ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊದ್ಲು ಟೆಸ್ಟ್ ಮಾಡಿಸಿಕೊಳ್ಳಿ- ತಿವಾರಿಗೆ ಕೋರ್ಟ್

By Srinath
|
Google Oneindia Kannada News

nd-tivari-should-under-go-dna-test-delhi-court
ನವದೆಹಲಿ, ಏ.27: ಪಿತೃತ್ವ ವಿವಾದ ಸಂಬಂಧ ಡಿಎನ್‌ಎ ಟೆಸ್ಟ್ ಮಾಡಿಸಿಕೊಳ್ಳುವುದಕ್ಕೆ ಒಲ್ಲೆ ಎಂದು ಕಾಂಗ್ರೆಸ್‌ ಮುಖಂಡ ಎನ್ ಡಿ ತಿವಾರಿ ಹಾಡುತ್ತಿದ್ದ ರಾಗಕ್ಕೆ ದೆಹಲಿ ಹೈಕೋರ್ಟ್‌ ಶುಕ್ರವಾರ ಬ್ರೇಕ್ ಹಾಕಿದೆ.

ಡಿಎನ್‌ಎ ಪರೀಕ್ಷೆಗಾಗಿ ಮೊದಲು ರಕ್ತದ ಮಾದರಿ ನೀಡಿ ಎಂದು ಹೈಕೋರ್ಟ್‌ ತಾಕೀತು ಮಾಡಿದೆ. ಹಾಗಾಗಿ ಅನ್ಯ ಮಾರ್ಗವಿಲ್ಲದೆ, ಅನಿವಾರ್ಯವಾಗಿ ತಿವಾರಿ ಈ ಬಾರಿ ಡಿಎನ್ಎ ಪರೀಕ್ಷೆಗಾಗಿ ತಮ್ಮ ರಕ್ತದ ಮಾದರಿ ನೀಡಲೇಬೇಕಾಗಿದೆ.

ಒಂದು ವೇಳೆ ತಿವಾರಿ ವರಾತ ತೆಗೆದರೆ ಪೊಲೀಸರ ಬಲ ಪ್ರಯೋಗಿಸಿ ಅವರಿಂದ ರಕ್ತ ಮಾದರಿ ಪಡೆಯಲು ತನ್ನದೇನೂ ಆಭ್ಯಂತರವಿಲ್ಲ ಎಂದೂ ಕೋರ್ಟ್ ಸ್ಪಷ್ಟಪಡಿಸಿದೆ. 32 ವರ್ಷದ ರೋಹಿತ್ ಶೇಖರ್ ಎಂಬುವವರು ತಾವು ತಿವಾರಿ ಅವರ ಮಗ (ತಾಯಿ ಉಜ್ವಲ ಶರ್ಮಾ) ಎಂದು ಹೇಳಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಹಳೆಯ ಪ್ರಕರಣ ಇದಾಗಿದೆ. ರೋಹಿತ್, 18 ವರ್ಷದವರಾಗಿದ್ದಾಗ ತಿವಾರಿ ತಮ್ಮ ಜನ್ಮದಾತ ಎಂದು ಕೋರ್ಟಿಗೆ ಅಲವತ್ತುಕೊಂಡಿದ್ದರು.

'ನನ್ನ ಆತ್ಮಗೌರವ ಉಳಿಸಿಕೊಳ್ಳುವ ಸಲುವಾಗಿ ಮತ್ತು ಒಬ್ಬ ಹಿರಿಯ ನಾಗರಿಕನಾಗಿ ಡಿಎನ್‌ಎ ಪರೀಕ್ಷೆಗೆ ರಕ್ತದ ಮಾದರಿ ಕೊಡಲು ತಯಾರಿಲ್ಲ. ನಾನು 70 ವರ್ಷಗಳಿಂದಲೂ ರಾಜಕೀಯದಲ್ಲಿದ್ದೇನೆ. ಎಂದೂ ನನ್ನ ಮೇಲೆ ಯಾವ ರೀತಿಯ ಆರೋಪಗಳೂ ಕೇಳಿಬಂದಿಲ್ಲ' ಎಂದೇ ತಿವಾರಿ ಡಿಎನ್‌ಎ ಪರೀಕ್ಷೆಗೆ ಕೊಂಕು ತೆಗೆಯುತ್ತಿದ್ದರು.

English summary
Even as veteran Congress leader N D Tiwari sticks to no DNA test. The Delhi High Court on Friday (Apr 27) ordered him to give his blood sample for the DNA test in a paternity suit filed by Rohit Shekhar, who claims to be Tiwari's biological son.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X