ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರದುರ್ಗದ ಹಸುಗಳಿಗೆ ಉಡುಪಿ ಮೇವು: ಪೇಜಾವರ ಶ್ರೀ

By Mahesh
|
Google Oneindia Kannada News

Pejawar Seer
ಉಡುಪಿ, ಮೇ.3: ಧಾರ್ಮಿಕ ಸಮಸ್ಯೆಗಳಿಗಿಂತ ರಾಜ್ಯದ ಸಾಮಾಜಿಕ, ಆರ್ಥಿಕ ಸಮಸ್ಯೆಗಳನ್ನು ಪರಿಹರಿಸುವತ್ತ ರಾಜ್ಯದ ಮಠಗಳು ಗಮನಹರಿಸಬೇಕಿದೆ. ರಾಜ್ಯ ಬರದಿಂದ ತತ್ತರಿಸುತ್ತಿದೆ. ಇದಕ್ಕೆ ಉಡುಪಿ ಮಠದ ವತಿಯಿಂದ ಸೂಕ್ತ ಸಹಾಯ ನೀಡಲಾಗುವುದು ಎಂದು ಪೇಜಾವರ ಶ್ರೀವಿಶ್ವೇಶ ತೀರ್ಥರು ಹೇಳಿದ್ದಾರೆ.

ಬರಪೀಡಿತ ಚಿತ್ರದುರ್ಗ ಜಿಲ್ಲೆ, ಪಾವಗಡ ಸೇರಿದಂತೆ ಹಲವು ಕಡೆ ಜಾನುವಾರುಗಳಿಗೆ ಮೇವು ಸರಬರಾಜು ಮಾಡುವ ವ್ಯವಸ್ಥೆಯನ್ನು ಮಠದ ವತಿಯಿಂದ ಕಲ್ಪಿಸಲಾಗಿದೆ. ಸ್ಥಳೀಯರು ಕೂಡಾ ಇದರಲ್ಲಿ ಕೈ ಜೋಡಿಸಿ ಜಾನುವಾರುಗಳನ್ನು ಉಳಿಸುವ ಕಾರ್ಯದಲ್ಲಿ ತೊಡಗಬೇಕು ಎಂದು ಪೇಜಾವರ ಶ್ರೀಗಳು ಹೇಳಿದರು.

ಮಡೆಸ್ನಾನ ನಿಷೇಧ: ಬ್ರಾಹ್ಮಣರು ಉಂಡ ಎಲೆಯಲ್ಲಿ ಮಡೆಸ್ನಾನ ಮಾಡುವ ಪದ್ಧತಿಯಿಂದ ಇರುವುದರಿಂದ ಬ್ರಾಹ್ಮಣರಿಗೆ ಕೆಟ್ಟ ಹೆಸರು ಬರುತ್ತಿದೆ. ಸ್ವಇಚ್ಛೆಯಿಂದ ಬ್ರಾಹ್ಮಣರು ಮಡೆಸ್ನಾನವನ್ನು ಬಹಿಷ್ಕರಿಸಬೇಕು.

ಮಡೆಸ್ನಾನ ಆಚರಣೆ ಮೊದಲು ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಿಷೇಧವಾದರೆ ಉಳಿದೆಡೆಗಳಲ್ಲೂ ನಿಲ್ಲುತ್ತದೆ. ಉಡುಪಿ ಮಠದ ಅಧೀನದಲ್ಲಿರುವ ಮುಚ್ಲುಗೋಡು ಮುಂತಾದ ದೇಗುಲಗಳಲ್ಲಿ ಮಡೆಸ್ನಾನ ನಿಲ್ಲಿಸಲು ಪರ್ಯಾಯ ಮಠಾಧೀಶರಿಗೆ ಕೇಳಿಕೊಳ್ಳಲಾಗಿದೆ.

ಮಡೆಸ್ನಾನ ನಿಷೇಧಿಸಿದರೆ ಹಿಂದೂ ಧರ್ಮಕ್ಕೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ. ಪೂಜೆ, ಉತ್ಸವ, ಬ್ರಹ್ಮಕಲಶದಂತೆ ಇದು ಕಡ್ಡಾಯವಾದ ಆಚರಣೆಯಲ್ಲ. ಎಲ್ಲರನ್ನೂ ಒಗ್ಗೂಡಿಸಿ ಸನ್ಮಾರ್ಗದಲ್ಲಿ ಕರೆದೊಯ್ಯುವ ಕಾರ್ಯವನ್ನು ಧರ್ಮ ಮಾಡುತ್ತದೆ, ಧರ್ಮ ಎಂದಿಗೂ ಯಾರನ್ನೂ ಬೇರ್ಪಡಿಸುವುದಿಲ್ಲ ಎಂದು ವಿಶ್ವೇಶತೀರ್ಥರು ತಿಳಿ ಹೇಳಿದರು.

English summary
Pejawar Seer Vishvesha Tirtha Swamiji said food will be supplied to Cattles and animals in drought hit areas of Chitradurga. Ban on Madesnana will not affect any community. Dharma is to unite the people not to divide he added.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X