ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಬಾಮಾ ಭಾರತ-ವಿರೋಧಿ: ಮತ್ತೊಮ್ಮೆ ಜಾಹೀರು

By Srinath
|
Google Oneindia Kannada News

obama-campaign-spends-usd-780000-on-anti-india-ad
ವಾಷಿಂಗ್ಟನ್, ಮೇ 3: ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಪರೋಕ್ಷವಾಗಿ ತಾನು ಭಾರತ-ವಿರೋಧಿ ಎಂಬುದನ್ನು ಮತ್ತೊಮ್ಮೆ ಜಾಹೀರುಪಡಿಸಿದ್ದಾರೆ. ಅದೂ 780,000 ಡಾಲರ್ ಸುರಿದು ತಮ್ಮಭಾರತ-ವಿರೋಧಿ ನೀತಿಯನ್ನು ಪರೋಕ್ಷವಾಗಿ ಸಾಬೀತುಪಡಿಸಿದ್ದಾರೆ.

ಬರಾಕ್ ಒಬಾಮಾ ಮುಂದಿನ ನವೆಂಬರಿನಲ್ಲಿ ಅಮೆರಿಕದ ಅಧ್ಯಕ್ಷರಾಗಿ ಪುನರಾಯ್ಕೆಯಾಗಲು ಹಾತೊರೆಯುತ್ತಿದ್ದಾರೆ. ಚುನಾವಣೆ ಪ್ರಚಾರಕ್ಕಾಗಿ ಬಿಲಿಯನ್ ಗಟ್ಟಲೆ ಹಣ ಸುರಿಯುತ್ತಿದ್ದಾರೆ. ಅದರಲ್ಲಿ ಭಾರತ-ವಿರೋಧಿ ವಿಚಾರಗಳಿಗೆ ಒತ್ತುಕೊಟ್ಟಿರುವ ಒಬಾಮಾ, ಪ್ರತಿ ಸ್ಪರ್ಧಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಏನಾಗಿದೆಯೆಂದರೆ ... ಅಮೆರಿಕ ಅಧ್ಯಕ್ಷ ಸ್ಥಾನದ ಆಕಾಂಕ್ಷಿ, ರಿಪಬ್ಲಿಕನ್ ಪಕ್ಷದ ಮಿಟ್ ರೋಮ್ನಿ ಈ ಹಿಂದೆ ಮೆಸಾಚ್ಯುಸೆಟ್ಸಿನ ಗವರ್ನರ್ ಆಗಿದ್ದಾಗ ಭಾರತಕ್ಕೆ ಭರಪೂರವಾಗಿ ಐಟಿ ಕ್ಷೇತ್ರದಲ್ಲಿ ಹೊರಗುತ್ತಿಗೆ ನೀಡಿದ್ದರು ಎಂದು ಹಾಲಿ ಅಧ್ಯಕ್ಷ ಒಬಾಮಾ ಆರೋಪಿಸಿದ್ದಾರೆ.

'corporate CEO ಆಗಿ ಮಿಟ್ ರೋಮ್ನಿ ಅಮೆರಿಕದ ಉದ್ಯೋಗಾವಕಾಶಗಳನ್ನು ಭಾರತಕ್ಕೆ ಧಾರೆಯೆರೆದಿದ್ದರು. outsource ಮಾಡುವ ಕಂಪನಿಗಳಿಗೆ ತೆರಿಗೆ ರಿಯಾಯಿತಿಗಳನ್ನು ಒದಗಿಸಬೇಕು ಎಂದು ಮಿಟ್ ರೋಮ್ನಿ ಈಗಲೂ ಬಯಸುತ್ತಿದ್ದಾರೆ. ಅರ್ಥಾತ್ ಭಾರತದ ಪರ ಅವರು ಒಲವು ಹೊಂದಿದ್ದಾರೆ' ಎಂಬ ಸಂಗತಿಯನ್ನು ಒಬಾಮಾ ಪರ ಪ್ರಚಾರ ಜಾಹೀರಾತುಗಳಲ್ಲಿ ತುಂಬಲಾಗಿದೆ.

ಹೀಗೆ ಭಾರತ ವಿರೋಧಿ ನೀತಿಯನ್ನು ಅನುಮೋದಿಸಿರುವ ಒಬಾಮಾ, ಅದಕ್ಕಾಗಿ ಅಂದರೆ ಈ ಜಾಹೀರಾತುಗಳಿಗಾಗಿ 780,000 ಡಾಲರ್ ವೆಚ್ಚ ಮಾಡಿದ್ದಾರೆ. ಪ್ರಮುಖ ರಾಜ್ಯಗಳಾದ ವರ್ಜೀನಿಯಾ, ಒಹಿಯೊ ಮತ್ತು ಐಓವಾದಲ್ಲಿ ಈ ಜಾಹೀರಾತು ಹೆಚ್ಚಾಗಿ ಕಾಣಿಸಿಕೊಂಡಿದೆ.

ಅಧಿಕಾರ ಲಾಲಸೆಯಲ್ಲಿರುವ ಒಬಾಮಾ ಅವರು ರೋಮ್ನಿ-ವಿರೋಧಿ ಪ್ರಚಾರದಲ್ಲಿ ತೊಡಗಿದ್ದು, ಆತ ಸ್ವಿಸ್ ಬ್ಯಾಂಕ್ ಖಾತೆ ಹೊಂದಿದ್ದಾನೆ ಎಂದು ಆರೋಪಿಸಿದ್ದಾರೆ. ಅಂತಹವನಿಂದ ಅಮೆರಿಕದ ಜನತೆ ಏನನ್ನು ತಾನೆ ನಿರೀಕ್ಷಿಸಲು ಸಾಧ್ಯ? ಎಂದು ಕಿಚ್ಚುಹಚ್ಚಿದ್ದಾರೆ.

ಅಮೆರಿಕದ ಕಂಪನಿಗಳು ವೆಚ್ಚ ತಗ್ಗಿಸಲು back office jobಗಳನ್ನು ಭಾರತಕ್ಕೆ outsource ಮಾಡುತ್ತವೆ. ಭಾರತದ ಐಟಿ ಸಾಫ್ಟ್ ವೇರ್ ಮತ್ತು ಐಟಿ ಸೇವಾಧಾರಿತ ಸೇವೆಗಳನ್ನು ಅಮೆರಿಕಕ್ಕೆ ಧಾರೆಯೆರೆದು ಶೇ. 60 ರಷ್ಟು ಆದಾಯವನ್ನು ಅಮೆರಿಕ ಕಂಪನಿಗಳಿಂದ ಗಳಿಸುತ್ತವೆ.

English summary
The Obama Campaign in a new ad has accused presumptive Republican presidential nominee Mitt Romney of outsourcing jobs to India when he was the Massachusetts Governor. The Obama Campaign is believed to be spending about $780,000 on running this ad in these key States, reports said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X