ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರೇಂದ್ರ ಮೋದಿ ಮತ್ತೆ ನೋ ಎಂದ ಅಮೆರಿಕ

By Mahesh
|
Google Oneindia Kannada News

Narendra Modi
ವಾಷಿಂಗ್ಟನ್, ಏ.26: ಗೋಧ್ರಾ ಹತ್ಯಾಕಾಂಡ ಕೇಸ್ ನಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಗೆ ಕ್ಲೀನ್ ಚಿಟ್ ಸಿಕ್ಕಿರಬಹುದು. ಆದರೆ, ಅಮೆರಿಕ ಪಾಲಿಗೆ ಮೋದಿ ಇನ್ನೂ ವೀಸಾ ಪಡೆಯುವ ಅರ್ಹತೆ ಹೊಂದಿಲ್ಲ. ನರೇಂದ್ರ ಮೋದಿ ಅವರಿಗ ವೀಸಾ ನೀಡಲು ಯಾವುದೇ ನಿಮಯ ಸಡಿಲಿಕೆ ಮಾಡುವುದಿಲ್ಲ ಎಂದು ಅಮೆರಿಕ ಸರ್ಕಾರದ ಆಡಳಿತ ವಕ್ತಾರೆ ವಿಕ್ಟೋರಿಯಾ ನ್ಯೂಲೆಂಡ್ ಹೇಳಿದ್ದಾರೆ.

'ನಮ್ಮ ವೀಸಾ ನಿಯಮಗಳಲ್ಲಿ ಯಾವುದೇ ಬದಲಾವಣೆ ಮಾಡುತ್ತಿಲ್ಲ. ಮೋದಿ ಅವರಿಗೆ ವೀಸಾ ನೀಡುವ ಬಗ್ಗೆ ಸಾಕಷ್ಟು ಮನವಿಗಳು ಬಂದಿದೆ. ಆದರೆ, ನಾವು ನಿಮಯ ಮೀರಿ ವೀಸಾ ನೀಡುವುದು ಸರಿಯಲ್ಲ' ಎಂದು ವಿಕ್ಟೋರಿಯಾ ಹೇಳಿದ್ದಾರೆ.

ಅಮೆರಿಕನ್ ಕಾಂಗ್ರೆಸ್ಸಿನ ಜೋ ವಾಲ್ಷ್ ಅವರು ಬರೆದ ಪತ್ರಕ್ಕೆ ಉತ್ತರಿಸಿದ ವಿಕ್ಟೋರಿಯಾ ಈ ರೀತಿ ಹೇಳಿದ್ದಾರೆ. ಜೋ ಅವರು ಯುಎಸ್ ಕಾರ್ಯದರ್ಶಿ ಹಿಲ್ಲರಿ ಕ್ಲಿಂಟನ್ ಅವರಿಗೆ ಪತ್ರ ಬರೆದು
2005ರಲ್ಲಿ ಅಮೆರಿಕ ಮೋದಿ ಬಗ್ಗೆ ತೆಗೆದುಕೊಂಡ ನಿಯಮವನ್ನು ಪುನರ್ ಪರಿಶೀಲಿಸುವಂತೆ ಕೋರಿದ್ದರು.

ಈ ನಡುವೆ ಇಂಡೋ ಅಮೆರಿಕನ್ ಮುಸ್ಲಿಂ ಸಮುದಾಯದವರು ಮೋದಿಗೆ ವೀಸಾ ನೀಡಬಾರದು. 2005ರ ನಿಯಮಗಳನ್ನೇ ಮುಂದುವರೆಸಿಕೊಂಡು ಹೋಗುವಂತೆ ಅಮೆರಿಕ ಸರ್ಕಾರವನ್ನು ಆಗ್ರಹಿಸಿದ್ದಾರೆ.

English summary
The US has has said there is no change in its visa policy with regard to Gujarat Chief Minister Narendra Modi. Our position on the visa issue hasn't changed at all," State Department spokesperson Victoria Nuland told reporters at her daily news conference.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X