ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್ ಆರ್ ಪಕ್ಷದಿಂದ ಸ್ಪರ್ಧಿಸುವೆ: ಕೆಎಂಎಫ್ ರೆಡ್ಡಿ

By Mahesh
|
Google Oneindia Kannada News

Somashekara Reddy
ಬೀದರ್, ಮೇ.6: ಶ್ರೀರಾಮುಲು ಅವರು ಬಿಜೆಪಿಗೆ ಮರಳುತ್ತಾರೋ ಇಲ್ಲವೋ? ಎಂಬ ಪ್ರಶ್ನೆ ತಕ್ಕ ಉತ್ತರ ನೀಡಿದ್ದ ಕೆಎಂಎಫ್ ಅಧ್ಯಕ್ಷ ಸೋಮಶೇಖರ ರೆಡ್ಡಿ ಅವರು ಮತ್ತೊಂದು ಬಾಂಬ್ ಸಿಡಿಸಿದ್ದಾರೆ.

ಪಕ್ಷದ ರಾಜ್ಯಾಧ್ಯಕ್ಷ ಈಶ್ವರಪ್ಪ ಅವರು ನೀಡಿದ್ದ ನೋಟಿಎಸ್ ಗೆ ಕ್ಯಾರೇ ಎನ್ನದೆ ಶ್ರೀರಾಮುಲು ಪರ ನಿಂತಿರುವ ಸೋಮಶೇಖರ ರೆಡ್ಡಿ ಈಗ ಒಂದು ಹೆಜ್ಜೆ ಮುಂದಿಟ್ಟು ಮುಂದಿನ ಚುನಾವಣೆಯಲ್ಲಿ ಬಿಎಸ್ ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಘೋಷಿಸಿದ್ದಾರೆ.

ಅನುಭವ ಮಂಟಪ-ಆಡಳಿತ ಸೌಧದವರೆಗೂ 54 ದಿನಗಳ ಕಾಲ ಒಟ್ಟು 921ಕಿ.ಮೀ. ಪಾದಯಾತ್ರೆ ಹಮ್ಮಿಕೊಂಡಿುವ ಬಳ್ಳಾರಿ ಶಾಸಕ ಶ್ರೀರಾಮುಲು ಅವರಿಗೆ ಸಂಪೂರ್ಣ ಬೆಂಬಲ ನೀಡಿರುವ ಸೋಮಶೇಖರ ರೆಡ್ಡಿ ತಮ್ಮ ನಿಷ್ಠೆ ಯಾರ ಪರ ಇದೆ ಎಂಬದನ್ನು ಸ್ಪಷ್ಟಪಡಿಸಿದ್ದಾರೆ.

ನಾನು ಬಾಹ್ಯವಾಗಿ ಬಿಜೆಪಿ ಪಕ್ಷದಲ್ಲಿದ್ದೇನೆ ಅಷ್ಟೇ. ಆದರೆ ಮಾನಸಿಕವಾಗಿ ಶ್ರೀರಾಮಲು ಅವರ ಬಿಎಸ್‌ಆರ್‌ ಪಕ್ಷದಲ್ಲಿದ್ದೇನೆ. ಬಿಜೆಪಿಯ ಕೆಲ ಹಿರಿಯ ನಾಯಕರು ನಮ್ಮನ್ನು ನಡೆಸಿಕೊಂಡ ರೀತಿ ಕೊಟ್ಟ ಮಾನಸಿಕ ಹಿಂಸೆ ಮರೆಯಲು ಸಾಧ್ಯವಿಲ್ಲ. ಕರುಣಾಕರ ರೆಡ್ಡಿ ಅವರೊಡನೆ ಭಿನ್ನಾಭಿಪ್ರಾಯವಿಲ್ಲ ಎಂದು ಸೋಮಶೇಖರ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

English summary
KMF President Somashekar Reddy has openly said he is not afraid of notice from BJP President KS Eshwarappa and will contest next assembly election as BSR congress candidate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X