ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್ ಬಂಕಿನಲ್ಲಿ ಇನ್ನು ಉಚಿತ ಗಾಳಿ ಇಲ್ಲ

By Srinath
|
Google Oneindia Kannada News

no-more-free-air-toilets-at-petrol-bunks
ಬೆಂಗಳೂರು, ಏ.24: ಪೆಟ್ರೋಲ್ ಬಂಕಿನಲ್ಲಿ ಪೆಟ್ರೋಲ್, ಡೀಸೆಲ್ ಹಾಕಿಸುವಾಗ ಇನ್ನು ಮುಂದೆ ವಾಹನಗಳಿಗೆ ಉಚಿತ ಗಾಳಿ ಸವಲತ್ತು ಇರುವುದಿಲ್ಲ. ಒಂದ್ನಿಮಿಷ ತಡೆಯಿರಿ, ಯಾವಾಗಪ್ಪಾ ಅವರು ಫ್ರೀಯಾಗಿ ಏರ್ ಹೊಡೀತಿದ್ರು ಎಂದು ತಿರುಗಿಬೀಳಬೇಡಿ.

ಆದರೆ ಅಂತ ಸೌಲಭ್ಯ ಇದ್ದಿದ್ದಂತೂ ನಿಜ. ನೀವು ಅದನ್ನು ಗಮನಿಸದೆಯೋ ಅಥವಾ ಇರ್ಲಿ ಒಂದೆಟಾಣೆ ಕಟ್ರೆ ಏನಾಗುತ್ತೆ ಅಂತ ಧಾರಾಳವಾಗಿ ದುಡ್ಡುಕೊಟ್ಟಿರಬಹುದು. ಗಮನಾರ್ಹವೆಂದರೆ Air ಜತೆಗೆ ಕುಡಿಯುವ ನೀರು, ಟಾಯ್ಲೆಟ್ ಸವಲತ್ತೂ ಇತ್ತು. ಅಯ್ಯೋ ಪೆಟ್ರೋಲ್ ತುಂಬಿಸ್ಕೋಳೋಕೆ ಟೈಮಿರಲ್ಲ. ಇನ್ನು ನಮ್ ಪೆಟ್ರೋಲ್ ಖಾಲಿ ಮಾಡೋಕ್ಕೆ ಅಲ್ಗೆಲ್ಲ ಯಾಕ್ ಹೋಗೋಣ ಅನ್ನುವವರೂ ಇದ್ದಾರೆ.

ಆದರೆ ಇನ್ನು ಮುಂದೆ ಅಂತಹ 'ಉಚಿತ' ಸೇವೆಗಳಿಗೆ ಕತ್ತರಿ ಬೀಳಲಿದೆ. ಅದೆಲ್ಲ ಬೇಕು ಅಂದರೆ ಮೊದಲು ದುಡ್ಡು ಕೊಡುವುದು ಅನಿವಾರ್ಯವಾಗಲಿದೆ. Air ಹೊಡೆಯುವ ಹುಡುಗರು ಸಿಗುವುದೇ ದುಸ್ತರ. ಸಿಕ್ಕರೂ ಅವರಿಗೆ ಸಂಬಳಗಳು ಜಾಸ್ತಿ ಕೊಡಬೇಕು. ಜತಗೆ ಪೆಟ್ರೋಲ್ ಬಂಕ್ ನಿರ್ವಹಣೆ ವೆಚ್ಚ ಹೆಚ್ಚಾಗುತ್ತಿದೆ. ಆದ್ದರಿಂದ ಪೆಟ್ರೋಲ್ ಡೀಲರುಗಳು ಇನ್ನು ಮುಂದೆ ಈ ಸೇವೆಗಳಿಗೆಲ್ಲ ಹಣ ಪೀಕಲಿದ್ದಾರೆ.

ನಗರದಲ್ಲಿ ಸುಮಾರು 875 ಪೆಟ್ರೋಲ್ ಬಂಕ್ ಗಳಿವೆ. ಆದರೆ ಈ ಸೇವೆಗಳಿಗೆ ಪೆಟ್ರೋಲಿಯಂ ಸಚಿವಾಲಯ ಸೂಕ್ತ ದರ ನಿಗದಿಪಡಿಸಬೇಕಾಗಿದೆ. ಈ ಬಗ್ಗೆ ಸಚಿವಾಲಯ ಸಮಿತಿಯನ್ನೂ ರಚಿಸಿದೆ. ಆದರೆ ಇದು ಸರಕಾರಿ ಪೆಟ್ರೋಲ್ ಬಂಕುಗಳಿಗೆ ಮಾತ್ರ ಅನ್ವಯವಾಗಲಿದೆ. ಏಕೆಂದರೆ ಖಾಸಗಿ ಪೆಟ್ರೋಲ್ ಬಂಕ್ ಡೀಲರುಗಳು ನಾಮುಂದು ತಾಮುಂದು ಸ್ಪರ್ಧೆಗೆ ಬಿದ್ದು, ಹೆಚ್ಚುವರಿ ಸೇವೆ ಒದಗಿಸಲು ಸಜ್ಜಾಗಿವೆ.

English summary
Soon there will be no free air filling facilities, drinking water or toilet facilities at petrol bunks. The escalating labour cost and expenditure that has to be borne by the petrol dealer will soon be forwarded to the consumers. There are about 875 public sector petrol bunks in and around the city that will enforce the rule after a written approval from the oil ministry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X