ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರ್ತಿ ಏರ್ ಟೆಲ್ ನಿವ್ವಳ ಲಾಭ ಕುಸಿತ

By Mahesh
|
Google Oneindia Kannada News

Bharti Airtel Q4 report
ಬೆಂಗಳೂರು, ಮೇ.2: ಮಾರ್ಚ್ 31, 2012ಕ್ಕೆ ಕೊನೆಗೊಂಡ ನಾಲ್ಕನೇ ತ್ರೈಮಾಸಿಕದಲ್ಲಿ ಪ್ರಮುಖ ಟೆಲಿಕಾಂ ಸಂಸ್ಥೆ ಭಾರ್ತಿ ಏರ್ ಟೆಲ್ ನಿವ್ವಳ ಲಾಭ ಕೊಂಚ ಕುಸಿದಿದೆ. Q4ನಲ್ಲಿ ಒಟ್ಟು 1,006 ಕೋಟಿ ರು ಲಾಭಗಳಿಸಿದೆ. ಕಳೆದ ವರ್ಶಹ್ ಇದೆ ಅವಧಿಯಲ್ಲಿ 1,401 ನಿವ್ವಳ ಲಾಭ ದಾಖಲಿಸಿತ್ತು.

ನಾಲ್ಕನೇ ತ್ರೈಮಾಸಿಕದಲ್ಲಿ ಒಟ್ಟು ಆದಾಯ ಮಾತ್ರ ಶೇ 15ರಷ್ಟು ಏರಿಕೆ ಕಂಡಿದೆ. ಒಟ್ಟು 18,729 ರು ಆದಾಯ ಗಳಿಸಿದೆ. 3ಜಿ ಲೈಸನ್ಸ್ ಹಣ(ಸುಮಾರು 106 ಕೋಟಿ ರು) ಹಾಗೂ 3ಜಿ ಬಡ್ಡಿ ದರ(84 ಕೋಟಿ ರು), ಇತರೆ ನಷ್ಟ(132 ಕೋಟಿ ರು) ಹಾಗೂ ತೆರಿಗೆ ವ್ಯಯ(198 ಕೋಟಿ ರು) ವಾಗಿರುವುದು ಭಾರ್ತಿ ಏರ್ ಟೆಲ್ ಗೆ ಭಾರಿ ಹೊರೆಯಾಗಿದೆ.

ಸುಮಾರು 20 ದೇಶಗಳಲ್ಲಿ 250 ಮಿಲಿಯನ್ ಗ್ರಾಹಕರನ್ನು ಹೊಂದಿದ್ದೇವೆ ಎನ್ನಲು ಹರ್ಷವಾಗುತ್ತದೆ. ಸರ್ಕಾರದ ಟೆಲಿಕಾಂ ನೀತಿಗಳಿಗನುಗುಣವಾಗಿ 4ಜಿ ಪರಿಚಯಿಸಲು ಉತ್ಸುಕರಾಗಿದ್ದೇವೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ, ಚೇರ್ಮನ್ ಸುನಿಲ್ ಭಾರ್ತಿ ಮಿತ್ತಲ್ ಹೇಳಿದ್ದಾರೆ. ಷೇರುಪೇಟೆಯಲ್ಲಿ ಬುಧವಾರ ಬೆಳಗ್ಗೆ 10.00ಕ್ಕೆ 316.65 ಮುಖಬೆಲೆಯ ಭಾರ್ತಿ ಏರ್ ಟೆಲ್ ಷೇರುಗಳು ಬಿಎಸ್ ಇನಲ್ಲಿ ಶೇ 1.96ರಷ್ಟು ಏರಿಕೆ ಕಂಡಿತ್ತು.

English summary
Bharti Airtel has reported a net profit of Rs 1006 crores for the fourth quarter ending March 31, 2012, as against Rs 1,401 crores reported in the corresponding period of last year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X