ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಭೋಗ ಒಲ್ಲೆ ಎಂದ ಗಂಡನಿಗೆ ಹೆಂಡತಿ ವಿಚ್ಛೇದನ

By Srinath
|
Google Oneindia Kannada News

court-grants-divorce-to-unemployed-wife
ನವದೆಹಲಿ, ಮೇ 8: ಡೈವೋರ್ಸ್‍ ಪ್ರಕರಣಗಳಲ್ಲಿ ಇದು ನಿಜಕ್ಕೂ ವಿಶಿಷ್ಟವಾಗಿದೆ. ಸಂಭೋಗಕ್ಕೆ ಒಲ್ಲೆ ಅಂದ ಗಂಡನೊಂದಿಗೆ ವಿಚ್ಛೇದನ ಬಯಸಿದ ಮಹಿಳೆಗೆ ದೆಹಲಿ ಹೈಕೋರ್ಟ್ ತಥಾಸ್ತು ಅಂದಿದೆ. ಸಂಭೋಗ, ದೈಹಿಕ ಸಂಪರ್ಕ ನಿರಾಕರಿಸುವುದು ಕೌಟುಂಬಿಕ ಕ್ರೌರ್ಯ ಎಂಬುದನ್ನು ಪುನರುಚ್ಚರಿಸಿರುವ ನ್ಯಾಯಾಲಯ ಸಂಭೋಗ ಒಲ್ಲೆ ಎಂದ ಗಂಡನಿಂದ ಸಂಭೋಗದಾಸಿ ಪತ್ನಿಗೆ ಡೈವೋರ್ಸ್‍ ದಯಪಾಲಿಸಿದೆ.

ಏನಾಯಿತೆಂದರೆ ಸದರಿ ಪತ್ನಿ ವಿವಾಹಕ್ಕೆ ಮುನ್ನ 'ತಾನು ಕೆಲಸಕ್ಕೆ ಹೋಗುತ್ತಿರುವುದಾಗಿ' ಪತಿರಾಯನಿಗೆ ತಿಳಿಸಿದ್ದರು. ಆದರೆ ಮದುವೆಯಾಗಿ ಒಂದು ತಿಂಗಳು ಆಗಿರಲಿಲ್ಲ ತನ್ನ ಪತ್ನಿ ಕೆಲಸಕ್ಕೆ ಹೋಗುತ್ತಿಲ್ಲ ಎಂಬುದು ಆತನ ಅರಿವಿಗೆ ಬಂತು. ಮತ್ತೆ, matrimonial advertisement ನಲ್ಲಿ ನೀಡಿದ್ದ biodata ದಲ್ಲಿ ಕೆಲಸದಲ್ಲಿದ್ದೇನೆ ಎಂದು ತಿಳಿಸಿದ್ದೇಕೆ ಎಂದು ಪತಿರಾಯ ವರಾತ ತೆಗೆದಿದ್ದರು.

'ಮೊದಲು ನಿನ್ನ ಶೈಕ್ಷಣಿಕ ಸರ್ಟಿಫಿಕೇಟುಗಳು ಹಾಗೂ ಉದ್ಯೋಗ ಪತ್ರ ತೋರಿಸು, ಆಮೇಲಷ್ಟೇ ಸಂಭೋಗ ಅದೂ ಇದೂ' ಅಂತ ಖುಲ್ಲಂಖುಲ್ಲ ಸ್ಪಷ್ಟಪಡಿಸಿದ್ದಾರೆ. ಇದನ್ನು ಖಂಡಿಸಿ, ಪತ್ನಿ ಸೀದಾ ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ.

ಜಡ್ಜ್ ಸಾಹೇಬರು ಪತಿರಾಯನ ಪ್ರತಿವಾದವನ್ನು ಭಾಗಶಃ ಅನುಮೋದಿಸುತ್ತಾ, ಇಂದಿನ ದುಬಾರಿ ಜೀವನದಲ್ಲಿ ಖರ್ಚುವೆಚ್ಚ ಸರಿದೂಗಿಸಲು ಗಂಡ-ಹೆಂಡತಿ ಇಬ್ಬರೂ ಅನಿವಾರ್ಯವಾಗಿ ಕೆಲಸಕ್ಕೆ ಹೋಗಬೇಕಾಗಿದೆ. ಇಂತಹ ದಂಪತಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹೇಳಿದರು.

ಆದರೆ... ಅದನ್ನೇ ನೆಪವಾಗಿಸಿಕೊಂಡು ಉದ್ಯೋಗ, ಸಂಬಳಕ್ಕೇ ಒತ್ತು ನೀಡುವುದು, ಆದ್ಯತೆ ನೀಡುವುದು ದುರದೃಷ್ಟಕರ. ಇದರಿಂದಲೇ, ಮದುವೆ ವಿಚಾರದಲ್ಲಿ ಪ್ರಧಾನವಾಗಿ ಪರಿಗಣಿತವಾಗುವ ಸಂಭೋಗ, ದೈಹಿಕ ಸಂಪರ್ಕವನ್ನು ನಿರಾಕರಿಸುವುದು ಆಶ್ಚರ್ಯಕರ ಮತ್ತು ಆಘಾತಕಾರಿ ಎಂದು ಮಹಿಳೆಯ ಪರ ತೀರ್ಪು ನೀಡುತ್ತಾ ಜಡ್ಜ್ ಹೇಳಿದ್ದಾರೆ.

ಭವಿಷ್ಯದಲ್ಲಿ ತಮಗೆ ಮಗುವಾದಾಗ ಅದಕ್ಕೆ ಉತ್ತಮ ಭವಿಷ್ಯ ಕಲ್ಪಿಸಲು ಪತ್ನಿಯ ಉದ್ಯೋಗಕ್ಕೆ ಒತ್ತು ನೀಡಿದ್ದಾಗಿ ಪತಿರಾಯ ಹೇಳಿದ್ದನ್ನು ಕೋರ್ಟ್ ಪರಿಗಣಿಸಲಿಲ್ಲ. ಈ ತೀರ್ಪಿನ ಹಿನ್ನೆಲೆಯಲ್ಲಿ ಇದನ್ನೂ ಓದಿ ...

English summary
In a unique case of divorce, the Delhi High Court allowed a woman to annul her marriage because her husband refused to have physical relations on the ground that she did not have a job as mentioned in her biodata before they tied the knot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X