ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರಲ್ಲೂ ನಾರಾಯಣ ಹೃದಯಾಲಯ ಆರಂಭ

By Mahesh
|
Google Oneindia Kannada News

Dr Devi Shetty
ಬೆಂಗಳೂರು, ಮೇ.6: ಸುಮಾರು 600 ಕೋಟಿ ರು ವೆಚ್ಚದಲ್ಲಿ ಬೆಂಗಳೂರಿನಲ್ಲಿ ಹೆಲ್ತ್ ಸಿಟಿ ನಿರ್ಮಾಣ ಮಾಡುವುದಾಗಿ ನಾರಾಯಣ ಹೃದಯಾಲಯ ಹಾಸ್ಪಿಟಲ್ಸ್(NHH) ಪ್ರಕಟಿಸಿದೆ.

ಮುಂದಿನ 5-7 ವರ್ಷಗಳಲ್ಲಿ ಕಡಿಮೆ ವೆಚ್ಚದ ಹೃದ್ರೋಗ ಆಸ್ಪತ್ರೆಗಳನ್ನು ಸ್ಥಾಪಿಸಲು ಸಂಸ್ಥೆ ಯೋಜನೆ ಹಾಕಿಕೊಂಡಿದೆ. ಒಟ್ಟಾರೆ 30,000 ಬೆಡ್ ಗಳ ಆಸ್ಪತ್ರೆ ನಿರ್ಮಾಣವಾಗಲಿದೆ ಎಂದು ಡಾ. ದೇವಿ ಶೆಟ್ಟಿ ಹೇಳಿದ್ದಾರೆ.

ಬೆಂಗಳೂರಿನ ಪೂರ್ವ ಭಾಗದಲ್ಲಿ 110 ಕೋಟಿ ರು.ವೆಚ್ಚದಲ್ಲಿ 300 ಬೆಡ್ ಗಳುಳ್ಳ ಆಸ್ಪತ್ರೆ ನಿರ್ಮಾಣವಾಗಲಿದೆ. ಇದೇ ರೀತಿ ಇಷ್ಟೇ ಸಾಮರ್ಥ್ಯದ ಆಸ್ಪತ್ರೆ ಮೈಸೂರಿನಲ್ಲೂ ಮುಂದಿನ ಮುರ್ನಾಲ್ಕು ತಿಂಗಳಲ್ಲಿ ತಲೆ ಎತ್ತಲಿದೆ ಎಂದು ಸಂಸ್ಥೆ ಹೇಳಿದೆ.

ಭಾರತದಲ್ಲಿ ಪ್ರತಿ ವರ್ಷ 2.5 ಮಿಲಿಯನ್ ಜನರಿಗೆ ಹಾರ್ಟ್ ಸರ್ಜರಿ ನಡೆಸಬೇಕಾಗುತ್ತದೆ. ಆದರೆ, ಸರಿಯಾದ ಆಸ್ಪತ್ರೆ ಸೌಲಭ್ಯ ಇಲ್ಲದೆ ಕಷ್ಟವಾಗಿದೆ. ಈ ನಿಟ್ಟಿನಲ್ಲಿ ಕಡಿಮೆ ಪ್ರಮಾಣದ ಬೆಡ್ ಗಳುಳ್ಳ ಕಡಿಮೆ ವೆಚ್ಚದ ಆಸ್ಪತ್ರೆಗಳ ನಿರ್ಮಾಣಕ್ಕೆ ನಮ್ಮ ಸಂಸ್ಥೆ ಮುಂದಾಗಿದೆ ಎಂದು ಡಾ. ದೇವಿ ಶೆಟ್ಟಿ ಹೇಳಿದರು.

English summary
Bangalore based Narayana Hrudayalaya Hospitals (NHH) is planning to set up low-cost heart hospital in Mysore with 300 bed capacity. NHH also setting up Rs 600 crore (Rs 6 billion) Health City in Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X