ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು UB Tower ಮಾರಾಟ-ಭೋಗ್ಯಕ್ಕಿದೆ

By Srinath
|
Google Oneindia Kannada News

mallya-may-sell-ub-tower (courtesy: wikipedia)
ಬೆಂಗಳೂರು, ಮೇ 2: ಕಿಂಗ್‌ಫಿಶರ್‌ ಏರ್‌ಲೈನ್ಸ್‌ ದಿವಾಳಿ ಹಂತಕ್ಕೆ ತಲುಪಿದ್ದು ಮದ್ಯದ ದೊರೆ ವಿಜಯ್‌ ಮಲ್ಯ ಅವರು ಇತ್ತೀಚೆಗೆ ಒಂದೇ ಸಮನೆ ದೇವರುದಿಂಡಿರು ಎನ್ನುತ್ತಾ ಸಂಕಷ್ಟಹರ ಜಪ ಮಾಡುತ್ತಿದ್ದಾರೆ. ಆದರೆ ಯಾವ ದೇವರಿಂದ ಅಪ್ಪಣೆ-ಪ್ರೇರಣೆಯಾಯಿತೋ ಬೆಂಗಳೂರಿನ land mark ಗಳಲ್ಲಿ ಒಂದಾದ, ಕಬ್ಬನ್ ಪಾರ್ಕಿನಿಂದ ಕಲ್ಲೆಸೆತದ ಅಂತರದಲ್ಲಿರುವ ತಮ್ಮ UB Tower ಅನ್ನೇ ಮಾರಾಟ ಕಮ್ ಭೋಗ್ಯಕ್ಕೆ ಇಟ್ಟಿದ್ದಾರೆ. ಇದರಿಂದ ಕಿಂಗ್‌ಫಿಶರ್‌ ಏರ್‌ಲೈನ್ಸ್‌ ಕಂಪನಿ ಆರ್ಥಿಕವಾಗಿ ಸದೃಢಗೊಳ್ಳುತ್ತದಾ? ಕಾದು ನೊಡಬೇಕು.

ಮೂಲಗಳ ಪ್ರಕಾರ ಬೆಂಗಳೂರಿನ ವಿಠ್ಠಲ ಮಲ್ಯ ರಸ್ತೆಯಲ್ಲಿರುವ UB Tower ಅನ್ನು sale-and-lease back (ಮಾರಾಟ ಕಮ್ ಭೋಗ್ಯ) ಅಂದರೆ ಕಟ್ಟಡವನ್ನು ಸದ್ಯಕ್ಕೆ ಮಾರಾಟ ಮಾಡಿ ಮುಂದೆ ನಿರ್ದಿಷ್ಟ ಸಮಯದ ಬಳಿಕ ಆ ಕಟ್ಟಡವನ್ನು ತಾವೇ ಖರೀದಿಸಲು ಆಲೋಚಿಸಿದ್ದಾರೆ. ಸದ್ಯಕ್ಕೆ ಸುಮಾರು 650 ಕೋಟಿ ರೂ. ಗೆ ಮಾರಾಟ ಮಾಡಲು Blackstone ಮತ್ತು Kohlberg Kravis Roberts (KKR) ಎಂಬ ಎರಡು ಹಣಕಾಸು ಹೂಡಿಕೆ ಸಂಸ್ಥೆಗಳ ಜೊತೆ ಮಲ್ಯ ಮಾತುಕತೆ ನಡೆಸಲಿದ್ದಾರೆ.

ಮಲ್ಯ ಅವರ ಬಹುತೇಕ ಎಲ್ಲಾ ಕಂಪನಿಗಳ ಕೇಂದ್ರ ಕಚೇರಿಗಳು ಇಲ್ಲಿದೆ. ಜತೆಗೆ 3M, Apple, Citibank, Ernst & Young, Kawasaki and Yahoo! ಅಂತಾರಾಷ್ಟ್ರೀಯ ಕಂಪನಿಗಳ ಕಚೇರಿಗಳೂ ಇದೇ ಕಟ್ಟಡದಲ್ಲಿವೆ. ಒಟ್ಟು ನಾಲ್ಕು ಕಟ್ಟಡಗಳು ಇಲ್ಲಿವೆ: UB Tower (19 ಮಹಡಿ), Comet (11 ಮಹಡಿ), Canberra (17 ಮಹಡಿ) ಮತ್ತು Concorde (19 ಮಹಡಿ).

ದೀಪದ ಕೆಳಗೆ ಕತ್ತಲು: ಮತ್ತೊಂದು ಮೂಲದ ಪ್ರಕಾರ ಮಲ್ಯ ಸಾಹೇಬರು 123 ಮೀಟರ್ ಎತ್ತರದ UB Tower ನಿಂದ ದೂರವಾಗಲು ಏಕೆ ಬಯಸಿದ್ದಾರೆಂದರೆ... ಕಸ್ತೂರು ಬಾ ರಸ್ತೆಯಲ್ಲಿ 'ವೆಹಿಕಲ್ ಗಣೇಶ ಗುಡಿ' ಇದೆ. ಆರಂಭದಲ್ಲಿ ಇದೇ ಗಣೇಶನ ಕೃಪಾಕಟಾಕ್ಷದಲ್ಲಿ ಮಲ್ಯ ಸುಖದ ಸಂಪತ್ತಿನಲ್ಲಿ ತೇಲಿದ್ದರು. ಆದರೆ, ಮಲ್ಯ ಕಟ್ಟಡದ ನೆರಳಿನಲ್ಲಿ ಇಲ್ಲಿನ ಗಣೇಶ ಸ್ವಲ್ಪ ಮಸುಕಾಗಿದ್ದಾನೆ.

ಮಲ್ಯ ಈಗ ಅನುಭವಿಸುತ್ತಿರುವ ಎಲ್ಲ ಸಂಕಷ್ಟಗಳಿಗೂ ಈ ಅಪಚಾರವೇ ಕಾರಣವಾಗಿದೆ ಎಂಬ ಮಾತುಗಳೂ ಕೇಳಿಬಂದಿವೆ. ಆದ್ದರಿಂದ ಸಂಕಷ್ಟಹರ ಗಣೇಶನನ್ನು ಸಂಪ್ರೀತಗೊಳಿಸುವುದಕ್ಕಾಗಿ ಮಲ್ಯ ಸಾಹೇಬರು ಜಾಗ ಖಾಲಿ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.

English summary
According to media reports Vijay Mallya is in talks to sell UB Tower for Rs 650 cr. UB Tower, 123 meters high and one of the tallest buildings in Bangalore, houses all UB Group companies' corporate offices.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X