ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

McDonaldsನಲ್ಲಿ ವೆಜ್ ಕೇಳಿದರೆ ನಾನ್ ವೆಜ್ ಬರ್ಗರ್

By Mahesh
|
Google Oneindia Kannada News

B'lore: McDonald’s fined for serving non-veg to veggies
ಬೆಂಗಳೂರು, ಏ.27: ಜನಪ್ರಿಯ ಫಾಸ್ಟ್ ಫುಡ್ ಜಾಲ ಮೆಕ್ ಡೊನಾಲ್ಡ್ ಮಳಿಗೆಗೆ ಬರ್ಗರ್ ನೀಡಿದ್ದಕ್ಕೆ 15 ಸಾವಿರ ರು. ದಂಡ ವಿಧಿಸಲಾಗಿದೆ. ಅಲ್ಲದೆ, ಒಂದು ದಿನ ಅಂಗಡಿ ಮುಚ್ಚುವಂತೆ ಆದೇಶಿಸಲಾಗಿದೆ. ಇಷ್ಟಕ್ಕೂ ಮೆಕ್ ಡೊನಾಲ್ಡ್ ನವರು ಮಾಡಿದ್ದ ತಪ್ಪಾದರೂ ಏನು? ವೆಜ್ ಬರ್ಗರ್ ಕೇಳಿದ ಗ್ರಾಹಕರೊಬ್ಬರಿಗೆ ನಾನ್ ವೆಜ್ ಬರ್ಗರ್ ನೀಡಿದ್ದೇ ಅಪರಾಧವಾಗಿದೆ.

ನ್ಯೂ ಬಿಇಎಲ್ ರಸ್ತೆಯಲ್ಲಿರುವ ಎಂಎಸ್ ರಾಮಯ್ಯ ಕಾಲೇಜು ಬಳಿಯ ಮೆಕ್ ಡೊನಾಲ್ಡ್ ಮಳಿಗೆಗೆ 45 ವರ್ಷದ ಉದ್ಯಮಿ ವಿಕ್ರಮ್ ತಮ್ಮ ಗೆಳೆಯರೊಂದಿಗೆ ಹೋಗಿದ್ದಾರೆ. 4 ವೆಜ್ ಬರ್ಗರ್ ಆರ್ಡರ್ ಮಾಡಿದ ವಿಕ್ರಮ್ ಗೆ ಸಿಕ್ಕಿದ್ದು ಮಾತ್ರ ನಾನ್ ವೆಜ್ ಬರ್ಗರ್.

ತಮ್ಮ ಮುಂದಿರುವ ವೆಜ್ ಬರ್ಗರ್ ಎಂದು ತಿಳಿರು ಬಾಯಿಗೆ ಇಟ್ಟುಕೊಂಡ ವಿಕ್ರಮ್ ಗೆ ಶಾಕ್ ಆಗಿದೆ. ಸಾಂಪ್ರದಾಯಿಕ ಕುಟುಂಬದಿಂದ ಬಂದಿರುವ ವಿಕ್ರಮ್, ಒಮ್ಮೆ ಕೂಡಾ ಮಾಂಸಾಹಾರ ಸೇವಿಸಿಲ್ಲ. ಆದರೆ, ವಿಕ್ರಮ್ ಮೆಕ್ ಡೊನಾಲ್ಡ್ ನಲ್ಲಿ ತಿಂದಿದ್ದು ಮಾತ್ರ ಚಿಕನ್ ಬರ್ಗರ್.

ವೆಜ್ ಬರ್ಗರ್ ಬದಲು ಚಿಕನ್ ಬರ್ಗರ್ ಕೊಟ್ಟಿದ್ದನ್ನು ಮೆಕ್ ಡೊನಾಲ್ಡ್ ಸಿಬ್ಬಂದಿ ಕೂಡಾ ಒಪ್ಪಿಕೊಂಡಿದ್ದಾನೆ. ನಂತರ ಈ ಬಗ್ಗೆ ದೂರು ದಾಖಲಾತಿ ಪುಸ್ತಕದಲ್ಲಿ ಬರೆಯಲು ವಿಕ್ರಮ್ ಮುಂದಾಗಿದ್ದಾರೆ. ಆದರೆ, ಸಿಬ್ಬಂದಿ ಅನುಮತಿ ನೀಡಲಿಲ್ಲ.

ತಕ್ಷಣವೇ ಬಿಬಿಎಂಪಿ ವಲಯ ಆರೋಗ್ಯ ಅಧಿಕಾರಿ ಅವರಿಗೆ ದೂರು ನೀಡಿದ್ದಾರೆ. ಶಾಖಾಹಾರಿ ಆಹಾರ ಪದ್ಧತಿ ಅನುಸರಿಸುವ ವಿಕ್ರಮ್ ಕುಟುಂಬದವರಿಗೆ ವಂಚಿಸಿ ಮಾಂಸಾಹಾರ ತಿನ್ನಿಸಲಾಗಿದೆ. ವೆಜ್ ಬರ್ಗರ್ ಬದಲು ಚಿಕನ್ ಬರ್ಗರ್ ನೀಡಲಾಗಿದೆ ಎಂದು ದೂರು ನೀಡಿದ್ದಾರೆ ಎಂದು ಡಾ ದೇವಕಿ ಉಮೇಶ್ ಹೇಳಿದ್ದಾರೆ.

ಪರಿಹಾರ ಏನು?: ವೆಜ್ ಹಾಗೂ ನಾನ್ ವೆಜ್ ತಿಂಡಿಗಳನ್ನು ಒಂದೇ ಕಡೆ ತಯಾರಿಸಲಾಗುತ್ತಿದೆ. ಎರಡನ್ನು ಗ್ರಾಹಕರಿಗೆ ನೀಡುವಲ್ಲಿ ಗೊಂದಲ ಉಂಟಾಗುತ್ತದೆ ಎಂಬುದು ತಿಳಿದು ಬಂದಿದೆ. ಮೆಕ್ ಡೊನಾಲ್ಡ್ ಗೆ 15,000 ರು ದಂಡ ವಿಧಿಸಲಾಗಿದೆ. ಅಕ್ಷಯ ತದಿಗೆ ದಿನದಿಂದ ಮೆಕ್ ಡೊನಾಲ್ಡ್ ಮುಚ್ಚಿದೆ. ಮತ್ತೊಮ್ಮೆ ಬಿಬಿಎಂಪಿ ಅಧಿಕಾರಿಗಳು ಪರಿಶೀಲನೆ ನಡೆಸಿದ ಮೇಲೆ ಮತ್ತೆ ಮಳಿಗೆ ಆರಂಭಿಸಲಾಗುವುದು ಎಂದು ಡಾ.ದೇವಕಿ ಹೇಳಿದ್ದಾರೆ.

English summary
Popular food joint, McDonald's on the New BEL Road, near MS Ramaiah College, has been slapped a fine of Rs 15,000 and shut down for a day for wrongfully serving non-vegetarian food to a family that had ordered vegetarian food.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X