ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ರಾಷ್ಟ್ರೀಯ ಪಾನೀಯವಾಗಿ ಟೀ

By Mahesh
|
Google Oneindia Kannada News

Tea as national drink in India
ಅಸ್ಸಾಂ, ಏ.22: ಚಹಾ(ಟೀ)ವನ್ನು ಮುಂದಿನ ವರ್ಷದ ಏಪ್ರಿಲ್ ತಿಂಗಳಿನಿಂದ ರಾಷ್ಟ್ರೀಯ ಪಾನೀಯವಾಗಿ ಪರಿಗಣಿಸಲಾಗುವುದು ಎಂದು ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಖ್ ಸಿಂಗ್ ಅಹ್ಲುವಾಲಿಯಾ ಹೇಳಿದ್ದಾರೆ.

ಸಿಪಾಯಿ ಧಂಗೆ ನಾಯಕ, ಅಸ್ಸಾಂನಲ್ಲಿ ಮೊಟ್ಟಮೊದಲ ಚಹಾ ಬೆಳೆದ ಮಣಿರಾಮ್ ದೆವಾನ್ ಅವರ 212ನೇ ಜನ್ಮದಿನವಾದ ಏ.17ರಂದು ಟೀಯನ್ನು ರಾಷ್ಟ್ರೀಯ ಪಾನೀಯವಾಗಿ ಘೋಷಿಸಲಾಗುತ್ತದೆ ಎಂದು ಮಾಂಟೆಕ್ ಹೇಳಿದ್ದಾರೆ.

ಸಂಘಟಿತ ವಲಯದಲ್ಲಿ ಮಹಿಳೆ ನೌಕರರನ್ನು ಹೆಚ್ಚಾಗಿ ಹೊಂದಿರುವ ಟೀ ಉದ್ಯಮಕ್ಕೆ ನೀಡುವ ಉತ್ತಮ ಗೌರವ ಇದಾಗಲಿದೆ. ಮಣಿರಾಮ್ ಅವರು ಅಂದು ಆರಂಭಿಸಿದ ಚಳವಳಿ ಇಂದು ಕೋಟ್ಯಾಂತರ ಜನರನ್ನು ಸಾಕುತ್ತಿದೆ.

ಭಾರತ ಈಗ ಕಪ್ಪು ಚಹಾ ಉತ್ಪಾದನೆ ಹಾಗೂ ಗ್ರಾಹಕನಾಗಿ ಅಗ್ರಗಣ್ಯ ಸ್ಥಾನದಲ್ಲಿದೆ. ಭಾರತದಲ್ಲಿ ಶೇ.83ರಷ್ಟು ಜನ ಟೀ ಸೇವಿಸುತ್ತಾರೆ. ಕುಡಿಯುವ ನೀರಿನ ನಂತರ ಅತ್ಯಂತ ಕಡಿಮೆ ದರದಲ್ಲಿ ಸಿಗುವ ಪಾನೀಯ ಎಂದು ಚಹಾವನ್ನು ಪರಿಗಣಿಸಲಾಗುತ್ತಿದೆ.

ಕಾಫಿ ಬೆಳೆಗಾರರಂತೆ ವೈವಿಧ್ಯಮಯ ಚಹಾ ಬೆಳೆಯುವತ್ತ ಉದ್ಯಮ ಬೆಳೆಯಬೇಕು. ಮಾರುಕಟ್ಟೆಯಲ್ಲಿ 20ಕ್ಕೂ ಅಧಿಕ ಕಾಫಿ ವೆರೈಟಿ ಸಿಗುತ್ತದೆ. ಚಹಾ ವಿಷಯಕ್ಕೆ ಬಂದರೆ ಸಿಟಿಸಿ ಹಾಗೂ ಸಾಂಪ್ರದಾಯಿಕ ಶೈಲಿ ಮಾತ್ರ ಚಾಲ್ತಿಯಲ್ಲಿದೆ ಎಂದು ಅಹ್ಲುವಾಲಿಯಾ ಅಭಿಪ್ರಾಯಪಟ್ಟಿದ್ದಾರೆ.

ಆದರೆ, ಕೇವಲ ಜನಪ್ರಿಯತೆಯ ಆಧಾರದ ಮೇಲೆ ಟೀಯನ್ನು ರಾಷ್ಟ್ರೀಯ ಪಾನೀಯವಾಗಿ ಘೋಷಿಸುವುದು ಸರಿಯೇ? ಈ ಬಗ್ಗೆ ಜನಾಭಿಪ್ರಾಯ ಅಗತ್ಯವಿದೆಯೇ? ಎಂಬುದರ ಬಗ್ಗೆ ಯೋಜನಾ ಆಯೋಗ ತಲೆಕೆಡಿಸಿಕೊಂಡಿಲ್ಲ.

English summary
Planning Commission Deputy Chairman Montek Singh Ahluwalia said tea would be declared as national drink by April next year. The drink would be accorded national drink status by April 17 next year to coincide with the 212th birth anniversary of first Assamese tea planter and Sepoy Mutiny leader Maniram Dewan
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X