ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾನ್ಸರ್ ಔಷಧಿ ದರ ಶೇ 76ರಷ್ಟು ಇಳಿಕೆ

By Mahesh
|
Google Oneindia Kannada News

Cancer Drugs Cheaper
ಮುಂಬೈ, ಮೇ 6: ಕ್ಯಾನ್ಸರ್ ಔಷಧಿಗಳ ಪೇಟೆಂಟ್ ಲೈಸೆನ್ಸನ್ನು ಕೇಂದ್ರ ಸರ್ಕಾರ ರದ್ದುಪಡಿಸಿ ಎರಡು ತಿಂಗಳ ನಂತರ ಪ್ರಮುಖ ಔಷಧಿ ತಯಾರಿಕಾ ಸಂಸ್ಥೆ ಸಿಪ್ಲಾ ತನ್ನ ಕ್ಯಾನ್ಸರ್ ಔಷಧಿಗಳ ದರದಲ್ಲಿ ಶೇ.76ರಷ್ಟು ಕಡಿಮೆ ಮಾಡಿದೆ. ಇದು ಕಂಪನಿಗಳ ದರ ಸಮರಕ್ಕೆ ನಾಂದಿ ಹಾಡುವ ಸಾಧ್ಯತೆಯಿದೆ.

ಎಂಎನ್ ಸಿ ಬಾಯರ್ ಕಂಪನಿ ಬದಲಿಗೆ ಹೈದರಾಬಾದಿನ ನ್ಯಾಟ್ಕೊ ಫಾರ್ಮಾ ಕಂಪನಿಗೆ ಮಾತ್ರೆ ತಯಾರಿಕೆಗೆ ಕೇಂದ್ರ ಸರ್ಕಾರಿ ಸ್ವಾಮ್ಯದ ಔಷಧ ನಿಯಂತ್ರಣ ಸಂಸ್ಥೆ ಅನುಮತಿ ನೀಡಿತ್ತು.

ಸಿಪ್ಲಾ ಸಂಸ್ಥೆ ಮೂತ್ರಕೋಶ ಕ್ಯಾನ್ಸರ್ ಔಷಧಿ 'Soranib' 6,840 ರೂ. ವೆಚ್ಚದಲ್ಲಿ ಒಂದು ತಿಂಗಳಿಗೆ ಸಾಕಾಗುವಷ್ಟು ದೊರೆಯಲಿದೆ. ಇದಕ್ಕೆ ಮೊದಲು ಅದರ ಬೆಲೆಯು ತಿಂಗಳಿಗೆ 27,950 ರೂ.ಗಳಷ್ಟಾಗುತ್ತಿತ್ತು.

ಶ್ವಾಸಕೋಶದ ಕ್ಯಾನ್ಸರ್‌ನ ಔಷಧಿ 'Gefticip 250 mg' ದರದಲ್ಲೂ ಶೇ.60ರಷ್ಟು ಕಡಿತವುಂಟಾಗಲಿದ್ದು, ಇನ್ನು ಮಂದೆ ಅದು 4 ಸಾವಿರ ರೂ.ಗೆ ದೊರೆಯಲಿದೆ. ಇದಕ್ಕೆ ಮೊದಲು ಅದರ ಬೆಲೆ 10,200 ರೂ.ಗಳಾಗಿತ್ತು.

ಮೆದುಳಿನಗಡ್ಡೆ ಕಾಯಿಲೆಯ ಚಿಕಿತ್ಸೆಗೆ ಬಳಸುವ ಪರಿಣಾಮಕಾರಿ ಔಷದಿ Temosideನ ಬೆಲೆಯು ಈ ಮೊದಲು 20,250 ರೂ.ಗಳಾಗಿದ್ದು, ಈಗ ಅದು 5 ಸಾವಿರ ರೂ.ಗೆ ಇಳಿದಿದೆ.

ಕ್ಯಾನ್ಸರ್ ಔಷಧಿಗಳ ಬೆಲೆಯಲ್ಲಿ ಭಾರೀ ಕಡಿತ ಮಾಡುವ ಸಿಪ್ಲಾ ಸಂಸ್ಥೆಯ ನಿರ್ಧಾರಕ್ಕೆ ದೇಶದ ವೈದ್ಯಕೀಯ ವಲಯಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. 'ಇದೊಂದು ಅದ್ಭುತ ಕ್ರಮವಾಗಿದೆ. ಏಕೆಂದರೆ ಬಹಳಷ್ಟು ರೋಗಿಗಳು ಈ ಔಷಧಿಗಳನ್ನು ಖರೀದಿಸಲು ಸಮರ್ಥರಾಗಿಲ್ಲ. ಇದೀಗ ಅವರಿಗದು ಸಾಧ್ಯವಾಗಿದೆ'"ಎಂದು ಮುಂಬೈಯ ಎಸ್‌ಎಲ್ ರಹೇಜಾ ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರಚಿಕಿತ್ಸಕ ಡಾ.ಸಂಜಯ್ ಶರ್ಮಾ ಹೇಳುತ್ತಾರೆ.

ದೇಶಾದ್ಯಂತ ಪ್ರತಿವರ್ಷ ಸರಾಸರಿ 20.50 ಲಕ್ಷಕ್ಕೂ ಹೆಚ್ಚು ಮಂದಿ ಭಾರತೀಯರು ಕ್ಯಾನ್ಸರ್ ರೋಗ ಪೀಡಿತರಾಗಿರುವುದು ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿಕೊಂಡಿದೆ. ಸುಮಾರು 1,500 ಕೋಟಿ ರು ಮೌಲ್ಯದ ವ್ಯವಹಾರವುಳ್ಳ ಕ್ಯಾನ್ಸರ್ ಔಷಧ ಮಾರುಕಟ್ಟೆಯಲ್ಲಿ ಈಗ ಸಂಚಲನ ಉಂಟಾಗಲಿದ್ದು, ಬಹುರಾಷ್ಟ್ರೀಯ ಕಂಪನಿಗಳ ಜೊತೆ ದೇಶಿ ಕಂಪನಿಗಳು ದರ ಸಮರಕ್ಕೆ ಇಳಿಯುವುದು ಗ್ಯಾರಂಟಿ ಎನ್ನಲಾಗಿದೆ.

English summary
Drugmaker Cipla cut the price of its generic version of Bayer’s cancer drug Nexavar by 75 percent. Earlier UPA allowed Hyderabad-based Natco Pharma to manufacture and sell cancer-treatment drug Nexavar at a price, over 30 times lower than charged by its patent-holder Bayer Corporation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X