ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರಪತಿ ಆಗ್ತೀರಾ? ನೋ ಕಾಮೆಂಟ್ಸ್ : ಇನ್ಫಿ ಮೂರ್ತಿ

By Mahesh
|
Google Oneindia Kannada News

Naryana Murthy
ಹೈದರಾಬಾದ್‌, ಮೇ.7: ಸಾರ್ ನಿಮಗೆ ರಾಷ್ಟ್ರಪತಿಯ ಅಭ್ಯರ್ಥಿಯಾಗಲು ಅವಕಾಶ ಸಿಕ್ಕರೆ ಒಪ್ಪಿಕೊಳ್ಳುತ್ತಿರಾ? ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿ ಅವರ ಮುಖಭಾವದಲ್ಲಿ ಏನೋ ನಿರ್ಲಕ್ಷ್ಯ ಭಾವ ಕಾಣಬಹುದಿತ್ತು. ಹಿಂದೊಮ್ಮೆ ರಾಷ್ಟ್ರಪತಿ ಸ್ಥಾನಕ್ಕೆ ಆಫರ್ ಬಂದರೆ ಒಪ್ಪಿಕೊಳ್ಳುವುದಾಗಿ ಇನ್ಫಿಮೂರ್ತಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

'ಇದು ಅಸಮಂಜಸವಾದ ಪ್ರಶ್ನೆ, ಈ ವಿಷಯದ ಕುರಿತು ಯಾರೂ ಮಾತನಾಡಬಾರದು, ಈ ವಿಷಯದಲ್ಲಿ ಪರಿಣತರು ತೀರ್ಮಾನ ಕೈಕೊಳ್ಳುತ್ತಾರೆ. ಮತ್ತು ಇದರ ಬಗ್ಗೆ ಚರ್ಚಿಸಲು ನಾನ್ಯಾರು' ಎಂದು ಸಿಡುಕಿನಿಂದಲೇ ಉತ್ತರಿಸಿದರು.

ಉತ್ತಮ ರಾಷ್ಟ್ರಪತಿ ಅಭ್ಯರ್ಥಿಯನ್ನು ರಾಜಕೀಯ ಪಕ್ಷಗಳ ನಾಯಕರೇ ಆಯ್ಕೆ ಮಾಡಲಿದ್ದಾರೆ. ಅದು ಅವರಿಗೆ ಬಿಟ್ಟ ವಿಚಾರ. ಇದರ ಬಗ್ಗೆ ಚರ್ಚಿಸಲು ಮನಸಿಲ್ಲ ಎಂಬಂತೆ ಇನ್ಫಿ ಮೂರ್ತಿ ಹೆಚ್ಚಿನ ಚರ್ಚೆಯನ್ನು ನಿರಾಕರಿಸಿದರು.

ಸೋಮವಾರ(ಮೇ.7) ಇಲ್ಲಿನ ಜವಾಹರ್‌ ಲಾಲ್‌ ನೆಹರು ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರಪತಿ ಅಭ್ಯರ್ಥಿ ಬಗ್ಗೆ ಪ್ರಮುಖ ರಾಜಕೀಯ ನಾಯಕರು ಕೈಗೊಳ್ಳಲಿದ್ದಾರೆ. ಯಾರು ಅಭ್ಯರ್ಥಿ ಆಗಬೇಕು, ಆಗಬಾರದು ಎಂದು ನಾನು ಆಲೋಚಿಸುವುದಿಲ್ಲ. ಈ ವಿಷಯದ ಕುರಿತು ಚರ್ಚಿಸಲು ನಾನು ಸೂಕ್ತ ವ್ಯಕ್ತಿಯಲ್ಲ ಎಂದು ಇನ್ಫೋಸಿಸ್‌ನ ಮಾಜಿ ಅಧ್ಯಕ್ಷ ಎನ್‌ ಆರ್‌ ನಾರಾಯಣ ಮೂರ್ತಿ ಹೇಳಿದರು.

English summary
Narayanamurthy stays out of president debate, says let political leaders choose best president for India. About his candidature for the election he said Let us all keep quiet and let us leave it to experts in this and let them decide. Who I am to make any comment?.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X