ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿರ್ಮಲ್ ಬಾಬಾ 238 ಕೋಟಿ ಮೇಲೆ ಸಿಬಿಐ ಕಣ್ಣು

By Mahesh
|
Google Oneindia Kannada News

Godman Nirmal Baba Assets
ನವದೆಹಲಿ, ಏ.29: ಸ್ವಯಂ ಘೋಷಿತ ದೇವಮಾನವ ನಿರ್ಮಲ್ ಬಾಬಾ ಅವರ 230 ಕೋಟಿ ರು ಪ್ಲಸ್ ಅಕ್ರಮ ಆಸ್ತಿ ಬಗ್ಗೆ ಆದಾಯ ತೆರಿಗೆ ಇಲಾಖೆ ಪ್ರಶ್ನಿಸಲು ಮುಂದಾದ ಬೆನ್ನಲ್ಲೇ ಸಿಬಿಐ ಕೂಡಾ ತನಿಖೆ ನಡೆಸಲು ಸಜ್ಜಾಗಿರುವ ಸುದ್ದಿ ಹೊರಬಿದ್ದಿದೆ.

ನಿರ್ಮಲ್ ಬಾಬಾ ವಿರುದ್ಧ ತಿರುಗಿಬಿದ್ದಿರುವ ಭಾರತ್ ಜನ್ ವಿಜ್ಞಾನ್ ಜಾಥ ಎಂಬ ಎನ್ ಜಿಒ, ಜನರ ಕಣ್ಣಿಗೆ ಮಣ್ಣೆರೆರಚಿ ಹಣ ದೋಚುತ್ತಿರುವ ನಿರ್ಮಲ್ ಬಾಬಾ ಸುಮಾರು 238 ಕೋಟಿ ರು ಗೂ ಅಧಿಕ ಹಣ ಗಳಿಸಿದ್ದಾರೆ. ಈ ಬಗ್ಗೆ ಸಿಬಿಐ ತನಿಖೆ ಅಗತ್ಯವಿದೆ ಎಂದು ಆಗ್ರಹಿಸಿದ್ದಾರೆ.

ಬಾಬಾ ಢೋಂಗಿತನ ಬಯಲು ಮಾಡಲು ಸುಮಾರು 8,940ಕ್ಕೂ ಅಧಿಕ ಕಾರ್ಯಕ್ರಮ, ಬೀದಿ ನಾಟಕಗಳನ್ನು ಹಮ್ಮಿಕೊಂಡು ಜನಜಾಗೃತಿ ಮೂಡಿಸಿದೆ. ಈ ಅಭಿಯಾನದ ಯಶಸ್ಸನ್ನು ಸಿಬಿಐಗೆ ತಿಳಿಸಿ ಬಾಬಾ ಅವರ ವಂಚಕತನ ಬಯಲಿಗೆಳೆಯಲು ಭಾರತ್ ಜನವಿಜ್ಞಾನ ಜಾಥ ಸಂಸ್ಥೆ ಸಿದ್ಧವಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥ ಜಯಂತ್ ಪಾಂಡ್ಯ ಹೇಳಿದ್ದಾರೆ.

ಆದಾಯ ತೆರಿಗೆ ಇಲಾಖೆ ವರದಿ ಬಂದ ನಂತರ ಬಾಬಾ ಮೇಲೆ ತನಿಖೆ ನಡೆಸಲು ಸಿಬಿಐ ಕೂಡಾ ಉತ್ಸುಕವಾಗಿದ್ದು, ಎನ್ ಜಿಒ ಸಹಾಯ ಪಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ.

English summary
The self-proclaimed godman Nirmal Baba may land in a big trouble as now an NGO demanded a massive probe by the investigative agency - Central. The NGO - Bharat Jan Vigyan Jatha accused Nirmal Baba of amassing wealth and property worth Rs 238 crore by misguiding people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X