ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

54ರ ಚವ್ಹಾಣ್ ಮಾಡಿದ ಯಡವಟ್ಟಿಗೆ ವೇಶ್ಯೆ ಜೂಲಿ ಬಲಿ

By Prasad
|
Google Oneindia Kannada News

Prostitute's escape bid fails
ಮುಂಬೈ, ಏ. 21 : ಹೆಸರು ಸುರೇಂದ್ರ ಚವ್ಹಾಣ್. ವಯಸ್ಸು 54, ರಿಟೈರ್ಮೆಂಟಿಗೆ ಆರೇ ವರ್ಷ. ರೈಲ್ವೆ ಇಲಾಖೆಯಲ್ಲಿ ಇಂಜಿನಿಯರ್, ಕೈತುಂಬ ಸಂಬಳ. ಹೆಂಡತಿ ಮತ್ತು ಒಬ್ಬಳೇ ಮಗಳು, ಸುಖೀ ಸಂಸಾರ. ಸ್ವರ್ಗಕ್ಕೆ ಕಿಚ್ಚುಹಚ್ಚಲು ಇನ್ನೇನು ಬೇಕು? ಆದರೆ, ಈ ವಯಸ್ಸಲ್ಲಿ ಆತ ಮಾಡಿಕೊಂಡಿರುವ ಯಡವಟ್ಟು ಕೆಲಸದಿಂದಾಗಿ ಕೊಲೆ ಕೇಸಿನಲ್ಲಿ ಬಂದಿಯಾಗುವಂತೆ ಮಾಡಿದೆ.

ಮಾಡಿದ್ದೇನೆಂದರೆ, ಹೆಂಡತಿ ಮಗಳು ಇಲ್ಲದ ಸಮಯದಲ್ಲಿ ಅದೇನನ್ನಿಸಿತೋ ಏನೋ ವೇಶ್ಯೆಯೊಬ್ಬಳನ್ನು ಮನೆಗೆ ಕರೆಸಿಕೊಂಡಿದ್ದಾನೆ. ಆಕೆಯ ಹೆಸರು ಜೂಲಿ. ಜೂಲಿಯೊಡನೆ ಇನ್ನೇನು ಸರಸದಾಟಕ್ಕೆ ಇಳಿಯಬೇಕು ಎನ್ನುವಷ್ಟರಲ್ಲಿ ಅಚಾನಕ್ ಆಗಿ ಹೆಂಡತಿ ಮನೆಗೆ ಮರಳಿಬಿಟ್ಟಿದ್ದಾಳೆ. ಹೊರಗೆ ಹೆಂಡತಿ, ಒಳಗೆ ವೇಶ್ಯೆ, ಅಡಕತ್ತರಿಯಲ್ಲಿ ಚವ್ಹಾಣ್.

ಹೆಂಡತಿಯ ಆಗಮನದಿಂದ ಗಲಿಬಿಲಿಗೊಳಗಾದ ಚವ್ಹಾಣ್, ಬಾಗಿಲಿಗೆ ಒಳಗಡೆಯಿಂದ ಚಿಲುಕ ಹಾಕಿಕೊಂಡಿದ್ದಾನೆ. ಎಷ್ಟೊತ್ತಾದರೂ ಬಾಗಿಲು ತೆರೆಯದಿದ್ದರಿಂದ ಹೆಂಡತಿ ಹೊರಗಡೆಯಿಂದ ಲಾಕ್ ಮಾಡಿಕೊಂಡು ಸ್ನೇಹಿತರ ಮನೆಗೆ ಮಲಗಲು ಹೋಗಿದ್ದಾಳೆ. ಆಕೆ ಹೋದ ನಂತರ ಬಾಗಿಲು ತೆರೆಯಲು ಚವ್ಹಾಣ್ ಯತ್ನಿಸಿದಾಗ ಆಗಿಲ್ಲ. ಇನ್ನಷ್ಟು ಗೊಂದಲಕ್ಕೊಳಗಾದ ಆತ ಇನ್ನೊಂದು ಪ್ಲಾನ್ ಮಾಡಿದ.

ಬಾಲ್ಕನಿಗೆ ಬೆಡ್ ಶೀಟು, ಸೀರೆಯನ್ನು ಕಟ್ಟಿ ತಾನು ಮೊದಲು ಇಳಿದಿದ್ದಾನೆ. ಮೂರನೇ ಮಹಡಿಗೆ ಬಂದು ನೋಡಿದಾಗ ಡೋರ್ ಲಾಕ್. ಮತ್ತೆ ಕೆಳಗೆ ಇಳಿದು ಬಂದು ಜೂಲಿಗೆ ಸೀರೆ ಹಿಡಿದು ಇಳಿಯುವಂತೆ ಸೂಚಿಸಿದ್ದಾನೆ. ಆತ ಮಾಡಿ ಸಾಹಸ ತಾನೂ ಮಾಡಲು ಹೋಗಿ ಜೂಲಿ ಮೇಲಿಂದ ಬಿದ್ದು ಸತ್ತಿದ್ದಾಳೆ. ಈ ಘಟನೆ ಶುಕ್ರವಾರ ಬೆಳಗಿನ ಜಾವ 2.30ರ ಸಮಯದಲ್ಲಿ ಮುಂಬೈನ ಸೆಂಟ್ರಲ್ ರೈಲ್ವೆ ಸ್ಟಾಫ್ ಕಾಲೋನಿಯಲ್ಲಿ ನಡೆದಿದೆ. ಏನೋ ಮಾಡಲು ಹೋಗಿ ಏನು ಮಾಡಿದೆ ನೀನು ಎಂಬಂತಹ ಸ್ಥಿತಿ ಆತನದಾಗಿದೆ.

English summary
A prostitute died while fleeing from a client's place in Mumbai. An engineer had called the prostitute when his wife was away. On wife's unexpected return to home, engineer asked prostitute to escape from the third floor using saari as rope.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X