• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಥಟ್ ಅಂತ ಹೇಳಿ

By Prasad
|

ಬೆಂಗಳೂರು, ಮೇ. 8 : ಸತತ ಹತ್ತು ವರ್ಷಗಳ ಕಾಲದಿಂದ ಬೆಂಗಳೂರು ದೂರದರ್ಶನ 'ಚಂದನ' ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರಸಾರವಾಗುತ್ತಿರುವ ಜನಪ್ರಿಯ ರಸಪ್ರಶ್ನೆ ಕಾರ್ಯಕ್ರಮ 'ಥಟ್ ಅಂತ ಹೇಳಿ' ರಾಷ್ಟ್ರೀಯ ದಾಖಲೆ ಸ್ಥಾಪಿಸಿದ್ದು, ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಸೇರಿದೆ.

ಜನವರಿ 4ರ 2002ರಿಂದ ಇಂದಿನವರೆಗೆ ಒಂದೂ ಬಿಡುವು ತೆಗೆದುಕೊಳ್ಳದಂತೆ ಥಟ್ ಅಂತ ಹೇಳಿ ಕಾರ್ಯಕ್ರಮ ಪ್ರಸಾರವಾಗಿದ್ದಕ್ಕೆ ಈ ಪ್ರಶಸ್ತಿ ಲಭಿಸಿದೆ. ಪ್ರಾರಂಭವಾದಾಗ ವಾರದಲ್ಲಿ ಮೂರು ದಿನ ಬರುತ್ತಿದ್ದ ಕಾರ್ಯಕ್ರಮ ಈಗ ವಾರದಲ್ಲಿ ಐದು ದಿನ ಪ್ರಸಾರವಾಗುತ್ತಿದೆ. ಕಾರ್ಯಕ್ರಮದ ರೂವಾರಿಯಾಗಿರುವ ಡಾ. ನಾ. ಸೋಮೇಶ್ವರ ಮತ್ತು ತಂಡಕ್ಕೆ ಒನ್ಇಂಡಿಯಾ ಕನ್ನಡದ ಅಭಿನಂದನೆಗಳು.

ಜೂನ್ 30, 2011ರವರೆಗೆ 1,756 ಎಪಿಸೋಡುಗಳನ್ನು ಥಟ್ ಅಂತ ಹೇಳಿ ಕಾರ್ಯಕ್ರಮ ಪೂರೈಸಿದೆ ಎಂದು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನ ಪುಸ್ತಕದ ಸಂಪಾದಕರಾಗಿರುವ ವಿಜಯ ಘೋಷ್ ಅವರು ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.

ಕನ್ನಡ ನಾಡು, ನುಡಿಯ ಬಗ್ಗೆ ಜ್ಞಾನದಾಹ ಹೆಚ್ಚಿಸುತ್ತಿರುವ ಈ ಕಾರ್ಯಕ್ರಮದಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು. ಕನ್ನಡ ಪುಸ್ತಕ ಓದುವ ಅಭಿರುಚಿ ಇದ್ದರೆ ಈ ರಸಪ್ರಶ್ನೆಯಲ್ಲಿ ಭಾಗವಹಿಸಿ ಮತ್ತು ನಾನಾ ಲೇಖಕರು ಬರೆದಿರುವ ನಾನಾ ಬಗೆಯ ಕನ್ನಡ ಪುಸ್ತಕಗಳನ್ನು ಬಹುಮಾನವಾಗಿ ಗೆಲ್ಲಿರಿ. ಥಟ್ ಅಂತ ಹೇಳಿ ಕಾರ್ಯಕ್ರಮ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 10.30ರಿಂದ 11 ಗಂಟೆಯವರೆಗೆ ಪ್ರಸಾರವಾಗುತ್ತದೆ.

ಸದ್ಯ ಎಲ್ಲರ ಕಣ್ಣು ಕೋಟಿ ರು. ಗೆಲ್ಲುವ ಆಮಿಷ ಒಡ್ಡುವ ಸುವರ್ಣ ವಾಹಿನಿಯಲ್ಲಿ ಬರುತ್ತಿರುವ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದ ಮೇಲೆ ಬಿದ್ದಿದೆ. ಆದರೆ, ಉತ್ತಮ ಕನ್ನಡ ಪುಸ್ತಕಗಳನ್ನು ಓದುವ ಅಭಿರುಚಿ ಬೆಳೆಸುತ್ತಿರುವ ಡಾ. ನಾ. ಸೋಮೇಶ್ವರ್ ಅವರ 'ಥಟ್ ಅಂತ ಹೇಳಿ' ಕಾರ್ಯಕ್ರಮ ಕೋಟಿ ಕೋಟಿ ಕನ್ನಡಿಗರ ಹೃದಯ ಗೆದ್ದಿದೆ. ಡಾ. ನಾ. ಸೋಮೇಶ್ವರ ಅವರಿಗೆ ಥಟ್ ಅಂತ ಒಂದು ಕಂಗ್ರಾಟ್ಸ್ ಹೇಳಿಬಿಡಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
That Anta Heli, quiz program, conducted by Dr. Na. Someswara has been included in Limca Book of Records for continuously airing it from 4th Jan, 2002 till date. Though it cannot offer Rs. 1 Cr, it has won hearts of 1 Cr Kannada people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more