ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ಬೆಂಗಳೂರು ಬುಲೆಟ್ ಟ್ರೈನ್ ಗ್ಯಾರಂಟಿ?

By Mahesh
|
Google Oneindia Kannada News

Mysore-Bangalore Bullet Train
ಮೈಸೂರು, ಮೇ.4: ಬೆಂಗಳೂರಿನಿಂದ ಮೈಸೂರಿಗೆ ಕೇವಲ 30 ನಿಮಿಷಕ್ಕೆ ತಲುಪುವಂಥ ಬುಲೆಟ್ ಟ್ರೈನ್ ಸಂಚಾರ ಆರಂಭಿಸಲು ಕರ್ನಾಟಕ ಸರ್ಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು ತಿಳಿಸಿದ್ದಾರೆ.

ಚಾಮುಂಡಿ ಬೆಟ್ಟದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಬುಲೆಟ್ ಟ್ರೈನ್ ಸಂಚಾರಕ್ಕಾಗಿ ಕ್ರಿಯಾ ಯೋಜನೆ ತಯಾರಿಸಿ ಕೇಂದ್ರಕ್ಕೆ ರವಾನಿಸಲಾಗಿದೆ ಎಂದರು. ಕೇಂದ್ರ ನಗರಾಭಿವೃದ್ಧಿ ಸಚಿವ ಕಮಲ್ ನಾಥ್ ಅವರು ಈ ಯೋಜನೆ ಬಗ್ಗೆ ಹೆಚ್ಚಿನ ಒಲವು ತೋರಿಸಿದ್ದಾರೆ.

ಕೇಂದ್ರ ಸರ್ಕಾರ ಸಮೀಕ್ಷೆ ನಡೆಸಿ ಮೂರು ತಿಂಗಳೊಳಗೆ ಕಳುಹಿಸಿಕೊಡುವಂತೆ ಕೋರಲಾಗಿದೆ. ವರದಿ ಬಂದ ಕೆಲವೇ ತಿಂಗಳಲ್ಲಿ ಬುಲೆಟ್ ಟ್ರೈನ್ ಸಂಚಾರ ಮಾರ್ಗ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಸದಾನಂದ ಗೌಡ ಹೇಳಿದರು.

ಬಂಡವಾಳ ಯಾರು ಹೂಡಲಿದ್ದಾರೆ?: ಈ ಮುಂಚೆ ಚೆನ್ನೈ ಮೈಸೂರು ಬೆಂಗಳೂರು ಬುಲೆಟ್ ಟ್ರೈನ್ ಯೋಜನೆ ಬಗ್ಗೆ ಪ್ರಸ್ತಾಪಿಸಿದಂತೆ ಪ್ರಸ್ತುತ ಯೋಜನೆ ಸೇರಿದಂತೆ ಹಲವು ಯೋಜನೆಗಳಿಗೆ 6 ಲಕ್ಷ ಕೋಟಿ ರು ಬಂಡವಾಳ ನಿರೀಕ್ಷಿಸಲಾಗಿದೆ.

ಜಪಾನ್, ತೈವಾನ್ ಹಾಗೂ ಸಿಂಗಪುರ ದೇಶಗಳ ಬಂಡವಾಳಶಾಹಿಗಳು ಆಸಕ್ತಿ ತೋರಿಸಿದ್ದಾರೆ. ಜಿಮ್ 2012 ಕೈಗಾರಿಕಾ ಸಮಾವೇಶದ ಮೂಲಕ ಹೆಚ್ಚಿನ ಬಂಡವಾಳ ನಿರೀಕ್ಷಿಸಲಾಗಿದೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.

English summary
CM DV Sadananda Gowda today(May.4) announced that the action plan for Bangalore-Mysore 'Bullet Train' will be submitted to the UPA goverment within three months. Minister Murugesh Nirani is eyeing Japanese investment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X