ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಸಭೆ ನಿವೃತ್ತರಿಗೆ, ಸಚಿನ್‌ಗಲ್ಲ : ಹೇಮಾ ಮಾಲಿನಿ

By Prasad
|
Google Oneindia Kannada News

ನವದೆಹಲಿ, ಏ. 27 : ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜಕೀಯ ವಲಯ ಸಚಿನ್ ಅವರನ್ನು ಮುಕ್ತಹಸ್ತದಿಂದ ಸ್ವಾಗತಿಸಿದ್ದರೆ, ಅವರನ್ನು ಹತ್ತಿರದಿಂದ ಬಲ್ಲ ಕ್ರಿಕೆಟ್ ಪಟುಗಳು ಮತ್ತು ಸಾರ್ವಜನಿಕರು 'ಛೆ, ಸಚಿನ್ ಇದೆಂಥ ಕೆಲಸ ಮಾಡಿಬಿಟ್ಟರು' ಎಂಬಂತೆ ಪ್ರತಿಕ್ರಿಯಿಸಿದ್ದಾರೆ.

ಕರ್ನಾಟಕದಿಂದ ಕಳೆದ ಅವಧಿಗೆ ರಾಜ್ಯಸಭೆಗೆ ಆಯ್ಕೆಯಾಗಿದ್ದ 63 ವರ್ಷದ ಚಿರಯವತಿ 'ಡ್ರೀಮ್ ಗರ್ಲ್' ಹೇಮಾ ಮಾಲಿನಿ ಅವರು, "ರಾಜ್ಯಸಭೆ ಇರುವುದು ನಿವೃತ್ತರಿಗೆ ಮಾತ್ರ. ಸಚಿನ್ ಇನ್ನೂ ನಿವೃತ್ತಿಯಾಗಿಲ್ಲ ಎಂದು ಅಂದುಕೊಂಡಿದ್ದೇನೆ. ಹಾಗೆಯೆ, ರಾಜ್ಯಸಭೆಯಲ್ಲಿ ಅವರಿಗೆ ಬೋರು ಹೊಡೆಯಲಿಕ್ಕಿಲ್ಲ" ಎಂದು ವ್ಯಂಗ್ಯಭರಿತ ಮಾತಿನಲ್ಲಿ ವಸ್ತುಸ್ಥಿತಿಯನ್ನು ಸಚಿನ್ ಮುಂದೆ ತೆರೆದಿಟ್ಟಿದ್ದಾರೆ.

ಸಚಿನ್ ನಾಮನಿರ್ದೇಶನವನ್ನು ಬಾಲಿವುಡ್ (ಮಾಜಿ) ನಿರ್ದೇಶಕ ಮಹೇಶ್ ಭಟ್ ಅವರು ಸ್ವಾಗತಿಸಿದ್ದಾರೆ. "ಸಚಿನ್ ಒಬ್ಬ ಮಹಾನ್ ವ್ಯಕ್ತಿ. ಅವರು ಮಹಾನ್ ಆಗಿದ್ದಕ್ಕೇ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಯಶಸ್ಸು ಅವರನ್ನು ಅಲ್ಲಿಯೂ ಹಿಂಬಾಲಿಸುತ್ತದೆ ಎಂದು ಆಶಿಸುತ್ತೇನೆ" ಎಂದು ಅವರು ನುಡಿದಿದ್ದಾರೆ.

ಆದರೆ, ಸಚಿನ್ ಅವರ ಆಯ್ಕೆಯಿಂದ ತೀವ್ರ ಆಘಾತ ವ್ಯಕ್ತಪಡಿಸಿರುವ ಮಾಜಿ ಕ್ರಿಕೆಟ್ ಪಟು ಸಂಜಯ್ ಮಾಂಜ್ರೇಕರ್ ಅವರು, "ಸಚಿನ್ ಅವರನ್ನು ನಾಮನಿರ್ದೇಶನ ಮಾಡಿರುವ ಸುದ್ದಿ ಆಘಾತಕರ. ಆ ನಾಮನಿರ್ದೇಶನವನ್ನು ಸಚಿನ್ ಒಪ್ಪಿಕೊಂಡಿದ್ದು ಮತ್ತೂ ಆಘಾತಕರ. ಸಚಿನ್ ಕ್ರಿಕೆಟ್ ಅಂಕಣದಲ್ಲಿ ಸಾಧಿಸಬೇಕಾಗಿರುವುದು ಇನ್ನೂ ಸಾಕಷ್ಟಿದೆ" ಎಂದಿದ್ದಾರೆ.

ಸಚಿನ್ ಅವರ ಆಯ್ಕೆಯ ಬಗ್ಗೆ ಟ್ವಿಟ್ಟರ್‌ನಲ್ಲಿಯೂ ಭಾರೀ ಚರ್ಚೆ ನಡೆದಿದೆ. ಹೆಚ್ಚಿನವರು ಇದಕ್ಕೆ ವಿರೋಧವಾಗಿದ್ದಾರೆ. ಕ್ರಿಕೆಟ್‌ಗೆ ಸಚಿನ್ ಅವರ ಸೇವೆ ಇನ್ನೂ ಬೇಕಾಗಿದೆ. ಅವರು ರಾಜಕೀಯ ಪ್ರವೇಶಿಸುತ್ತಿರುವುದು ಊಹಿಸಲೂ ಅಸಾಧ್ಯವಾಗಿದೆ ಎಂದು ಹಲವರು ಹೇಳಿದ್ದರೆ, ಸಚಿನ್‌ರಂಧ ಸಜ್ಜನರು ರಾಜಕೀಯಕ್ಕೆ ಬರಬೇಕು ಎಂದು ಕೆಲವರು ಟ್ವೀಟಿಸಿದ್ದಾರೆ. ಒನ್ಇಂಡಿಯಾ ಕನ್ನಡದಲ್ಲಿ, ಸಚಿನ್ ಯಾವ ಪಕ್ಷ ಸೇರಬೇಕು ಎಂದು ಕೇಳಿದ ಪ್ರಶ್ನೆಗೆ ಯಾವುದೂ ಬೇಡ ಎಂದು ಬಹುಸಂಖಿತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಪಿಟಿಐ)

English summary
Actress and former Rajya Sabha member from Karnataka Hema Malini has said, rajya sabha is for the retired people, in reaction to Sachin's nomination to the upper house. Former cricketer Sanjay Manjrekar too was shocked. Mixed reaction has come on twitter also.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X