತದೆ. ಇದುವರೆವಿಗೂ 10 ಲಕ್ಷ ಅರ್ಜಿಗಳನ್ನು ಸ್ವೀಕರಿಸಲಾಗಿದೆ.

ಸಕಾಲದ ಅಡಿಯಲ್ಲಿರುವ 11 ಇಲಾಖೆಯ 151 ಸೇವೆಗಳಿಗೆ ಇನ್ನೂ 40 ಸೇವೆಗಳನ್ನು ಸೇರಿಲಾಗುವುದು. ಎಸ್ ಎಂಎಸ್ ಮೂಲಕ ಅರ್ಜಿಯ ಕಾರ್ಯ ಪ್ರಗತಿಯ ಮೇಲೆ ನಿಗಾ ಇಡಬಹುದು ಎಂದು ಸದಾನಂದ ಗೌಡರು ಹೇಳಿದರು.

ಉಳಿದಂತೆ 17 ಸುವರ್ಣ ಸೌಧ ಯೋಜನೆಗಳು, 20 ಲಕ್ಷ ಆಶ್ರಯ ಮನೆಗಳನ್ನು ಕಟ್ಟಲಾಗುವುದು. 40 ಲಕ್ಷ ಜನರಿಗೆ ಸೂರು ಒದಗಿಸವುದು ನಮ್ಮ ಉದ್ದೇಶ ಎಂದು ಸದಾನಂದ ಗೌಡ ತಿಳಿಸಿದರು.

English summary
Karnataka CM Sadananda Gowda's Office will come under Sakala, Guarantee of Services Act. Over 10 lakh applications had been filed under the scheme, 40 services will be added to the existing 151 services said CM Sadananda Gowda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X