ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಜ್ ಯಾತ್ರೆ ಸಬ್ಸಿಡಿ, ಸುಪ್ರೀಂಕೋರ್ಟ್ ಆಕ್ಷೇಪ

By Mahesh
|
Google Oneindia Kannada News

SC on Haj Subsidy
ನವದೆಹಲಿ, ಮೇ.8: ಹಜ್ ಯಾತ್ರಿಗಳಿಗೆ ನೀಡುವ ಅನುದಾನದ ಬಗ್ಗೆ ಸುಪ್ರೀಂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ. ಸಬ್ಸಿಡಿ ನೀಡುವಲ್ಲಿ ಯುಪಿಎ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಸುಪ್ರೀಂಕೋರ್ಟ್ ಮಂಗಳವಾರ (ಮೇ.8) ಪ್ರಶ್ನಿಸಿದೆ.

ಹಜ್ ಯಾತ್ರೆಗೆ ನೀಡುತ್ತಿದ್ದ ಅನುದಾನಕ್ಕೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿತ್ತು. ಮುಸ್ಲಿಮರಿಗೆ ಸಬ್ಸಿಡಿಯನ್ನು 5 ವರ್ಷಗಳಿಗೊಮ್ಮೆ ಬದಲಾಗಿ ಜೀವಮಾನದಲ್ಲಿ ಒಮ್ಮೆ ಮಾತ್ರ ನೀಡಲು ನಿರ್ಧರಿಸಲಾಗಿದೆ ಎಂದು ಸುಪ್ರೀಂ ಕೋರ್ಟಿಗೆ ಕೇಂದ್ರ ಸರ್ಕಾರ ಏಪ್ರಿಲ್ 16ರಂದು ಅಫಿಡವಿಟ್ ಸಲ್ಲಿಸಿತ್ತು.

ಇದನ್ನು ಅನುಮೋದಿಸಿರುವ ನ್ಯಾ ಅಲ್ತಮಾಸ್ ಕಬೀರ್ ಹಾಗೂ ರಂಜನಾ ಪ್ರಕಾಶ್ ದೇಸಾಯಿ ಅವರಿದ್ದ ಪೀಠ ನೀಡಿರುವ ಆದೇಶದಲ್ಲಿ ಯಾತ್ರಿಗಳ ಜೊತೆ ಪ್ರಧಾನಿ ಮಂತ್ರಿಗಳ ನಿಯೋಗ ತೆರಳುವುದಕ್ಕೂ ನಿರ್ಬಂಧ ವಿಧಿಸಲಾಗಿದೆ. ಹಜ್ ಸಮಿತಿ ಯಾತ್ರಾರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಬಗ್ಗೆ ಕೋರ್ಟ್ ನಿಗಾವಹಿಸಲು ನಿರ್ಧರಿಸಿದೆ. ಅನುದಾನವನ್ನು 10 ವರ್ಷದೊಳಗೆ ನೀಡದಿದ್ದರೆ ಸಬ್ಸಿಡಿ ತೆಗೆದು ಹಾಕಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ.

ಹಜ್ ಯಾತ್ರೆ ಬಗ್ಗೆ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲೂ ಭಾರಿ ಚರ್ಚೆ ನಡೆದಿದೆ. ನಿಮ್ಮ ಅಭಿಪ್ರಾಯ @OneindiaKannada ಗೆ ತಿಳಿಸಿ #haj Tag ಬಳಸಿದರೆ ಇನ್ನೂ ಉತ್ತಮ. ಈ ಕ್ಷಣ ಬಂದ ಒಂದು ಪ್ರತಿಕ್ರಿಯೆ ಹೀಗಿದೆ... RT: @KiranKS: Est Haj subsidy by "secular" India for 10 years= Rs.8,500,00,00,000. At Rs.22 calc, govt can feed 13 CRORE rural poor for a MONTH with that!

ಸರ್ಕಾರ ಸಲ್ಲಿಸಿದ ಅಫಿಡವಿಟ್ ನ ಅಂಶಗಳು: 2012ನೆ ಸಾಲಿಗೆ ನೀಡಲಾಗುವ ಹಜ್ ಸಬ್ಸಿಡಿ ಮೊತ್ತವನ್ನು ಬಹಿರಂಗಪಡಿಸಲು ಸರ್ಕಾರ ನಿರಾಕರಿಸಿತ್ತು. ಹಾಜಿಗಳು ತಮ್ಮ ಹಜ್ ಪ್ರವಾಸ ಮುಗಿಸಿ ಭಾರತಕ್ಕೆ ಮರಳಿದ ಬಳಿಕವೇ ಅದರ ನಿಖರವಾದ ಮೊತ್ತ ತಿಳಿಯುವುದೆಂದು ಸರ್ಕಾರ ಕೋರ್ಟಿಗೆ ತಿಳಿಸಿತ್ತು.

70 ವರ್ಷಗಳ ಮೇಲಿನವರಿಗೆ ಹಾಗೂ ಈ ಹಿಂದೆ ಅರ್ಜಿ ಸಲ್ಲಿಸಿಯೂ ಅವಕಾಶ ದೊರೆಯದವರಿಗೆ ಆದ್ಯತೆ ನೀಡಲಾಗುವುದು ಎಂದು ಸರ್ಕಾರ ಹೇಳಿದೆ. ಆದರೆ, ಹಜ್ ಯಾತ್ರಿಗಳ ಜೊತೆ 9-10 ಅಧಿಕಾರಿಗಳನ್ನು ಕಳಿಸುವುದನ್ನು ಕೂಡಲೇ ನಿಲ್ಲಿಸಬೇಕು. ಸರ್ಕಾರ ಹಜ್ ಯಾತ್ರೆಯನ್ನು ರಾಜಕೀಯ ಉದ್ದೇಶಕ್ಕೆ ಬಳಸಬಾರದು ಎಂದು ಸುಪ್ರೀಂಕೋರ್ಟ್ ಎಚ್ಚರಿಸಿದೆ.

English summary
The Supreme Court today(May.8) invalidated the Centre's policy of giving subsidies to Haj pilgrims. The Court has directed Centre to eliminate the policy of Haj subsidies over a period of ten years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X