ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿದುಳಿಗೆ ಘಾಸಿ ಮಾಡಿದ ಕೆಎಫ್‌ಸಿಗೆ ಭಾರೀ ದಂಡ

By Prasad
|
Google Oneindia Kannada News

KFC chicken damages girl's brain
ಸಿಡ್ನಿ, ಏ. 27 : ವೆಜ್ ಬರ್ಗರ್ ನೀಡುವುದಾಗಿ ಹೇಳಿ ನಾನ್-ವೆಜ್ ಬರ್ಗರ್ ನೀಡಿ ದಂಡ ತೆತ್ತಿರುವ ಬಹುರಾಷ್ಟ್ರೀಯ ಕಂಪನಿ ಮೆಕ್‌ಡೊನಾಲ್ಡ್ ಕಂಪನಿಯ ಕಥೆ ಒಂದು ರೀತಿಯದಾದರೆ, ಒಂದು ಹುಡುಗಿಯ ಮಿದುಳನ್ನೇ ನಿಷ್ಕ್ರಿಯವನ್ನಾಗಿ ಮಾಡಿದ ಮತ್ತೊಂದು ಬಹುರಾಷ್ಟ್ರೀಯ ಕಂಪನಿ ಕೆಂಟಕಿ ಫ್ರೈಡ್ ಚಿಕನ್ (ಕೆಎಫ್‌ಸಿ) ಮತ್ತೊಂದು ದುರಂತ ಕಥೆಗೆ ಮುನ್ನುಡಿ ಬರೆದಿದೆ.

ಕೆಎಫ್‌ಸಿ ಫಾಸ್ಟ್ ಫುಡ್‌ನಲ್ಲಿ ವಿಷಪೂರಿತ ಚಿಕನ್ ತಿಂದಿದ್ದರಿಂದ 7 ವರ್ಷದ ಹುಡುಗಿ ಮೋನಿಕಾ ಸಮಾನ್‌ಳ ಮಿದುಳಿಗೆ ಘಾಸಿಯಾಯಿತು. ಈ ಘಟನೆ ನಡೆದಿದ್ದು 2005ರಲ್ಲಿ. ಕೆಎಫ್‌ಸಿ ವಿರುದ್ಧ ದಾಖಲಾದ ಪ್ರಕರಣ ಇತ್ಯರ್ಥವಾಗಿ ನ್ಯೂ ಸೌತ್ ವೇಲ್ಸ್ ನ್ಯಾಯಾಧೀಶರು, ಮೋನಿಕಾ ಕುಟುಂಬದವರಿಗೆ ಕೆಎಫ್‌ಸಿ 8.3 ಮಿಲಿಯನ್ ಡಾಲರ್ ದಂಡ ನೀಡಬೇಕೆಂದು ಶುಕ್ರವಾರ ಆದೇಶ ಹೊರಡಿಸಿದೆ.

ಕೆಎಫ್‌ಸಿ ಫಾಸ್ಟ್ ಫುಡ್‌ನಲ್ಲಿ ಚಿಕನ್ ತಿಂದಿದ್ದರಿಂದಲೇ ಮಗುವಿನ ಮಿದುಳು ಹಾಳಾಗಿದೆ ಎಂದು ನ್ಯಾಯಾಧೀಶ ಸ್ಟೀಫನ್ ರಾಥ್ಮನ್ ತೀರ್ಪು ನೀಡಿದ್ದಾರೆ. ಪ್ರಕರಣದ ಖರ್ಚು ವೆಚ್ಚ ಮತ್ತು ಪರಿಹಾರ ಸೇರಿಸಿ 8.3 ಮಿಲಿಯನ್ ಡಾಲರ್ ಹಣ ನೀಡಬೇಕೆಂದು ಏ.27ರಂದು ಆದೇಶ ಹೊರಡಿಸಿದ್ದಾರೆ.

ಈ ತೀರ್ಪಿನಿಂದ ತುಂಬಾ ನಿರಾಳವಾಗಿದೆ. ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ಮೋನಿಕಾ ಕುಟುಂಬದವರು ಹರ್ಷ ವ್ಯಕ್ತಪಡಿಸಿದ್ದಾರೆ. ಆದರೆ, ಕೋರ್ಟ್ ತೀರ್ಪನ್ನು ಒಪ್ಪಲು ಕೆಎಫ್‌ಸಿ ತಯಾರಿಲ್ಲ. ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಕೆಎಫ್‌ಸಿ ಹೇಳಿದೆ.

1930ರಲ್ಲಿ ಸ್ಥಾಪಿತವಾದ ಕೆಎಫ್‌ಸಿ ವಿಶ್ವದಾದ್ಯಂತ 80 ರಾಷ್ಟ್ರಗಳಲ್ಲಿ 13 ಸಾವಿರ ಮಳಿಗೆಗಳನ್ನು ಹೊಂದಿದೆ. ಮ್ಯಾಕ್‌ಡೊನಾಲ್ಡ್ ರೀತಿಯಲ್ಲಿ ಕೆಎಫ್‌ಸಿ ಕೂಡ ಮಾಂಸಾಹಾರಿ ತಿನಿಸುಗಳ ಜೊತೆಗೆ ಸಸ್ಯಾಹಾರಿ ತಿನಿಸುಗಳನ್ನು ಕೂಡ ಗ್ರಾಹಕರಿಗೆ ಒದಗಿಸುತ್ತದೆ. (ಏಜೆನ್ಸೀಸ್)

English summary
Kentucky Fried Chicken (KFC) has been ordered to pay 8.3 million dollar damages for the family of a girl, whose brain was damaged after she ate chicken at a fast food junction. The order has been passed by New South Wales court on April 27, Friday. KFC has said that it would file appeal against the order.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X