ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದು ರಕ್ತಪಿಪಾಸು ಬಿನ್ ಲಾಡೆನ್ ಪ್ರಥಮ ತಿಥಿ

By Srinath
|
Google Oneindia Kannada News

obl-death-anniversary-abbottabad-america
ಅಬೋತಾಬಾದ್ (ಪಾಕಿಸ್ತಾನ), ಮೇ 2:ಇಡೀ ನಾಗರಿಕ ಸಮಾಜ ಆ ಕ್ಷಣಕ್ಕಾಗಿ ತಹತಹಿಸುತ್ತಿತ್ತು. ಯಾವಾಗಪ್ಪಾ ಆ ತಂಟೆಕೋರ ಸಾಯೋದು ಅಂತ ಹಿಡಿ ಶಾಪ ಹಾಕುತ್ತಾ ನಿಸ್ಸಹಾಯಕವಾಗಿ ಕುಳಿತಿತ್ತು. ಕೋಟ್ಯಂತರ ಜನರ ಆಶಯದಂತೆ ಆ ಕ್ಷಣ ಬಂದೇ ಬಿಟ್ಟಿತ್ತು. ಮತ್ತು, ಆ ರಕ್ತಪಿಪಾಸು ಪೀಸುಪೀಸು ಆಗಿದ್ದ. ಅದಾಗಿ ಇಂದಿಗೆ ಸರಿಯಾಗಿ ಒಂದು ವರ್ಷ. ಅವನಿಗಿದು ಪ್ರಥಮ ತಿಥಿ.

ಅವನು ಒಸಾಮಾ ಬಿನ್‌ ಲಾಡೆನ್‌. ಅಲ್‌ ಖೈದಾ ಮುಖ್ಯಸ್ಥ, ವಿಶ್ವದ ಅತ್ಯುಗ್ರ ಹಾಗೆ ಅಮೆರಿಕದ ದಾಳಿಯಿಂದ ನುಚ್ಚುನೂರಾಗಿ ಇಂದಿಗೆ (ಮೇ 2) ಒಂದು ವರ್ಷ ಸಂದಿದೆ. ಆ ರಕ್ತಪೀಪಾಸು ಇಲ್ಲದ ಜಗತ್ತು ಈ ಒಂದು ವರ್ಷವನ್ನು ನೆಮ್ಮದಿಯಾಗಿಯೂ ಕಳೆದಿದೆ.

2001 ಸೆಪ್ಟೆಂಬರ್ 11ರ ದಾಳಿಗೆ ಪ್ರತ್ಯುತ್ತರವಾಗಿ ಲಾಡೆನ್ ನನ್ನು ನಿರ್ನಾಮ ಮಾಡಿ, ನಮ್ಮನ್ನು ನೆಮ್ಮದಿಯಾಗಿರಲು ಬಿಟ್ಟ ಎಂದು ಅಮೆರಿಕ ಸೇರಿದಂತೆ ವಿಶ್ವದೆಲ್ಲೆಡೆ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಲಾಡೆನ್ ಹತನಾದ ಈ ಒಂದು ವರ್ಷದಲ್ಲಿ ಅವನ ಬಗ್ಗೆ ನೂರೆಂಟು ಸ್ವಾರಸ್ಯಕರ ವಿಷಯಗಳಯ ಬಹಿರಂಗವಾಗಿದೆ.

ಅದನ್ನು 'ದಟ್ಸ್ ಕನ್ನಡ' ಸಹ ದಾಖಲಿಸಿದೆ. ಆ ವರದಿಗಳನ್ನು ಒಂದೊಂದಾಗಿ ಓದಲು ಇಲ್ಲಿ ಕ್ಲಿಕ್ ಮಾಡಿ. ಒಸಾಮಾ ಬಿನ್ ಲಾಡೆನ್ (ಒಬಿಎಲ್)

ಈ ಮಧ್ಯೆ, ಲಾಡೆನ್‌ ಸಂತತಿಗಳೋ ಅಥವಾ ಅವನದೇ ಅಪರಾವತಾರಗಳು ಸೇಡು ತೀರಿಸಿಕೊಳ್ಳಲು ಒಂದಷ್ಟು ತಂಟೆಗಳನ್ನು ಮಾಡಬಹುದು ಎಂದು ಅಂದಾಜಿಸಲಾಗಿದ್ದು, ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ. ಆಯಕಟ್ಟಿನ ಸ್ಥಳಗಳಲ್ಲಿ ಭಾರಿ ಬಿಗಿ ಭದ್ರತೆ ಹಾಕಲಾಗಿದೆ.

English summary
Its is a year after Osama bin Laden was hunted down and killed (May 2, 2011) at his safehouse in Pakistan's military town of Abbottabad by elite American forces.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X