ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಸಾಪ ಅಧ್ಯಕ್ಷರಾಗಿ ಪುಂಡಲೀಕ ಹಾಲಂಬಿ ಆಯ್ಕೆ?

By Mahesh
|
Google Oneindia Kannada News

Kannada Sahithya Parishat election
ಬೆಂಗಳೂರು, ಏ.29: ಕನ್ನಡ ಸಾಹಿತ್ಯ ಪರಿಷತ್ತಿನ 24ನೇ ಅಧ್ಯಕ್ಷ ಸ್ಥಾನ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕಾಗಿ ನಡೆದ ಭಾನುವಾರ(ಏ.29) ಚುನಾವಣೆ ಪೂರ್ಣಗೊಂಡಿದೆ. ಬೆಂಗಳೂರಿನಲ್ಲಿ ಶೇ 37 ರಷ್ಟು ಮತದಾನವಾಗಿದ್ದರೆ, ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಸರಾಸರಿ ಶೇ 70ಕ್ಕೂ ಅಧಿಕ ಮತದಾನ ಆಗಿದೆ. ಮತದಾನ ನಂತರ ಬಂದಿರುವ ವರದಿ ಪ್ರಕಾರ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಾಲಂಬಿ ಅವರ ಪರ ಮತಗಳು ಹೆಚ್ಚಾಗಿ ಬಂದಿದೆ. ಈ ಹಿನ್ನೆಲೆಯಲ್ಲಿ ಪುಂಡಲೀಕ ಹಾಲಂಬಿ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ. ಅಧಿಕೃತ ಘೋಷಣೆ ಮಾತ್ರ ಬಾಕಿ ಉಳಿದಿದೆ.

ಕಸಾಪ ಅಧ್ಯಕ್ಷ ಸ್ಥಾನಕ್ಕೆ ಪ್ರೊ. ಚಂದ್ರಶೇಖರ ಪಾಟೀಲ ಹಾಗೂ ಪುಂಡಲೀಕ ಹಾಲಂಬಿ ಅವರ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಮೇ. 2ರಂದು ಅಧಿಕೃತವಾಗಿ ಫಲಿತಾಂಶ ಹೊರಬೀಳಲಿದೆ. ಒಟ್ಟು 192 ಮತಗಟ್ಟೆಗಳಲ್ಲಿ 1,08,028 ಮತದಾರರು ತಮ್ಮ ಗುರುತಿನ ಚೀಟಿ ತೋರಿಸಿ ಎರೆಡೆರಡು ಮತ ಚೀಟಿಗಳನ್ನು ಪಡೆದು ವೋಟ್ ಮಾಡಿದರು.

ಈ ನಡುವೆ ಜಿಲ್ಲಾ ಘಟಕ, ಗಡಿನಾಡು ಭಾಗದ ಘಟಕಗಳ ಫಲಿತಾಂಶ ಭಾನುವಾರ(ಏ.29) ಹೊರ ಬಿದ್ದಿದೆ. ಬೆಂಗಳೂರು ಗ್ರಾಮಾಂತರ ಅಧ್ಯಕ್ಷರಾಗಿ ಹುಲಿಕಲ್ ನಟರಾಜ್ ಆಯ್ಕೆಯಾಗಿದ್ದಾರೆ. ಚಾಮರಾಜನಗರ ಜಿಲ್ಲೆಗೆ ಸೋಮಶೇಖರ್ ಬಿಸಲವಾಡಿ, ದಕ್ಷಿಣ ಕನ್ನಡ ಜಿಲ್ಲೆಗೆ ಪ್ರದೀಪ್ ಕುಮಾರ್ ಕಲ್ಕೂರ ಅವರು ಅಧ್ಯಕ್ಷರಾಗಿದ್ದಾರೆ.

ಉಳಿದಂತೆ ವಿವಿಧ ಜಿಲ್ಲಾ ಕಸಾಪ ಅಧ್ಯಕ್ಷರ ವಿವರ ಇಂತಿದೆ:

* ಬೆಂಗಳೂರು ನಗರ: ಟಿ. ತಿಮ್ಮೇಶ್‌
* ಬೆಂಗಳೂರು ಗ್ರಾಮಾಂತರ- ಹುಲಿಕಲ್‌ ನಟರಾಜ್‌
* ಯಾದಗಿರಿ: ಸಿದ್ದಪ್ಪ ಹೊಟ್ಟಿ
* ತುಮಕೂರು: ಸೋಮು ಭಾಸ್ಕರಾಚಾರ್‌
* ಚಿತ್ರದುರ್ಗ: ಆರ್‌. ಮಲ್ಲಿಕಾರ್ಜುನಯ್ಯ
* ದಾವಣಗೆರೆ: ಎ.ಆರ್‌. ಉಜ್ಜನಪ್ಪ
* ಮಂಡ್ಯ: ಮೀರಾ ಶಿವಲಿಂಗಯ್ಯ
* ಹಾಸನ: ಎಚ್‌.ಎಲ್‌. ಜನಾರ್ದನ
* ಚಿಕ್ಕಮಗಳೂರು: ಎನ್‌.ಎಸ್‌.ಶಿವಸ್ವಾಮಿ
* ಧಾರವಾಡ: ಲಿಂಗರಾಜ ರುದ್ರಪ್ಪ ಅಂಗಡಿ
* ಉಡುಪಿ: ನೀಲಾವರ ಸುರೇಂದ್ರ ಅಡಿಗ
* ಕೊಡಗು: ಟಿ.ಪಿ. ರಮೇಶ್
* ವಿಜಾಪುರ: ಮಲ್ಲಿಕಾರ್ಜುನ ಇಂಡಿಗೇರಿ
* ಬಾಗಲಕೋಟೆ: ವಿಜಯಕುಮಾರ ಸ್ವಾಮಿ
* ಗುಲ್ಬರ್ಗ: ಮಹಿಪಾಲ್‌ರೆಡ್ಡಿ ಮುನ್ನೂರ
* ರಾಯಚೂರು: ಮಹಾಂತೇಶ್‌ ಮಸ್ಕಿ
* ಶಿವಮೊಗ್ಗ: ಡಿ. ಮಂಜುನಾಥ್‌
* ಕೊಪ್ಪಳ: ಈರಪ್ಪ ಮಲ್ಲಪ್ಪ ನಿಂಗೋಜಿ
* ಬೀದರ್: ಸಿದ್ದರಾಮಪ್ಪ ಮಾಸಿ ಮಡಿ

English summary
Elections for the President's post of Kannada Sahitya Parishat (KSP) central as well as the district unit held today(Apr.29). Only the voters having ID cards voted for the both post. KSP President result will be out on May 2. District unit president result is out Hulikal Nataraj wins Bangalore rural president
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X