ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನುಭವ ಮಂಟಪ-ಆಡಳಿತ ಸೌಧ ರಾಮುಲು ಯಾತ್ರೆ

By Mahesh
|
Google Oneindia Kannada News

B Sriramulu
ಬೆಂಗಳೂರು, ಏ.22: ಬರ ಪೀಡಿತ ಪ್ರದೇಶಗಳ ಜನತೆಯೆ ಸಮಸ್ಯೆಗಳನ್ನು ಆಲಿಸಲು ಹಾಗೂ ಸಮಗ್ರ ಕರ್ನಾಟಕದ ಅಭಿವೃದ್ಧಿಯ ದೃಷ್ಟಿಯಿಂದ ಪಕ್ಷೇತರ ಶಾಸಕ ಹಾಗೂ ಮಾಜಿ ಸಚಿವ ಬಿ. ಶ್ರೀರಾಮುಲು ಏ.24ರಿಂದ ಜೂನ್ 17ರ ವರೆಗೆ 54 ದಿನಗಳ ಕಾಲ ಒಟ್ಟು 921ಕಿ.ಮೀ. ಪಾದಯಾತ್ರೆ ಕೈಗೊಳ್ಳಲಿದ್ದಾರೆ.

ಬಸವ ಜಯಂತಿ ದಿನವಾದ ಏ.24ರಂದು ಬೀದರ್ ಜಿಲ್ಲೆಯ ಬಸವ ಕಲ್ಯಾಣದಿಂದ ಪಾದಯಾತ್ರೆ ಆರಂಭ ಗೊಳ್ಳಲಿದ್ದು, ಗುಲ್ಬರ್ಗದ ಹಿರಿಯ ಸ್ವಾತಂತ್ರ ಹೋರಾಟಗಾರ ವಿದ್ಯಾಧರ ಗುರೂಜಿ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. ಗುಲ್ಬರ್ಗ, ಯಾದಗಿರಿ, ರಾಯಚೂರು, ದಾವಣಗೆರೆ, ಚಿತ್ರದುರ್ಗ, ತುಮಕೂರು ಮಾರ್ಗವಾಗಿ ಪಾದಯಾತ್ರೆ ಬೆಂಗಳೂರಿಗೆ ಆಗಮಿಸಲಿದೆ.

ಏ.24ರಂದು ಬಸವಕಲ್ಯಾಣದ ತೇರು ಮೈದಾನದಲ್ಲಿ ಬಡವರು, ಶ್ರಮಿಕರು ಹಾಗೂ ರೈತರ ಬೃಹತ್ ಸಮಾವೇಶದ ಮೂಲಕ ಪಾದಯಾತ್ರೆ ಆರಂಭಗೊಳ್ಳಲಿದೆ. ಪ್ರತಿದಿನ 17 ಕಿಲೋ ಮೀಟರ್ ಪಾದಯಾತ್ರೆ ನಡೆಯಲಿದ್ದು, ಬಡವರು, ಶ್ರಮಿಕರ ಮನೆಯಲ್ಲಿ ವಾಸ್ತವ್ಯ. ಕ್ಷೇತ್ರಗಳ ಅಭಿವೃದ್ಧಿಯನ್ನು ನಿರ್ಲಕ್ಷಿಸಿರುವ ರಾಜ್ಯ ಸರಕಾರದ ಧೋರಣೆ ಖಂಡಿಸಿ ಯಾತ್ರೆ ಕೈಗೊಳ್ಳಲಾಗಿದೆ.

ಜನ ಸಾಮಾನ್ಯರನ್ನು ಸಂಘಟಿಸಿ ಸಮಗ್ರ ಕರ್ನಾಟಕದ ಚಿಂತನೆಯನ್ನು ಜಾಗೃತಿಗೊಳಿಸುವುದು ಪಾದಯಾತ್ರೆಯ ಉದ್ದೇಶವಾಗಿದ್ದು, ಸಮಗ್ರ ಕರ್ನಾಟಕ ನಿರ್ಮಾಣಕ್ಕಾಗಿ ಅನುಭವ ಮಂಟಪದಿಂದ ಆಡಳಿತ ಸೌಧ ಬೆಂಗಳೂರಿಗೆ ಪಾದಯಾತ್ರೆ ನಡೆಸಲಾಗುತ್ತಿದೆ.

ಜೂನ್ 17ರಂದು ಬೆಂಗಳೂರು ನಗರದಲ್ಲಿ ಬೃಹತ್ ಸಮಾವೇಶ ಏರ್ಪಡಿಸಲಾಗಿದೆ. ಇದೇ ಸಂದರ್ಭ ದಲ್ಲಿ ಪರ್ಯಾಯ ರಾಜಕೀಯ ಶಕ್ತಿಯ ಕುರಿತು ಅಧಿಕೃತ ಘೋಷಣೆಯನ್ನು ಶ್ರೀರಾಮುಲು ಮಾಡಲಿದ್ದಾರೆ.

English summary
BSR party president B Sriramulu will do Padayatra from Bidar to Bangalore from Apr.24. During the total of 54 days walk B Sriramulu will cover 921km and reach Vidhanasoudha said BSR party officials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X