ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ವೇತ ಭವನದ ಮೌಲ್ಯ 110 ಮಿಲಿಯನ್ ಡಾಲರ್

By Mahesh
|
Google Oneindia Kannada News

White House
ನ್ಯೂಯಾರ್ಕ್, ಮೇ 7: ಅಮೆರಿಕ ಅಧ್ಯಕ್ಷರ ಆವಾಸ ಸ್ಥಾನ, ಜಗತ್ತಿನ ಆಗು ಹೋಗುಗಳ ಬಗ್ಗೆ ತೀರ್ಮಾನವಾಗುವ ತಾಣದ ಮೌಲ್ಯ ಹಾಕಲಾಗಿದೆ. ಶ್ವೇತಭವನದ ಬೆಲೆ ಸುಮಾರು 110 ಮಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. 18ನೇ ಶತಮಾನದಿಂದ ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸವಾಗಿರುವ 'ದಿ ವೈಟ್ ಹೌಸ್' ಮೌಲ್ಯ ನಿರ್ಧಾರವಾದರೂ ವೈಟ್ ಹೌಸ್ ಏನು ಮಾರಾಟಕ್ಕಿಟ್ಟಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸುಮಾರು 55,000 ಚ.ಅ ವಿಸ್ತೀರ್ಣದ ಶ್ವೇತಭವನ ಮೌಲ್ಯ ನಿರ್ಧರಿಸಿದ್ದು ಜಾಸನ್ ಕೊಟ್ಜ್ ಎಂಬ ರಿಯಲ್ ಎಸ್ಟೇಟ್ ಸಂಸ್ಥೆಯ ಒಡೆಯ ಎಂದು ನ್ಯೂಯಾರ್ಕ್ ಡೈಲಿ ಪ್ರಕಟಿಸಿದೆ.

ಈ ಅದ್ದೂರಿ ಬಂಗಲೆಯ ಮೌಲ್ಯ 100 ಅಥವಾ 115 ಮಿಲಿಯನ್ ಡಾಲರ್ ನಷ್ಟಾಗಬಹುದು. ವಾಷಿಂಗ್ಟನ್ ನಲ್ಲಿ ಶ್ವೇತಭವನದಂತೆ ಇನ್ನೂ ದುಬಾರಿಯಾದ ಬಂಗಲೆಗಳಿದೆ. ಮೆಕ್ ಲೀನ್ ನಲ್ಲಿರುವ 21,000 ಚ.ಅ ಬಂಗಲೆಯೊಂದರ ಬೆಲೆ 45.5 ಮಿಲಿಯನ್ ಡಾಲರ್ ನಷ್ಟಿದೆ ಎಂದು ಜಾಸನ್ ಹೇಳಿದ್ದಾರೆ

6 ಅಂತಸ್ತಿನ 132 ಕೊಠಡಿಗಳುಳ್ಳ ಮೂರು ಎಲೆವೇಟರ್ಸ್ ಗಳುಳ್ಳ ಶ್ವೇತಭವನದಲ್ಲಿ ಬಾಸ್ಕೆಟ್ ಬಾಲ್, ಟೆನ್ನಿಸ್ ಕೋರ್ಟ್, ಸಿನಿಮಾ ಮಂದಿರ, ಬೌಲಿಂಗ್, ಸ್ವಿಮ್ಮಿಂಗ್ ಪೂಲ್ ಹಾಗು ಜಾಗಿಂಗ್ ಟ್ರ್ಯಾಕ್ ಇದೆ.

212 ವರ್ಷಗಳ ಇತಿಹಾಸ ಹೊಂದಿರುವ ಶ್ವೇತಭವನವನ್ನು ಸುಮಾರು 9 ಬಾರಿ ಪುನರುಜ್ಜೀವನಗೊಳಿಸಲಾಗಿದೆ. ಶ್ವೇತಭವನದಲ್ಲಿ ದಿವಂಗತ ಅಧ್ಯಕ್ಷರ ಭೂತಗಳಿದೆ ಎಂಬ ಸುದ್ದಿ ಚಾಲ್ತಿಯಲ್ಲಿದ್ದರೂ ಈ ಭೂತ ಬಂಗಲೆಗೆ ಭರ್ಜರಿ ಬೆಲೆಯಂತೂ ಇದ್ದೇ ಇದೆ.

English summary
The White house has been listed in the open market for a whopping 110 million dollars. The estimation was made by a Washington DC area realtor. The White House has been the official residence of US presidents and their families since 1800.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X