ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಣಿಪ್ಪಾಡಿ, ಕನ್ನಡ ಪ್ರಭ ವಿರುದ್ಧ 1ಕೋಟಿ ರು ಕೇಸ್

By Srinath
|
Google Oneindia Kannada News

wakf-board-scam-report-mla-harris-defamation-case
ಬೆಂಗಳೂರು, ಮೇ 5: ವಕ್ಫ್ ಮಂಡಳಿ ಆಸ್ತಿ ಕಬಳಿಕೆ ಹಗರಣದ ವರದಿ ಸಲ್ಲಿಸಿದ್ದ ಅಲ್ಪ ಸಂಖ್ಯಾತ ಆಯೋಗದ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಹಾಗೂ ವರದಿ ಪ್ರಕಟಿಸಿದ ಕನ್ನಡಪ್ರಭ ವಿರುದ್ಧ 1 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸಿರುವುದಾಗಿ ಕಾಂಗ್ರೆಸ್ ಶಾಸಕ ಎನ್ ಎ ಹ್ಯಾರೀಸ್ ಶನಿವಾರ ತಿಳಿಸಿದ್ದಾರೆ.

ವಕ್ಫ್ ಮಂಡಳಿ ಆಸ್ತಿ ಕಬಳಿಕೆ ಹಗರಣದ ಸಂಬಂಧ ಇಂದು ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಶಾಂತಿನಗರ ಶಾಸಕ ಹ್ಯಾರಿಸ್ ಅವರು ರಾಜಕೀಯ ದುರುದ್ದೇಶದಿಂದ ಮಾಣಿಪ್ಪಾಡಿ ಅವರು ದೂರು ದಾಖಲಿಸಿದ್ದಾರೆ. ಕಾಂಗ್ರೆಸ್ ಶಾಸಕ, ಸಚಿವರನ್ನು ತುಳಿಯುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.

ಸರಕಾರದಿಂದಲೇ ವಕ್ಫ್ ಮಂಡಳಿ ಆಸ್ತಿ ಕಬಳಿಕೆಯಾಗಿದೆ. ಹೀಗಾಗಿ ಆಯೋಗದ ವರದಿಯ ಬಗ್ಗೆಯೇ ತನಿಖೆಯಾಗಲಿ ಎಂದು ಹ್ಯಾರಿಸ್ ಆಗ್ರಹಿಸಿದರು.

ವಕ್ಫ್ ಬೋರ್ಡ್‌ಗೆ ಸೇರಿದ ಆಸ್ತಿಯ ದುರುಪಯೋಗದ ಅಧ್ಯಯನ ನಡೆಸಲು ರಚಿಸಲಾಗಿದ್ದ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅನ್ವರ್ ಮಾಣಿಪಾಡಿ ಅವರು ತನಿಖೆ ನಡೆಸಿ, 8 ಸಾವಿರ ಪುಟಗಳ ವಿಶೇಷ ವರದಿಯನ್ನು ಮುಖ್ಯಮಂತ್ರಿ ಡಿವಿ ಸದಾನಂದ ಗೌಡರಿಗೆ ಮಾರ್ಚ್ 26 ರಂದು ನೀಡಿದ್ದರು.

English summary
Congress MLA NA Harris has said that he has filed defamation case against Karnataka minorities commission chairman Anwar Manipaddy and Kannada Daily Kannada Prabha in regard to the Karnataka Wakf board land scam report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X