ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದೇಶಕ್ಕೆ ತೆರಳಿದ ಸಚಿವ: ವ್ಯಾಪಕ ಆಕ್ರೋಶ

By Srinath
|
Google Oneindia Kannada News

minister-narayanaswamy-foreign-trip-criticised
ಬೆಂಗಳೂರು, ಏ. 24: ಸಚಿವ ನಾರಾಯಣಸ್ವಾಮಿ ಅವರು ಪತ್ನಿ ಮತ್ತು ಮೂವರು ಮಕ್ಕಳ ಜತೆ ಶನಿವಾರ ರಾತ್ರಿಯೇ ಇಟಲಿಗೆ ಹಾರಿದ್ದಾರೆ. ಅಲ್ಲಿಂದ ಮುಂದಕ್ಕೆ ಜರ್ಮನಿ ಮತ್ತು ಫ್ರಾನ್ಸ್ ದೇಶಗಳಿಗೂ ಭೇಟಿ ನೀಡಲಿದ್ದಾರೆ. ಒಂದು ವಾರ ಕಾಲದ ವಿದೇಶ ಪ್ರವಾಸದ ಬಳಿಕ ಏ. 28ರಂದು ಅವರು ವಾಪಸಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಚಿವರ ಜತೆಗೆ ಅಧಿಕಾರಿಗಳ ಪಟಾಲಂ ಸಹ ಇದೆ. ಸಚಿವ ನಾರಾಯಣಸ್ವಾಮಿ ಜತೆಗೆ ಮೂವರು ಅಧಿಕಾರಿಗಳೂ ವಿದೇಶ ಪ್ರವಾಸ ಭಾಗ್ಯ ಪಡೆದಿದ್ದಾರೆ. ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಕೆವಿ ರಾಜು, ಹಣಕಾಸು ಇಲಾಖೆಯ ಅಧಿಕಾರಿ ಸಿವಿ ನಾಗರಾಜು ಮತ್ತು ಮೂಲಸೌಕರ್ಯ ಇಲಾಖೆಯ ರಾಜ್ ಕುಮಾರ್ ಖತ್ರಿ ವಿಮಾನ ಹತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ಈ ಹಿಂದೆ ಸಾರ್ವಜನಿಕ ಸಭೆಗಳಲ್ಲಿ ಇದೇ ಸಚಿವರು ಹೊಣೆಗೇಡಿ ಅಧಿಕಾರಿಗಳ ಬಗ್ಗೆ ಅನೇಕ ಬಾರಿ ಅತೀವ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುಂಡಿಟ್ಟು ಕೊಲ್ಲುವಷ್ಟು ಕೋಪ ಬರುತ್ತದೆಂದು ಗುಡುಗಿದ ನಿದರ್ಶನಗಳಿವೆ. ಆದರೆ ಈಗ ಸ್ವತಃ ಜವಾಬ್ದಾರಿ ಮರೆತು ಸಂಸಾರ ಸಮೇತ ವಿದೇಶ ಪ್ರವಾಸ ಕೈಗೊಂಡಿದ್ದಾರೆ.

ಸಚಿವರು ಸ್ವಂತ ಖರ್ಚಿನಲ್ಲೇ ವಿದೇಶ ಪ್ರವಾಸಕ್ಕೆ ಹೋಗಲಿ, ಶಿಷ್ಠಾಚಾರ ಪಾಲಿಸಿ, ಮುಖ್ಯಮಂತ್ರಿಗಳ ಅನುಮತಿಯನ್ನೂ ಪಡೆದುಕೊಂಡಿರಬಹುದು. ಆದರೆ ಸ್ವತಃ ಅವರು ಉಸ್ತುವಾರಿ ಹೊತ್ತಿರುವ ಚಿಕ್ಕಬಳ್ಳಾಪುರ ಜಿಲ್ಲೆಯೇ ಬರಪೀಡಿತವಾಗಿರುವಾಗ ತಮ್ಮ ಉದ್ದೇಶಿತ ಪ್ರವಾಸವನ್ನು ರದ್ದುಗೊಳಿಸಬೇಕಾಗಿರುವುದು ನೈತಿಕತೆ ಅಲ್ಲವೇ ಎಂಬುದು ಬರಗೆಟ್ಟ ಪ್ರಶ್ನೆ.

ಸಚಿವ ನಾರಾಯಣಸ್ವಾಮಿ ಅವರ ಒಂದು ವಾರದ ವಿದೇಶ ಪ್ರವಾಸದ ಬಗ್ಗೆ ಪ್ರತಿಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

English summary
When Karnataka is under the grip of severe draught the Social & Welfare minister K.Narayanaswamy goes on to europe trip. Not only CM Sadananda Gowda showed his displeasure towards the Minister's irresponsibility but also opposition parties in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X