ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ ಬಿಎಂ, Q4 ನಿವ್ವಳ ಲಾಭ ಶೇ 29 ರಷ್ಟು ಇಳಿಕೆ

By Mahesh
|
Google Oneindia Kannada News

ಬೆಂಗಳೂರು, ಏ.24: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಂಗ ಸಂಸ್ಥೆಯಾದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ತನ್ನ ನಾಲ್ಕನೇ ತ್ರೈ ಮಾಸಿಕ ವರದಿ ಮಂಗಳವಾರ(ಏ.24) ಪ್ರಕಟಿಸಿದೆ. ನಿವ್ವಳ ಲಾಭದಲ್ಲಿ ಶೇ 29ರಷ್ಟು 116.15 ಕೋಟಿ ನಷ್ಟವಾಗಿದೆ ಎಂದು ಬ್ಯಾಂಕ್ ಹೇಳಿದೆ.

ಪ್ರಸಕ್ತ ತ್ರೈಮಾಸಿಕದಲ್ಲಿ ನಿವ್ವಳ ಲಾಭ 163.83 ಕೋಟಿ ರು ಗಳಿಸಿದೆ. ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ 1,525.16 ಕೋಟಿ ರು ಆದಾಯ ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,218.3 ಕೋಟಿ ರು ಮಾತ್ರ ಗಳಿಸಿತ್ತು.

ಮಾರ್ಚ್ 31ಕ್ಕೆ ಕೊನೆಗೊಂಡ ನಾಲ್ಕನೇ ತ್ರೈಮಾಸಿಕದಲ್ಲಿ ಬಡ್ದಿ ರೂಪದಲ್ಲಿ 1,340.02 ಕೋಟಿ ರು ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,060.80 ರು ಗಳಿಸಿತ್ತು.

ಎಸ್ ಬಿಎಂ ನಿವ್ವಳ ಲಾಭ ಶೇ 26 ರಷ್ಟು 369.15 ಕೋಟಿ ರು ನಷ್ಟೂ ಇಳಿಕೆಯಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ಇದೇ ಅವಧಿಯಲ್ಲಿ 500.6 ಕೋಟಿ ರು ಗಳಿಸಿತ್ತು.

ಒಟ್ಟಾರೆ ಆದಾಯ 5,594.82 ಕೋಟಿ ರು ಬಂದಿದೆ. ಕಳೆದ ವರ್ಷ 4,534.2 ಕೋಟಿ ರು ಗಳಿಕೆಯಾಗಿತ್ತು ಎಂದು ಎಸ್ ಬಿಎಂ ಪ್ರಕಟಿಸಿದೆ.

English summary
SBI associate State Bank of Mysore (SBM)recorded 29 pc decline in net profit at R116.15 crore in the quater(Q4) ended March 31, 2012. Total income of the bank rose to R5,594.82 crore for the year ended March, 2012
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X